Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಡೀ ಪ್ರಪಂಚದಲ್ಲಿಯೇ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರತಕ್ಕಂತಹ ಏಕೈಕ ರಾಷ್ಟ್ರ ಭಾರತ. ಹಾಗಾಗಿ ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾರಬಾರದು ಎಂಬುದು ಭಾರತ ಸಂವಿಧಾನದ ಸ್ಪಷ್ಟವಾದ ನಿಲುವಾಗಿದೆ, ಆದರೆ ಬಿಹಾರ್ ರಾಜ್ಯದಲ್ಲಿ ಬೌದ್ಧರಲ್ಲದವರ ಅಧೀನದಲ್ಲಿರುವಬೌದ್ಧ ಗಯಾ ಬುದ್ಧ ವಿಹಾರದ ವಿಮೋಚನಾ ಸಂಕಲ್ಪಕ್ಕಾಗಿ ಬಿಹಾರದ ಪಾಟ್ನಾದಲ್ಲಿ ಸುಮಾರು 5 ಲಕ್ಷ ಬೌದ್ಧರ ಸಾರ್ವಜನಿಕ ಸಭೆ ಮತ್ತು ಶಾಂತಿಯಾತ್ರೆಗೆ ವಿಶೇಷವಾಗಿ ಸಿಂದಗಿ, ವಿಜಯಪುರ, ಮತ್ತು ಉತ್ತರ ಕರ್ನಾಟಕದಿಂದ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮತ್ತು ಎಲ್ಲಾ ದಲಿತ ಸಂಘಟನೆಗಳ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಾಗವಹಿಸಲು ಹೋಗುತ್ತಿದ್ದೇವೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ,ಧಮ್ಮ ವಿಜಯ ಬುದ್ಧ ವಿಹಾರದ ಉಪಾಸಕ ರವಿ ಹೋಳಿ ಭಂಟನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ಟಿಪಿಜೆಪಿ) ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಭಾನುವಾರ ೧೫ನೇ ದಿನಕ್ಕೆ ಕಾಲಿಟ್ಟಿದೆ.ಈ ಸಂದರ್ಭದಲ್ಲಿ ಟಿಪಿಜೆಪಿ ಆಲಮೇಲ ತಾಲೂಕಾ ಉಪಾಧ್ಯಕ್ಷರಾದ ಮಂಜುಕುಮಾರ ಕಾಂಬಳೆ ಮಾತನಾಡಿ, ಇಲ್ಲಿಯವರೆಗೂ ೧೫ ದಿನಗಳ ವರೆಗೆ ನಿರಂತರ ಶಾಂತ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದು ಇರುತ್ತದೆ. ಆದರೂ ಸರ್ಕಾರ ಸ್ಪಂದಿಸದೆ ಇರುವುದು ಸರ್ಕಾರದ ನಿಷ್ಕಾಳಜಿತನ ಎತ್ತಿ ತೋರಿಸುತ್ತದೆ. ಕೂಡಲೇ ಶೀಘ್ರವಾಗಿ ನಮ್ಮ ಹಣವನ್ನು ನಮಗೆ ಮರಳಿಸಬೇಕು ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ನಾವು ಉಗ್ರವಾದ ಹೋರಾಟ ಹಮ್ಮಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಬಾಬು ಪಟೇಲ ಬಿರಾದಾರ ಮಾತನಾಡಿ, ಸರ್ಕಾರ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬಡವರ ಮೇಲಿನ ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರಿಸುತ್ತಿರುವುದು ದುರದುಷ್ಟಕರವಾಗಿದೆ. ಆದಷ್ಟು ಬೇಗನೆ ಬಡವರ ಹಣವನ್ನು ಮರಳಿಸಿ…
ವಿಜಯಪುರದಲ್ಲಿ ಅಭಿಯಂತರ ದಿನಾಚರಣೆಗೆ ಚಾಲನೆ ನೀಡಿದ ಡಿಸಿ ಟಿ.ಭೂಬಾಲನ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್.ಎಂ.ವಿಶ್ವೇಶ್ವರಯ್ಯನವರು ಇಂಜನಿಯರಿಂಗ್ ಕ್ಷೇತ್ರದಲ್ಲಿ ಅಗಾಧ ಕೊಡುಗೆ ನೀಡಿದ ಅಪ್ರತಿಮ ಕನ್ನಡಿಗರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ ಹೇಳಿದರು.ನಗರದ ಸ್ಪೂರ್ತಿ ರೆಸಾರ್ಟ್ ಆವರಣದಲ್ಲಿ ಭಾನುವಾರ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ ಸಿವಿಲ್ ಇಂಜಿನಿಯರ್‌ಗಳ ಸಂಘ ವಿಜಯಪುರ ಅಡಿಯಲ್ಲಿ ಎಂ.ವಿಶ್ವೇಶ್ವರಯ್ಯ ಜನ್ಮದಿನವನ್ನು ಅಭಿಯಂತರ ದಿನಾಚರಣೆಯನ್ನಾಗಿ ಆಚರಣೆ ಮಾಡುವ ಸಂದರ್ಭದಲ್ಲಿ ಪಾಲ್ಗೊಂಡು ದೀಪ ಬೆಳಗಿಸಿ ಮಾತನಾಡಿದರು.ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಎಲ್ಲಾ ಅಭಿಯಂತರರಿಗೆ ಅಭಿನಂದನೆಗಳು. ವಿಕಸಿತ ಭಾರತ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಅಮೂಲ್ಯ ಎಂದರು.ಕಾರ್ಯಕ್ರಮದ ಪ್ರಾಯೋಜಕ ಜೆಎಸ್‌ಡಬ್ಲೂ ಸ್ಟೀಲ್ಸ್ನ ಅತಿಶ ಶಶಿಧರ, ಸಹಪ್ರಾಯೋಜಕ ವಿವಾ ಗ್ರೂಪ್‌ನ ಕರ್ನಾಟಕ ಭಾಗದ ಮುಖ್ಯಸ್ಥ ಗೋವಿಂದರಾಜ. ವಿ. ಅಲ್ಟಾçಟೆಕ್ ತಾಂತ್ರಿಕ ಮುಖ್ಯಸ್ಥ ಚೇತನ ತಮ್ಮ ಕಂಪನಿಗಳ ಕಾರ್ಯಕ್ಷಮತೆ, ವ್ಯಾಪ್ತಿ, ಗುಣಮಟ್ಟ, ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.ರಿಯಲ್ ಎಸ್ಟೇಟ್ ಉದ್ಯಮದ ಮಹಾವೀರ ಮೆಹತಾ, ನಿವೃತ್ತ ಕಾರ್ಯನಿರ್ವಾಹಕ ಇಂಜನೀಯರ ಎಂ.ಬಿ.ಉಳ್ಳಾಗಡ್ಡಿ, ಗುತ್ತಿಗೆದಾರ ಎಸ್.ಐ. ಡೋಣೂರಮಠ, ಬಿ.ಎಲ್.ಡಿ.ಇ ಇಂಜನಿಯರಿಂಗ್ ಕಾಲೇಜಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೆ.15 ರಂದು ಬೆಂಗಳೂರಿನ ದಿ.ಮಿಥಿಕ ಸೊಸೈಟಿ ಯವರು ಪ್ರತಿ ತಿಂಗಳ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ದಲಿತಗುರು ದಿ.ತಲಕಾಡು ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹರಿಜನ ಮಕ್ಕಳ ಶಿಕ್ಷಣಕ್ಕಾಗಿ ಹರಿಜನ ವಸತಿ ನಿಲಯವನ್ನು ಸ್ಥಾಪಿಸಿ, ಆ ಮಕ್ಕಳಿಗಾಗಿ ಆಜೀವ ಬ್ರಹ್ಮಚರ್ಯ ವ್ರತವನ್ನಚಾರಿಸಿ ದುಡಿದ ಪದ್ಮಶ್ರೀ ಗಣೇಶ ಗೋವಿಂದ ಕಾರಾಖನಿಸರ ವಿಷಯವನ್ನು ಆಧರಿಸಿ ಸಂಸದ ಗೋವಿಂದ ಎಂ. ಕಾರಜೋಳ ಅವರು ಉಪನ್ಯಾಸ ನೀಡಿದರು.ವಿಜಯಪುರದ ಸಾಕ್ಷ್ಯಚಿತ್ರ ನಿರ್ಮಾಪಕ ಮೋಹನ ಕಟ್ಟಿಮನಿ ನಿರ್ಮಿಸಿದ ಕಿರುಚಿತ್ರ ದಲಿತೋದ್ಧಾರಕ ಪದ್ಮಶ್ರೀ ಕಾಕಾ ಕಾರಖಾನಿಸರ ಟೀಸರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಸಮಗ್ರ ಕಾರ್ಯಕ್ರಮ ಕುರಿತು, ಹಿರಿಯ ಪತ್ರಕರ್ತ ವಾದಿರಾಜ ಮಾತನಾಡಿ, ಈ ತರದ ವ್ಯಕ್ತಿಗಳ ಚಿತ್ರಗಳು ಸವರ್ಣಿಯರಿಗೆ ಪ್ರೇರಣೆಯದರೆ ಬೇರೂರಿದ್ದ ಜಾತಿಯತೆಯಿಂದ ಹೊರಬರಲು ಸಾಧ್ಯವಾಗುತ್ತದೆಂದು ಹೇಳಿದರು.ಕಾಕಾ ಕಾರಾಖಾನಿಸ್ ಅವರ ಶಾಲೆಯಲ್ಲಿ ಕಲಿತ ತಮ್ಮ ಅಪರೂಪದ ಅನುಭವಗಳನ್ನು ಸಂಸದ ಕಾರಜೋಳ ಅವರು ಹಂಚಿಕೊಂಡು ಭಾವುಕರಾದರು.ಈ ಸಂದರ್ಭದಲ್ಲಿ ದಿ ಮಿಥಿ ಕ್ ಸೊಸೈಟಿಯ ಅಧ್ಯಕ್ಷರು ಅಧ್ಯಕ್ಷತೆಯ ವಹಿಸಿದ್ದರು.ಭಾಜಪ ಯುವ…
ಲಿಂಗರಾಜ ವಿವಿದೊದ್ಧೇಶ ಸಂಸ್ಥೆ & ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ.ಪಾಟೀಲ ಸಮುದಾಯ ಭವನದಲ್ಲಿ ಸೆ.೨೨ ರಂದು ಬೆಳಿಗ್ಗೆ ೧೦ ಗಂಟೆಗೆ ದಿ.ಶ್ರೀ ಲಿಂಗರಾಜ ವಿವಿದೋದ್ಧೇಶ ಸಂಸ್ಥೆ, ಶ್ರೀ ಸಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ನಿಯಮಿತ, ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಾಜದ ಮುಖಂಡ ಬಿ ಆರ್ ಪಾಟೀಲ ಸಾವಳಗಿ ಕೋರಿದರು.ವಿಜಯಪುರದ ಎಸ್.ಎಸ್. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿರಸಂಗಿ ಲಿಂಗರಾಜ ಮಹಾರಾಜರು ತ್ಯಾಗ, ದಾನಕ್ಕೆ ಇನ್ನೊಂದು ಹೆಸರು, ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕು, ಅವರ ದೂರದೃಷ್ಟಿ ಫಲವಾಗಿ ಇಂದು ಅನೇಕರು ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿದ್ದಾರೆ ಎಂದರು.ಹಿರಿಯರಾದ ಆರ್.ಎಸ್. ಜನಗೊಂಡ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ, ಪ್ರತಿಭಾನ್ವಿತರಿಗೆ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಮೂಡಿಸಿ, ನಮ್ಮ ನೆರೆಹೊರೆಯವರೊಂದಿಗೆ ಹೇಗಿರಬೇಕು, ಇತರೆ ಧರ್ಮಗಳನ್ನು ಗೌರವಿಸಿ, ಅನಾಥ ಮಕ್ಕಳಿಗೆ ಪ್ರೀತಿ ಹಂಚಲು, ಹಸಿದವರಿಗೆ ಅನ್ನ ನೀಡಲು, ತನಗೆ ಕಷ್ಟ ಕೊಟ್ಟವರನ್ನು ಕ್ಷಮಿಸಲು ತಿಳಿಸಿ ಕೊಟ್ಟ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಮುಸ್ಲಿಂ ಬಾಂಧವರು ಸೋಮವಾರ ಸಡಗರ ಸಂಭ್ರಮ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಿದರು.ಪವಿತ್ರ ಮೆಕ್ಕಾ ಮದೀನಾ ಸ್ಥಬ್ದಚಿತ್ರ ಮೆರವಣಿಗೆಗೆ ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೋಲೀಸ್ ಪಾಟೀಲ್ ಚಾಲನೆ ನೀಡಿದರು.ಹಿರೇಮಠದ ಪೀಠಾಧಿಪತಿ ಶ್ರೀ ಷ ಬ್ರ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಪ್ರಮುಖರಾದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಮಾಜಿ ತಾಪಂ ಸದಸ್ಯ ಖಾಜಾಪಟೇಲ್ ಕಾಚೂರು, ಎಸ್ ಕೆ,ಅಶೋಕ್ ಸಾಹು ಸೊನ್ನದ, ಶರಣಬಸವ ಡಿಗ್ಗಾವಿ, ಚಂದ್ರಮೌಳಿ ಮಾಲಿ ಪಾಟೀಲ್, ಪುರಸಭೆ ಸದಸ್ಯರಾದ ರವಿಶಂಕರ ಸೊನ್ನದ, ರಹಿಮಾನ್ ಪಟೇಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪಟ್ಟಣದ ಮೆಕ್ಕಾ ಮಸೀದದಿಂದ ಮುಖ್ಯ ಬಜಾರ್, ಬಸವೇಶ್ವರ ವೃತ್ತ, ಕಿತ್ತೂರು ರಾಣಿ…
’ವಾಷ್‌ಥಾನ್’ ಓಟಕ್ಕೆ ಹಸಿರು ನಿಶಾನೆ ತೋರಿದ ಸಚಿವ ಶಿವಾನಂದ ಪಾಟೀಲ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಹಾಗೂ ಸ್ವಚ್ಚತೆ ವಿಷಯವಾಗಿ ಬದ್ಧತೆ ತೋರಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಪ್ರತಿಪಾದಿಸಿದರು.ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನವದೆಹಲಿಯ ಲಾಡಲಿ ಫೌಂಡೇಷನ್ ಸಾರಥ್ಯದಲ್ಲಿ ಸ್ವಚ್ಚತೆ, ನೈರ್ಮಲ್ಯದ ಜಾಗೃತಿಗಾಗಿ ವಿಶೇಷ ಮ್ಯಾರಾಥಾನ್, ನಡಿಗೆ ಹೀಗೆ ಎಲ್ಲವನ್ನೂ ಕೇಂದ್ರಿಕರಿಸಿದ `ವಾಷ್‌ಥಾನ್’ ಹೆಸರಿನ ಓಟಕ್ಕೆ ಹಸಿರು ನಿಶಾನೆ ತೋರಿದ ಅವರು, ಮನೆ, ಸುತ್ತಮುತ್ತಲಿನ ಪರಿಸರ ಹೀಗೆ ಎಲ್ಲವೂ ಸ್ವಚ್ಛತೆಯಿಂದ ಇರಬೇಕು, ಸ್ವಚ್ಛತೆ ನಮ್ಮಬದ್ಧತೆ, ನಮ್ಮ ಆದ್ಯತೆಯಾಗಬೇಕು ಎಂದರು.ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಾಗಿರುತ್ತದೆ, ಹೀಗಾಗಿ ಅವುಗಳು ಸ್ವಚ್ಚವಾಗಿರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಸಹ ಸ್ವಚ್ಚತೆ, ಶೌಚಾಲಯ ನಿರ್ಮಾಣ ಹೀಗೆ ಅನೇಕ ರೀತಿಯ ಸ್ವಚ್ಚತೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ ಎಂದರು.ನವದೆಹಲಿಯ ಲಾಡಲಿ ಪೌಂಡೇಷನ್ ಅತ್ಯಾಧುನಿಕ ಎ.ಐ. ತಂತ್ರಜ್ಞಾನದ ಶೌಚಾಲಯಗಳನ್ನು ಜಿಲ್ಲೆಯ…
ಉದಯರಶ್ಮಿ ದಿನಪತ್ರಿಕೆ ಢವಳಗಿ: ಸಮೀಪದ ರೂಡಗಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳು ಮುದ್ದೇಬಿಹಾಳ ತಾಲ್ಲೂಕಿನ ಘಾಳಪೂಜಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬ್ಬಡ್ಡಿ ಆಟದಲ್ಲಿ ತಾಳಿಕೋಟಿ ವಲಯದ ವಿರುದ್ಧ ನಡೆದ ಪೈನಲ್ ಪಂದ್ಯದಲ್ಲಿ ಗೆದ್ದು ಮುಂದೆ ನಡೆಯುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂಗಮೇಶ ಹಾರಿವಾಳ, ಸದಸ್ಯರಾದ ಆನಂದ ರಾಠೋಡ ಹಾಗೂ ಗ್ರಾಮಸ್ಥರಾದ ಬಸವರಾಜ ದೊಡಮನಿ, ಕುಮಾರ ಸೂಳಿಬಾವಿ ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷರು, ಶ್ರೀಶೈಲ ದೊಡಮನಿ, ಶಿವಾನಂದ ಚವ್ಹಾಣ, ನಿಂಗು ಕೋಲಕಾರ, ಶಾಲೆಯ ಶಿಕ್ಷಕರಾದ ಶಿವಾನಂದ ಮುತ್ತಗಿ, ಎಮ್ ವಾಯ್ ಕಳ್ಳಿಮನಿ, ಸಾಬಣ್ಣ, ಶ್ರೀಮತಿ ಪಿ ಪಿ ಕೋಟಿ, ಗ್ರಾಮಸ್ಥರು ಸೇರಿದಂತೆ ಶಾಲೆಯ ಸಿಬ್ಬಂದಿಗಳು ಸೇರಿ ಕಬ್ಬಡಿ ಆಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೊಡನೆ ದೈಹಿಕ ಶಿಕ್ಷಕರಾದ ಸಂಜೀವ ರಾಠೋಡ ಹಾಗೂ ತಂಡದ ಮ್ಯಾನೇಜರ್ ಅನಿಲ ಚವ್ಹಾಣ ಗುರುಗಳಿಗೂ ಸನ್ಮಾನಿಸಿ,…
ಮೋರಟಗಿಯಲ್ಲಿ ಈದ್ ಮಿಲಾದ್ ಆಚರಣೆ | ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಮೊಹಮ್ಮದ ಪೈಗಂಬರ್ ಅವರು ಕುರಾನ್ ಮೂಲಕ ಪ್ರಪಂಚಕ್ಕೆ ಅಮೂಲ್ಯ ಸಂದೇಶ ನೀಡಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಇಲ್ಲಿನ ಅಂಜುಮನ್ ಎ ಇಸ್ಲಾಂ ಸಮಿತಿ ಈದ್ ಮಿಲಾದ್ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೊಹಮದ್ ಪೈಗಂಬರ್ ಅವರು ೫ನೇ ಶತಮಾನದಲ್ಲಿ ಹೇಳಿದ ಸಂದೇಶವನ್ನೇ ಬಸವಣ್ಣನವರು ೧೨ನೇ ಶತಮಾನದಲ್ಲಿ ಹೇಳಿದ್ದಾರೆ. ಇವರಿಬ್ಬರಿಗೂ ಮುನ್ನ ಗೌತಮ ಬುದ್ಧರು ಕೂಡ ತಮ್ಮ ಉಪದೇಶಗಳಲ್ಲಿ ಇದೇ ಸಂದೇಶಗಳನ್ನು ಸಾರಿದ್ದಾರೆ. ಇವರೆಲ್ಲ ಜಾತಿಗಿಂತ ಮಾನವಕುಲಕ್ಕೆ ಒತ್ತು ಕೊಟ್ಟಿದ್ದಾರೆ.ಕುರಾನ್ ನಲ್ಲಿ ದಾನ, ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಬಡವರಿಗೆ ಸಹಾಯ ಮಾಡಬೇಕು ಮತ್ತು ಇನ್ನೊಂದು ಧರ್ಮಕ್ಕೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಎಲ್ಲರೂ ಇಸ್ಲಾಂ ಧರ್ಮದ ಆಚಾರ ವಿಚಾರಗಳನ್ನು ಅನುಸರಿಸಬೇಕು ಎಂದರು.ಇಂದು ಗಣೇಶ ಉತ್ಸವವನ್ನು ಇಸ್ಲಾಂ ಬಾಂಧವರು ಕೂಡ ಆಚರಿಸುತ್ತಿದ್ದಾರೆ. ಆಲಮೇಲದಲ್ಲಿ ಮಹಿಬೂಬ್ ಮಸಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ. ಇದೇ ನಿಜವಾದ…
ಕೋರವಾರ ಮಹಾಂತೇಶ್ವರ ಹಿರೇಮಠದಲ್ಲಿ ಜರುಗಿದ ಧರ್ಮಸಭೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಎಲ್ಲ ಧರ್ಮಗಳ ತಿರುಳು ಮಾನವ ಕಲ್ಯಾಣವಾಗಿದೆ ಎಂದು ಅಫಜಲಪೂರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರಶ್ರೀಗಳು ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಮಹಾಂತೇಶ್ವರ ಹಿರೇಮಠದಲ್ಲಿ ಭಾನುವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಾವು ನುಡಿದಂತೆ ನಡೆಯುವುದೇ ಧರ್ಮ. ನುಡಿಯುವುದು ಒಂದು, ನಡೆಯುವುದು ಇನ್ನೊಂದು ಆದಾಗ ಸಮಾಜದ ಎಲ್ಲ ರಂಗಗಳಲ್ಲಿ ಅವ್ಯವಸ್ಥೆ, ಅರಾಜಕತೆ, ಅತೃಪ್ತಿಯ ಮನೋಭಾವ ಕಂಡು ಬರುತ್ತದೆ. ಇವುಗಳಿಗೆ ಧರ್ಮಸಭೆ, ಧಾರ್ಮಿಕ ಕಾರ್ಯಕ್ರಮಗಳು ಪರಿಹಾರವಾಗಿ ನೆಮ್ಮದಿ ನೀಡಬಲ್ಲವು ಎಂದರು.ಸಾನಿಧ್ಯ ವಹಿಸಿದ್ದ ಮಾಗಣಗೇರಿ ಸಂಸ್ಥಾನ ಹಿರೇಮಠದ ಡಾ.ವಿಶ್ವಾರಾಧ್ಯಶ್ರೀಗಳು ಮಾತನಾಡಿ, ಧರ್ಮ ಎನ್ನುವುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಇದ್ದ ಹಾಗೇ, ಅಂತೆಯೇ ಭೂಮಿತಾಯಿ, ಗಾಳಿ, ನೀರುಗಳಿಗೆ ಒಂದು ಧರ್ಮ ಹಾಗೂ ಜವಾಬ್ದಾರಿಯಿದೆ. ಆದ್ದರಿಂದ ನಾವು ಸಹ ನಮ್ಮ ಧರ್ಮ, ಜವಾಬ್ದಾರಿ ಅರಿತು ನಡೆಯಬೇಕು ಎಂದರು.ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಧರ್ಮಸಭೆ ಉದ್ಘಾಟಿಸಿ ಮಾತನಾಡುತ್ತಾ, ಗುರುವಿನ ಸೇವೆಯಿಂದ, ಆಶೀರ್ವಾದಿಂದ ನಾವು ಏನನ್ನಾದರೂ ಪಡೆಯಬಹುದು ಎಂದರು.ವಿಜಯಪುರ ಅನುಗ್ರಹ ಆಸ್ಪತ್ರೆಯ…
