ದೇವರಹಿಪ್ಪರಗಿ: ಶ್ರೀಕೃಷ್ಣನ ಸಂದೇಶಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಶ್ರೀಕೃಷ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಪುಷ್ಪಾರ್ಪಣೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಅಂತೆಯೇ ಕೃಷ್ಣನನ್ನು ಪರಮಾತ್ಮನೆಂದೂ ಕರೆಯಲಾಗುತ್ತದೆ. ರಕ್ಷಣೆ, ಸಹಾನುಭೂತಿ, ಮೃದುತ್ವ ಮತ್ತು ಪ್ರೀತಿಯ ಪ್ರತೀಕರಾಗಿ ಶ್ರೀಕೃಷ್ಣ ಇಂದು ನಮ್ಮ ನಿಮ್ಮೇಲ್ಲರ ಮನೆಮನಗಳಲ್ಲಿದ್ದಾರೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ದ್ವಾಪರಯುಗದ ಹರಿಕಾರನಾಗಿ, ಅಜ್ಞಾನಕ್ಕೆ ಅರಿವು ಉಣಿಸಿ, ಅಹಂಕಾರವನ್ನು ಶಿಕ್ಷಿಸಿ ನಾನಾ ಅವತಾರಗಳನ್ನು ತಾಳಿ ಇಡೀ ಲೋಕಕ್ಕೆ ಸುಜ್ಞಾನವನ್ನು ಉಣಬಡಿಸಿದ ಶ್ರೀಕೃಷ್ಣನ ಪರಮಾತ್ಮನ ಉಪದೇಶಗಳು ನಿತ್ಯಸತ್ಯ ಎಂದರು.
ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಕುಮಾರ ಅವರಾದಿ, ಕಿಶೋರ ರಾಠೋಡ, ಚನ್ನಬಸು ಹೊಸಮನಿ, ವೈ.ಜಿ.ಗಂಗಶೆಟ್ಟಿ, ಅಶೋಕ ಗೊಲ್ಲರ, ಶ್ರೀಕಾಂತ ಬಜಂತ್ರಿ ಸೇರಿದಂತೆ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

