” ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡವರ ಹಿತ, ಯುವಕರಿಗೆ ಆರ್ಥಿಕ ಸಬಲೀಕರಣ, ರೈತ ಹಿತರಕ್ಷಣೆಯ ತ್ರಿವೇಣಿ ಸಂಗಮವಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೩ ಕೋಟಿ ಮನೆ ನಿರ್ಮಾಣ ಬಡವರಿಗೆ ಸ್ವಂತ ಸೂರಿನ ಕನಸನ್ನು ನನಸು ಮಾಡಿದರೆ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಮೂಲಕ ಉಚಿತ ವಿದ್ಯುತ್ ಪ್ರತಿಯೊಬ್ಬ ನಿವಾಸಿಗಳಿಗೆ ವರದಾನವಾಗಿದೆ.
ಮಹಿಳಾ ಕಲ್ಯಾಣಕ್ಕೆ ೩ ಲಕ್ಷ ಕೋಟಿ ರೂ.ಗಳ ಬೃಹತ್ ಅನುದಾನ, ಸಣ್ಣ ಕೈಗಾರಿಕಾ ಸಾಲ ಖಾತ್ರಿ ಯೋಜನೆ ಹಾಗೂ ಮುದ್ರಾ ಸಾಲ ಯೋಜನೆಯನ್ನು ೨೦ ಲಕ್ಷಕ್ಕೆ ಏರಿಕೆ, ೩೦ ಲಕ್ಷ ಯುವಕರಿಗೆ ಉದ್ಯೋಗ ಭರವಸೆ ಹೀಗೆ ಅನೇಕ ಮಹತ್ವದ ಯೋಜನೆಗಳ ಮೂಲಕ ಜನಸ್ನೇಹಿ, ಜನರ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ.”
– ಉಮೇಶ ಕಾರಜೋಳ
ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಎಸ್.ಸಿ. ಮೋರ್ಚಾ

