Author: editor.udayarashmi@gmail.com

ಬಸವನಬಾಗೇವಾಡಿ: ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೇವ ಮೂಲನಂದೀಶ್ವರ (ಬಸವೇಶ್ವರ) ಐತಿಹಾಸಿಕ ಜಾತ್ರಾಮಹೋತ್ಸವವು ಸೋಮವಾರ ಸಾಂಪ್ರದಾಯಿಕ ಮೂಲನಂದೀಶ್ವರ(ಬಸವೇಶ್ವರ) ಪಲ್ಲಕ್ಕಿ ಉತ್ಸವಕ್ಕೆ ಅಪಾರ ಜನಸ್ತೋಮದ ಬಸವ ಜಯಘೋಷದೊಂದಿಗೆ ಚಾಲನೆ ದೊರಕಿ, ಪಲ್ಲಕ್ಕಿ ಉತ್ಸವವು ಸಂಭ್ರಮ, ಸಡಗರದಿಂದ ಜರುಗಿತು.ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಮೂಲನಂದೀಶ್ವರ ದೇವರಿಗೆ ಬೆಳಗ್ಗೆ ರುದ್ರಾಭಿಷೇಕ,ರುದ್ರಾಭಿಷೇಕ ನೆರವೇರಿದ ನಂತರ ಮೂಲನಂದೀಶ್ವರ ದೇವರಿಗೆ ಜಾತ್ರಾಯಂಗವಾಗಿ ಬೆಳ್ಳಿ ಅಲಂಕಾರ ವಿಶೇಷ ಪೂಜೆಯನ್ನು ಅರ್ಚಕರಾದ ಗೌರಿಶಂಕರ ಚರಂತಿಮಠ, ವಿಶ್ವನಾಥ ಕಾಳಹಸ್ತೇಶ್ವರಮಠ ನೆರವೇರಿಸಿದರು. ಬೆಳಗಿನ ಮೂರು ಗಂಟೆಯಿಂದಲೇ ವಿವಿಧೆಡೆಗಳಿಂದ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆ, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಅಭಿಷೇಕ ಮಾಡಿಸಿ ಭಕ್ತಿಭಾವ ಸಮರ್ಪಿಸಿದರು. ಅಪಾರ ಪ್ರಮಾಣದ ಭಕ್ತರು ದೇವಸ್ಥಾನದ ಸುತ್ತಲೂ ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು. ಕೆಲವರು ದೇವರಿಗೆ ಎಲೆ ಪೂಜೆ ಮಾಡಿಸಿದರು.ಸಂಪ್ರದಾಯದಂತೆ ದೇವಸ್ಥಾನದಿಂದ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು, ಬಸವ ಭಕ್ತರು ವಿರಕ್ತಮಠಕ್ಕೆ ತೆರಳಿ ಶ್ರೀಮಠದ ಸಿದ್ದಲಿಂಗ…

Read More

ಆಲಮೇಲ: ಇಂದಿನ ಕಂಪ್ಯೂಟರ ಯುಗದಲ್ಲಿ ಯುವಜನಾಂಗ ಧರ್ಮದ ಸಂಪ್ರದಾಯ ತಿಳಿದುಕೊಳ್ಳಬೇಕು ಎಂದರೆ ಎಲ್ಲ ದೇವಸ್ಥಾನ ಗುಡಿ ಗುಂಡಾರಗಳಲ್ಲಿ ನಿರಂತರವಾಗಿ ಪುರಾಣ ಪ್ರವಚನದಂತ ಧಾರ್ಮಿಕ ಕಾರ್ಯಕ್ರಮಗಳು ನಡೆಯತ್ತಿರಬೇಕು ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ಸೋಮವಾರ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹೊಮ್ಮಿಕೊಂಡಿದ್ದ ಪುರಾಣ ಪ್ರವಚನ ನಿಮಿತ್ಯ ಸೋಮವಾರ ರೈತರ ನವ ಬಂಡಿ ಉತ್ಸವ ಹಾಗೂ ದೇವಸ್ಥಾನದ ನೂತನ ಮಹಾದ್ವಾರ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.ಧರ್ಮದ ಸಂಪ್ರದಾಯದಂತೆ ನಾವೆಲ್ಲ ನಡೆಯಬೇಕು ಎಂದರೆ ದೇವಸ್ಥಾನ ಗುಡಿ ಗುಂಡಾರಗಳಲ್ಲಿ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮಲ್ಲಿ ಪಾಲ್ಗೊಂಡು ನಮ್ಮ ಧರ್ಮದ ಪುರಾತನ ಸಂಪ್ರದಾಯ ತಿಳಿದುಕೊಂಡು ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.ಶಾಸಕ ಅಶೋಕ ಮನಗೂಳಿ ನೂತನ ಮಹಾದ್ವಾರ ಉದ್ಘಾಟಿಸಿ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ನಮ್ಮ ಧರ್ಮದ ಪುರಾತನ ಸಂಪ್ರದಾಯ ಎಂದಿಗೂ ಮರೆಯಾಗಬಾರದು. ಅದು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಭಾರತದಲ್ಲಿ ನಡೆಯುವ ಪ್ರತಿಯೊಂದು ಆಚರಣೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ಸಂಪ್ರದಾಯವನ್ನು…

Read More

ಇಂಡಿ: ನಗರದ ಅಭಿವೃದ್ಧಿಯ ಹಿತದೃಷ್ಠಿಯಿಂದ ಪುರಸಭೆ ಸದಸ್ಯರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ ಸರ್ವ ಸದಸ್ಯರಿಗೂ ಅಭಿನಂದಿಸುವುದಾಗಿ ಶಾಸಕ ಯಶವಂತ್ರಾಯಗೌಡ ಪಾಟೀಲ ತಿಳಿಸಿದರು.ಸೋಮವಾರ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಹಿನ್ನೆಲೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಹಾಗೂ ಸಮ-ಸಮಾಜದ ನಿರ್ಮಾಣದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಒಟ್ಟು ೨೩ ಪುರಸಭೆ ಸದಸ್ಯ ಹಾಗೂ ಶಾಸಕ, ಸಂಸದರು ಸೇರಿ ೨೫ ಮತಗಳಿದ್ದು, ಅದರಲ್ಲಿ ೧೫ ಮತಗಳು ಕಾಂಗ್ರೆಸ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಿಂಬಾಜಿ ರಾಠೋಡ ಉಪಾಧ್ಯಕ್ಷ ಅಭ್ಯರ್ಥಿ ಜಹಾಂಗೀರ್ ಸೌದಾಗಾರ ಆಯ್ಕೆಯಾಗಿದ್ದಾರೆ. ಈ ಗೆಲುವಿಗೆ ಪಕ್ಷದ ಸಂಘಟನೆ ಕಾರಣ ಎಂದರು.ಇನ್ನು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಮನಿರ್ದೇಶನ ಸೇರಿದಂತೆ, ಚುನಾವಣೆಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ. ಇನ್ನು ಮುಂದೆ ವಿಶೇಷವಾಗಿ ಮಾಡಲ್ ಸಿಟಿ, ಲೆಮನ್…

Read More

ಇಂಡಿ: ಹೆಚ್ಚಿನ ಸದಸ್ಯರಿದ್ದರೂ ಪುರಸಭೆ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ೮ ಸದಸ್ಯರ ಬಲ ಹೊಂದಿದ ಕಾಂಗ್ರೇಸ್ ಪಕ್ಷ ಪುರಸಭೆಯ ಗದ್ದುಗೆ ಏರಿದ್ದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.೨೩ ಸದಸ್ಯರ ಬಲ. ಓರ್ವ ಸಂಸದ, ಓರ್ವ ಶಾಸಕರ ಬಲ ಸೇರಿ ಒಟ್ಟು ೨೫ ಸಂಖ್ಯಾಬಲ ಹೊಂದಿದ ಇಂಡಿ ಪುರಸಭೆ ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೇಸ್ ತೆಕ್ಕೆಗೆ ಸೇರಿಕೊಂಡು, ಬಿಜೆಪಿಗೆ ಭಾರಿ ನಿರಾಸೆ ಅನುಭವಿಸುವಂತಾಗಿದೆ.ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸ್ಥಾನಕ್ಕೆ ಜಹಾಂಗೀರ ಸೌದಾಗರ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸಾಯಬಣ್ಣ ವಾಸುದೇವ ಮೂರಮನ್, ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ತಿಪ್ಪಣ್ಣ ಉಟಗಿ ನಾಮಪತ್ರ ಸಲ್ಲಿಸಿದ್ದರು.ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷ ಸ್ಪರ್ಧಿಗಳ ಪೈಕಿ ೧೫ ಮತಗಳು ಲಭಿಸಿದರೆ, ಬಿಜೆಪಿ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಕೇವಲ ೬ ಮತಗಳು ಲಭಿಸಿದವು. ಹೀಗಾಗಿ ಹೆಚ್ಚಿಗೆ ಮತ ಪಡೆದ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಿಂಬಾಜಿ ರಾಠೋಡ, ಉಪಾಧ್ಯಕ್ಷ…

Read More

ಇಂಡಿ ಕೊಳವೆ ಬಾವಿ ದುರಂತ | ಯಂತ್ರೋಪಕರಣಗಳ ಮಾಲಿಕರಿಗೆ ಮರೀಚಿಕೆಯಾದ ಬಾಡಿಗೆ ಹಣ – ಶಂಕರ ಜೆ ಎಮ್ಇಂಡಿ: ಭೀಮೆಯ ಗಡಿಭಾಗದ, ಪವಾಡ ಪ್ರದೇಶದಲ್ಲಿ ಇತ್ತೀಚಿಗೆ 2 ವರ್ಷದ ಮುಗ್ದ ಮಗು ಕೊಳವೆ ಬಾವಿಯಲ್ಲಿ ಬಿದ್ದಿರುವ ದುರಂತದ ಘಟನೆಯೊಂದು ನಡೆದಿದ್ದು, ಅಕ್ಷರಶಃ ನಿರವ ಮೌನದಲ್ಲಿ ಇಡೀ ರಾಜ್ಯವೇ ಮೊಳಗಿದ್ದು, ಮಗುವಿನ ಪ್ರಾಣ ರಕ್ಷಣೆಗಾಗಿ ಪ್ರಾರ್ಥನೆಯಲ್ಲಿಯೂ ಮೊಳಗಿದ್ದರು. ಆದರೆ ಇಡೀ ಜಿಲ್ಲಾಡಳಿತ‌ ಹಾಗೂ ಜನಪ್ರತಿನಿಧಿಗಳು ಸ್ಥಳದಲ್ಲೇ ಬೀಡು ಬಿಟ್ಟು ಮಗುವಿನ ಪ್ರಾಣ ರಕ್ಷಣೆಯಲ್ಲಿ ಹಗಲು ಇರಳು ನಿರಂತರವಾಗಿ 22 ಘಂಟೆ ಕಾಲ ಕಾರ್ಯಾಚಾರಣೆ‌‌ ನಡೆಸಿದ ಪರಿಣಾಮ ಆ ಮಗು ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿತ್ತು. ಅದಲ್ಲದೇ ಈ ಕಾರ್ಯಕ್ಕೆ ಜಿಲ್ಲಾ ಆಡಳಿತಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ಜನರಿಂದ ಮೆಚ್ಚುಗೆಯ ಮಹಾಪೂರ ಹಾಗೂ ಎಲ್ಲೆಲ್ಲಿಯೂ ಪ್ರಶಂಸೆ ವ್ಯಕ್ತವಾಯಿತು. ಆದರೆ ಪ್ರಾಣಪಣಕ್ಕಿಟ್ಟು ಮಗುವಿನ ರಕ್ಷಣೆಯಲ್ಲಿ ನಿರಂತರವಾಗಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಮತ್ತು ಬಹು ಮುಖ್ಯ ಪಾತ್ರವಹಿಸಿರುವ ಯಂತ್ರೋಪಕರಣಗಳು ಮಾಲಿಕರು ಇಂದಿಗೂ ಆತಂಕದಲ್ಲಿದ್ದಾರೆ. ಏನು‌ ಕಾರಣ ಗೊತ್ತಾ..?…

Read More

ದೇವರಹಿಪ್ಪರಗಿ: ಶ್ರೀಕೃಷ್ಣನ ಸಂದೇಶಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಶ್ರೀಕೃಷ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಪುಷ್ಪಾರ್ಪಣೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಅಂತೆಯೇ ಕೃಷ್ಣನನ್ನು ಪರಮಾತ್ಮನೆಂದೂ ಕರೆಯಲಾಗುತ್ತದೆ. ರಕ್ಷಣೆ, ಸಹಾನುಭೂತಿ, ಮೃದುತ್ವ ಮತ್ತು ಪ್ರೀತಿಯ ಪ್ರತೀಕರಾಗಿ ಶ್ರೀಕೃಷ್ಣ ಇಂದು ನಮ್ಮ ನಿಮ್ಮೇಲ್ಲರ ಮನೆಮನಗಳಲ್ಲಿದ್ದಾರೆ ಎಂದರು.ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ದ್ವಾಪರಯುಗದ ಹರಿಕಾರನಾಗಿ, ಅಜ್ಞಾನಕ್ಕೆ ಅರಿವು ಉಣಿಸಿ, ಅಹಂಕಾರವನ್ನು ಶಿಕ್ಷಿಸಿ ನಾನಾ ಅವತಾರಗಳನ್ನು ತಾಳಿ ಇಡೀ ಲೋಕಕ್ಕೆ ಸುಜ್ಞಾನವನ್ನು ಉಣಬಡಿಸಿದ ಶ್ರೀಕೃಷ್ಣನ ಪರಮಾತ್ಮನ ಉಪದೇಶಗಳು ನಿತ್ಯಸತ್ಯ ಎಂದರು.ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಕುಮಾರ ಅವರಾದಿ, ಕಿಶೋರ ರಾಠೋಡ, ಚನ್ನಬಸು ಹೊಸಮನಿ, ವೈ.ಜಿ.ಗಂಗಶೆಟ್ಟಿ, ಅಶೋಕ ಗೊಲ್ಲರ, ಶ್ರೀಕಾಂತ ಬಜಂತ್ರಿ ಸೇರಿದಂತೆ ಸಿಬ್ಬಂದಿ ಇದ್ದರು.

Read More

ಹುಣಶ್ಯಾಳದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಮನವಿ ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದಲ್ಲಿ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಕೂಲಿ ಕಾರ್ಮಿಕರ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ಗ್ರಾಮಸ್ಥರು ಗ್ರಾಮವ್ಯಾಪ್ತಿಯಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮೈನುದ್ದೀನ್ ಬಾಗವಾನ ಮಾತನಾಡಿ, ಗ್ರಾಮದ ನಬಿಲಾಲ ಉಸ್ತಾದ, ಬಾಬು ಉಸ್ತಾದ, ಮಕ್ತಮಸಾಬ್ ಪೋಲಾಸಿ, ಹುಸೇನಬಿ ಪೋಲಾಸಿ, ರೋಜಾಬಿ ಪೋಲಾಸಿ, ಮಲ್ಲಪ್ಪ ಬೋರಗಿ, ದಸ್ತಗೀರ್ ಉಸ್ತಾದ, ಮಾಂತಪ್ಪ ತಳವಾರ ಇವರುಗಳು ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯುವಕರು ಕುಡಿಯುವ ಚಟಕ್ಕೆ ಅಂಟಿಕೊಂಡು ಹಗಲು ರಾತ್ರಿ ಕುಡಿಯುತ್ತಿದ್ದಾರೆ. ಜೊತೆಗೆ ಹಾದಿಯಲ್ಲಿ ಹೋಗುವ ಮಹಿಳೆಯರನ್ನು ಚುಡಾಯಿಸುವುದು, ಅವಾಚ್ಯ ಶಬ್ದಗಳಿಂದ ಹೀಯಾಳಿಸುವ ಮೂಲಕ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆ ಹಾಗೂ ಕಲಕೇರಿ ಪೊಲೀಸ್ ಠಾಣೆಗೆ ಹಲವು…

Read More

ದೇವರ ಹಿಪ್ಪರಗಿ: ರಾಮತೇರ ಎಂದೇ ಪ್ರಸಿದ್ಧವಾದ ರಾಮತೀರ್ಥ ಜಾತ್ರೆ ಸಹಸ್ರಾರು ಭಕ್ತವೃಂದದ ನಡುವೆ ಭಕ್ತಿ ಭಾವದೊಂದಿಗೆ ಸಡಗರ, ಸಂಭ್ರಮದಿಂದ ಜರುಗಿತು.ಪಟ್ಟಣದ ಹತ್ತಿರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ತೀರ್ಥಕುಂಡವಿರುವ ರಾಮತೀರ್ಥ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರಕ್ಕಿಂತಲೂ ಮುಂಚಿನ ಸೋಮವಾರ ಜಾತ್ರೆ ಜರುಗುತ್ತದೆ. ಈ ಜಾತ್ರೆಯ ಅಂಗವಾಗಿ ದೇವರಹಿಪ್ಪರಗಿಯ ಕಲ್ಮೇಶ್ವರ ಹಾಗೂ ಕರಿಸಿದ್ಧೇಶ್ವರರ ಪಲ್ಲಕ್ಕಿಗಳು ಸೇರಿದಂತೆ ಸುತ್ತಮುತ್ತಲಿನ ಒಟ್ಟು ೦೯ ಗ್ರಾಮಗಳ ೨೧ ಕ್ಕೂ ಹೆಚ್ಚಿನ ದೇವರುಗಳ ಪಲ್ಲಕ್ಕಿಗಳು ಡೊಳ್ಳು, ಹಲಿಗೆ, ಕಹಳೆ ಸೇರಿ ವಿವಿಧ ವಾಧ್ಯವೃಂದ ಸಹಿತ ಸಹಸ್ರಾರು ಭಕ್ತರೊಂದಿಗೆ ಆಗಮಿಸಿದವು. ನಂತರ ಕ್ಷೇತ್ರದ ತೀರ್ಥಕುಂಡದಲ್ಲಿ ಗಂಗಾಸ್ನಾನ ಹಾಗೂ ಎಲ್ಲ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ನಂತರ ನೆರೆದ ಭಕ್ತರಿಗೆ ದರ್ಶನ ನೀಡಿದವು. ನಂತರ ಪ್ರಮುಖ ಪೂಜಾರಿಗಳಿಂದ ಭವಿಷ್ಯದ ಕುರಿತಾದ ಹೇಳಿಕೆಗಳು ಹೇಳಲ್ಪಟ್ಟವು.ಜಾತ್ರೆಯಲ್ಲಿ ಪಡಗಾನೂರಿನ ಕೆಂಚರಾಯ, ಲಗಮವ್ವ, ಶಿವಣಗಿಯ ಮಡ್ಡಿಸಿದ್ಧ, ಅಮೋಘಸಿದ್ಧ, ನಿವಾಳಖೇಡದ ಲಕ್ಷ್ಮೀ, ಕಗ್ಗೋಡದ ತಿಪ್ಪರಾಯ, ಇಂಗಳಗಿಯ ಅಮೋಘಸಿದ್ಧ ಹಾಗೂ ಮುಳಸಾವಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ದೇವರ…

Read More

ಸಿಂದಗಿ: ಗ್ರಾಹಕರ ಕಾಯ್ದೆ ೧೯೮೬ರಿಂದ ಅನುಷ್ಠಾನಗೊಂಡಿದ್ದು, ಗ್ರಾಹಕರು ಈ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಸಿಎಒಸಿವ್ಹಿಒ ಸಂಸ್ಥಾಪಕ ಮುಖ್ಯಸ್ಥ ಸೋಮಶೇಖರ ವಿ.ಕೆ ಹೇಳಿದರು.ಪಟ್ಟಣದ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಗ್ರಾಹಕ ಹಿತರಕ್ಷಣ ವೇದಿಕೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಗ್ರಾಹಕರ ಹಿತರಕ್ಷಣ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಗ್ರಾಹಕರಾಗುತ್ತಾರೆ. ಪ್ರತಿನಿತ್ಯ ಏನಾದರೂ ವಸ್ತುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಖರೀದಿಸಲಾದ ವಸ್ತು ಹಾಳಾದರೆ ನಿರಾಸೆ ಪಡದೆ ಗ್ರಾಹಕರ ವೇದಿಕೆಗೆ ದೂರು ನೀಡಬೇಕು. ವಸ್ತುಗಳನ್ನು ಖರೀದಿಸುವ ಮೊದಲು ಎಚ್ಚರಿಕೆಯಿಂದ ಇರಬೇಕು. ಯಾವುದೇ ವಸ್ತು ಖರೀದಿ ಮಾಡುವಾಗ ಐಎಸ್‌ಐ ಚಿಹ್ನೆ ಹೊಂದಿರುವುದು ಕಡ್ಡಾಯವಾಗಿ ಗಮನಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಪಿಎಸ್‌ಐ ಆರೀಫ ಮುಷಾಪುರಿ ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ರಶೀದಿ ಬಹಳ ಮುಖ್ಯವಾಗಿರುತ್ತದೆ. ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಈ ಹಕ್ಕುಗಳನ್ನು ಕಾಯಲು ಗ್ರಾಹಕರ ಹಕ್ಕುಗಳ ನ್ಯಾಯಾಲಯವಿದೆ. ಪ್ರಸ್ತುತ…

Read More

ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ೧ನೆಯ ತರಗತಿಯ ವಿದ್ಯಾರ್ಥಿನಿ ಸಾಹಿತ್ಯ ಮಹಾಂತೇಶ ನೂಲಾನವರ ಹಾಗೂ ಎಲ್‌ಕೆಜಿಯ ಪ್ರೀತಿ ರಾಧಾ ವೇಷದಲ್ಲಿ ಸಂಭ್ರಮಿಸಿದರು. ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯ್ಲಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ೩ನೆಯ ತರಗತಿಯ ವಿದ್ಯಾರ್ಥಿ ಸಾತ್ವೀಕ ಮಹಾಂತೇಶ ನೂಲಾನವರ ಶ್ರೀಕೃಷ್ಣನ ವೇಷದಲ್ಲಿ ಕಾಣಿಸಿಕೊಂಡನು.

Read More