Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ

ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ

ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ ಬಸವಣ್ಣ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪುರಾಣ ಪ್ರವಚನದಿಂದ ಸಂಪ್ರದಾಯ ಉಳಿಯಲು ಸಾಧ್ಯ :ಚಂದ್ರಶೇಖರ ಶ್ರೀ
(ರಾಜ್ಯ ) ಜಿಲ್ಲೆ

ಪುರಾಣ ಪ್ರವಚನದಿಂದ ಸಂಪ್ರದಾಯ ಉಳಿಯಲು ಸಾಧ್ಯ :ಚಂದ್ರಶೇಖರ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮೇಲ: ಇಂದಿನ ಕಂಪ್ಯೂಟರ ಯುಗದಲ್ಲಿ ಯುವಜನಾಂಗ ಧರ್ಮದ ಸಂಪ್ರದಾಯ ತಿಳಿದುಕೊಳ್ಳಬೇಕು ಎಂದರೆ ಎಲ್ಲ ದೇವಸ್ಥಾನ ಗುಡಿ ಗುಂಡಾರಗಳಲ್ಲಿ ನಿರಂತರವಾಗಿ ಪುರಾಣ ಪ್ರವಚನದಂತ ಧಾರ್ಮಿಕ ಕಾರ್ಯಕ್ರಮಗಳು ನಡೆಯತ್ತಿರಬೇಕು ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಸೋಮವಾರ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹೊಮ್ಮಿಕೊಂಡಿದ್ದ ಪುರಾಣ ಪ್ರವಚನ ನಿಮಿತ್ಯ ಸೋಮವಾರ ರೈತರ ನವ ಬಂಡಿ ಉತ್ಸವ ಹಾಗೂ ದೇವಸ್ಥಾನದ ನೂತನ ಮಹಾದ್ವಾರ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.
ಧರ್ಮದ ಸಂಪ್ರದಾಯದಂತೆ ನಾವೆಲ್ಲ ನಡೆಯಬೇಕು ಎಂದರೆ ದೇವಸ್ಥಾನ ಗುಡಿ ಗುಂಡಾರಗಳಲ್ಲಿ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮಲ್ಲಿ ಪಾಲ್ಗೊಂಡು ನಮ್ಮ ಧರ್ಮದ ಪುರಾತನ ಸಂಪ್ರದಾಯ ತಿಳಿದುಕೊಂಡು ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಶಾಸಕ ಅಶೋಕ ಮನಗೂಳಿ ನೂತನ ಮಹಾದ್ವಾರ ಉದ್ಘಾಟಿಸಿ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ನಮ್ಮ ಧರ್ಮದ ಪುರಾತನ ಸಂಪ್ರದಾಯ ಎಂದಿಗೂ ಮರೆಯಾಗಬಾರದು. ಅದು ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಭಾರತದಲ್ಲಿ ನಡೆಯುವ ಪ್ರತಿಯೊಂದು ಆಚರಣೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಿಳಿದುಕೊಳ್ಳಬೇಕು ಎಂದರೆ ಪ್ರತಿಯೊಂದು ಗ್ರಾಮದಲ್ಲಿ ದೇವಸ್ಥಾನ ಗುಡಿ ಗುಂಡಾರಗಳು ಇರಬೇಕು. ದೇವಸ್ಥಾನ ಇರುವದರಿಂದ ಧರ್ಮದ ಸಂಸ್ಕಾರ ಸಂಪ್ರದಯಾ ಬೆಳೆಯುತ್ತದೆ. ಈ ದೇಶದ ಸಂತ ಮಹಾಂತರು ಬಿಟ್ಟುಹೊದಂತ ವಿಚಾರದಾರೆಗಳು ಮುಂದುವರೆಸಿಕೊಂಡು ಹೋಗಬೇಕು ಮತ್ತು ನಮ್ಮ ಧರ್ಮದ ಸಂಪ್ರದಾಯದಂತೆ ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರೆ ಸಂಸ್ಕಾರಯುತ ಶಿಕ್ಷಣ ಅವಶ್ಯಕತೆ ಇದೆ ಎಂದು ಹೇಳಿದರು.
ಡಾ| ಶ್ರೀಶೈಲ ಪಾಟೀಲ, ಅರ್ಬನ ಬ್ಯಾಂಕ ಅಧ್ಯಕ್ಷ ಶಿವುಕುಮಾರ ಗುಂದಗಿ ಮುಂತಾದವರು ಮಾತನಾಡಿದರು.
ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ವಿರಕ್ತಮಠದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ, ಸಂಗನಬಸವ ಶಿವಾಚಾರ್ಯರು, ಗೊಳಸಾರದ ಅಭಿನವ ಪುಂಡಲಿಂಗ ಮಹಾರಜರು, ಅಳ್ಳೊಳ್ಳಿಮಠದ ಶ್ರೀಶೈಲಯ್ಯ ಮಹಾಸ್ವಾಮಿಜಿ, ಪುರಾಣ ಪ್ರವಚನಕಾರ ಪಂಚಾಕ್ಷರ ದೇವರು, ರಾಜಯೋಗಿನಿ ರೇಣುಕಾ ಅಕ್ಕನವರು ಸಾನಿದ್ಯ ವಹಿಸಿದ್ದರು.
ಡಾ| ಸಂದೀಪ ಪಾಟೀಲ, ಸುರೇಶ ಹಳ್ಳೂರ, ಡಿಎಸ್‌ಪಿ ಶರಣಬಸು ಕೊಳಾರಿ, ಸಂತೋಷ ನಂದಿ, ನಿಖಿಲ ನಂದಿ, ಆಶಿಪ್ ಬಿಳವಾರ, ಕೆಪಿಆರ್ ಶುರ‍್ಸ್ನ ಪಾರ್ಥಿಬನ, ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ ತೆಲ್ಲೂರ, ಉಪಾದ್ಯಕ್ಷ ಪ್ರಭು ವಾಲೀಕಾರ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ರವಿ ವಾರದ, ಅಪ್ಪು ಶೆಟ್ಟಿ, ಡಿ.ಎಂ. ಕೊಟ್ಟಲಗಿ, ಈರಣ್ಣ ಕಲಶೆಟ್ಟಿ ಮುಂತಾದವರು ಇದ್ದರು.
ಇದೆ ಸಂದರ್ಭದಲ್ಲಿ ದೇವಸ್ಥಾನ ಜಿರ್ಣೊದ್ದಾರಕ್ಕಾಗಿ ದನ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಿದರು.
ಗುತ್ತಿಗೇದಾರ ಮೈಬೂಬ ಮಸಳಿ ನವ ಬಂಡಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಉತ್ಸವದಲ್ಲಿ ನೂರಕ್ಕು ಹೆಚ್ಚಿನ ರೈತರು ತಮ್ಮ ಎತ್ತಿನ ಬಂಡಿ ಸಮೇತ ಪಾಲ್ಗೊಂಡಿದ್ದರು. ಬಂಡಿಯಲ್ಲಿ ಶಿವಲಿಂಗದ ಮೂರ್ತಿ ಮತ್ತು ಬಸವಣ್ಣನವರ ಬಾವಚಿತ್ರದೊಂದಿಗೆ ಸಕಲ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡಿದರು. ಈ ನವ ಬಂಡಿ ಉತ್ಸವದಲ್ಲಿ ನೂರಾರು ಮಹಿಳೆಯರು ಪೂರ್ಣ ಕುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ

ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ

ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ ಬಸವಣ್ಣ

ಕೊಲ್ಹಾರದಲ್ಲಿ ವಿಜ್ರಂಬಣೆಯ ಬಸವೇಶ್ವರ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ
    In (ರಾಜ್ಯ ) ಜಿಲ್ಲೆ
  • ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ
    In (ರಾಜ್ಯ ) ಜಿಲ್ಲೆ
  • ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ ಬಸವಣ್ಣ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ವಿಜ್ರಂಬಣೆಯ ಬಸವೇಶ್ವರ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ
    In (ರಾಜ್ಯ ) ಜಿಲ್ಲೆ
  • ಬಸವ ತತ್ವ ಸಕಲ ಶರಣರ ವಚನಗಳ ಸಾರ :ಕುಲಕರ್ಣಿ
    In (ರಾಜ್ಯ ) ಜಿಲ್ಲೆ
  • ಅಧಿಕಾರ ಯಾವಾಗಲೂ ಜನಪರವಾಗಿರಬೇಕು :ಶಾಸಕಮನಗೂಳಿ
    In (ರಾಜ್ಯ ) ಜಿಲ್ಲೆ
  • ಬಸವಣ್ಣರ ಅನುಭವ ಮಂಟಪ ಪರಿಕಲ್ಪನೆಗಳೇ ಸಂವಿಧಾನಕ್ಕೆ ತಳಹದಿ
    In (ರಾಜ್ಯ ) ಜಿಲ್ಲೆ
  • ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಚಿಂತಕ ಬಸವಣ್ಣ
    In (ರಾಜ್ಯ ) ಜಿಲ್ಲೆ
  • ಬಸವಣ್ಣ ೧೨ನೇ ಶತಮಾನದ ಕ್ರಾಂತಿಯೋಗಿ :ಬಸವರೆಡ್ಡಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.