ದೇವರ ಹಿಪ್ಪರಗಿ: ರಾಮತೇರ ಎಂದೇ ಪ್ರಸಿದ್ಧವಾದ ರಾಮತೀರ್ಥ ಜಾತ್ರೆ ಸಹಸ್ರಾರು ಭಕ್ತವೃಂದದ ನಡುವೆ ಭಕ್ತಿ ಭಾವದೊಂದಿಗೆ ಸಡಗರ, ಸಂಭ್ರಮದಿಂದ ಜರುಗಿತು.
ಪಟ್ಟಣದ ಹತ್ತಿರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ತೀರ್ಥಕುಂಡವಿರುವ ರಾಮತೀರ್ಥ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರಕ್ಕಿಂತಲೂ ಮುಂಚಿನ ಸೋಮವಾರ ಜಾತ್ರೆ ಜರುಗುತ್ತದೆ. ಈ ಜಾತ್ರೆಯ ಅಂಗವಾಗಿ ದೇವರಹಿಪ್ಪರಗಿಯ ಕಲ್ಮೇಶ್ವರ ಹಾಗೂ ಕರಿಸಿದ್ಧೇಶ್ವರರ ಪಲ್ಲಕ್ಕಿಗಳು ಸೇರಿದಂತೆ ಸುತ್ತಮುತ್ತಲಿನ ಒಟ್ಟು ೦೯ ಗ್ರಾಮಗಳ ೨೧ ಕ್ಕೂ ಹೆಚ್ಚಿನ ದೇವರುಗಳ ಪಲ್ಲಕ್ಕಿಗಳು ಡೊಳ್ಳು, ಹಲಿಗೆ, ಕಹಳೆ ಸೇರಿ ವಿವಿಧ ವಾಧ್ಯವೃಂದ ಸಹಿತ ಸಹಸ್ರಾರು ಭಕ್ತರೊಂದಿಗೆ ಆಗಮಿಸಿದವು. ನಂತರ ಕ್ಷೇತ್ರದ ತೀರ್ಥಕುಂಡದಲ್ಲಿ ಗಂಗಾಸ್ನಾನ ಹಾಗೂ ಎಲ್ಲ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ನಂತರ ನೆರೆದ ಭಕ್ತರಿಗೆ ದರ್ಶನ ನೀಡಿದವು. ನಂತರ ಪ್ರಮುಖ ಪೂಜಾರಿಗಳಿಂದ ಭವಿಷ್ಯದ ಕುರಿತಾದ ಹೇಳಿಕೆಗಳು ಹೇಳಲ್ಪಟ್ಟವು.
ಜಾತ್ರೆಯಲ್ಲಿ ಪಡಗಾನೂರಿನ ಕೆಂಚರಾಯ, ಲಗಮವ್ವ, ಶಿವಣಗಿಯ ಮಡ್ಡಿಸಿದ್ಧ, ಅಮೋಘಸಿದ್ಧ, ನಿವಾಳಖೇಡದ ಲಕ್ಷ್ಮೀ, ಕಗ್ಗೋಡದ ತಿಪ್ಪರಾಯ, ಇಂಗಳಗಿಯ ಅಮೋಘಸಿದ್ಧ ಹಾಗೂ ಮುಳಸಾವಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ದೇವರ ಪಲ್ಲಕ್ಕಿಗಳು ಸೇರಿದ್ದವು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ರಾಮಲಿಂಗೇಶ್ವರನ ಜೊತೆಗೆ ಸೇರಿದ ಎಲ್ಲ ದೇವರ ದರ್ಶನ ಪಡೆದರು. ನಂತರ ಜಾತ್ರೆಯಲ್ಲಿ ಭಜಿ, ಜಿಲೇಬಿ ಸೇರಿದಂತೆ ಪ್ರಸಾದ ಸವಿದು ನಂತರ ತಮ್ಮ ಸ್ವಸ್ಥಳಕ್ಕೆ ತೆರಳಿದರು. ಈ ಬಾರಿ ಬೆಳಿಗ್ಗೆಯಿಂದಲೇ ಜಾತ್ರೆಯ ದಿನ ಮೋಡ ಕವಿದ ವಾತಾವರಣವಿದ್ದು ನಂತರ ಮಧ್ಯಾನ್ಹ ಮತ್ತು ಸಾಯಂಕಾಲ ಮಳೆ ಆರಂಭವಾಗಿ ಭಕ್ತ ಸಮೂಹದ ಉತ್ಸಾಹಕ್ಕೆ ಭಂಗ ತಂದರೆ, ಮಕ್ಕಳು ಹಾಗೂ ಮಹಿಳೆಯರು ಹೊಸಬಟ್ಟೆಗಳೊಂದಿಗೆ ಆಗಮಿಸಿ ಖುಷಿ ಪಡಲು ಅಡ್ಡಿಯಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

