ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೆ.15 ರಂದು ಬೆಂಗಳೂರಿನ ದಿ.ಮಿಥಿಕ ಸೊಸೈಟಿ ಯವರು ಪ್ರತಿ ತಿಂಗಳ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ದಲಿತಗುರು ದಿ.ತಲಕಾಡು ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹರಿಜನ ಮಕ್ಕಳ ಶಿಕ್ಷಣಕ್ಕಾಗಿ ಹರಿಜನ ವಸತಿ ನಿಲಯವನ್ನು ಸ್ಥಾಪಿಸಿ, ಆ ಮಕ್ಕಳಿಗಾಗಿ ಆಜೀವ ಬ್ರಹ್ಮಚರ್ಯ ವ್ರತವನ್ನಚಾರಿಸಿ ದುಡಿದ ಪದ್ಮಶ್ರೀ ಗಣೇಶ ಗೋವಿಂದ ಕಾರಾಖನಿಸರ ವಿಷಯವನ್ನು ಆಧರಿಸಿ ಸಂಸದ ಗೋವಿಂದ ಎಂ. ಕಾರಜೋಳ ಅವರು ಉಪನ್ಯಾಸ ನೀಡಿದರು.
ವಿಜಯಪುರದ ಸಾಕ್ಷ್ಯಚಿತ್ರ ನಿರ್ಮಾಪಕ ಮೋಹನ ಕಟ್ಟಿಮನಿ ನಿರ್ಮಿಸಿದ ಕಿರುಚಿತ್ರ ದಲಿತೋದ್ಧಾರಕ ಪದ್ಮಶ್ರೀ ಕಾಕಾ ಕಾರಖಾನಿಸರ ಟೀಸರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಗ್ರ ಕಾರ್ಯಕ್ರಮ ಕುರಿತು, ಹಿರಿಯ ಪತ್ರಕರ್ತ ವಾದಿರಾಜ ಮಾತನಾಡಿ, ಈ ತರದ ವ್ಯಕ್ತಿಗಳ ಚಿತ್ರಗಳು ಸವರ್ಣಿಯರಿಗೆ ಪ್ರೇರಣೆಯದರೆ ಬೇರೂರಿದ್ದ ಜಾತಿಯತೆಯಿಂದ ಹೊರಬರಲು ಸಾಧ್ಯವಾಗುತ್ತದೆಂದು ಹೇಳಿದರು.
ಕಾಕಾ ಕಾರಾಖಾನಿಸ್ ಅವರ ಶಾಲೆಯಲ್ಲಿ ಕಲಿತ ತಮ್ಮ ಅಪರೂಪದ ಅನುಭವಗಳನ್ನು ಸಂಸದ ಕಾರಜೋಳ ಅವರು ಹಂಚಿಕೊಂಡು ಭಾವುಕರಾದರು.
ಈ ಸಂದರ್ಭದಲ್ಲಿ ದಿ ಮಿಥಿ ಕ್ ಸೊಸೈಟಿಯ ಅಧ್ಯಕ್ಷರು ಅಧ್ಯಕ್ಷತೆಯ ವಹಿಸಿದ್ದರು.
ಭಾಜಪ ಯುವ ಮುಖಂಡ ಉಮೇಶ ಕಾರಜೋಳ, ಸೊಸೈಟಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

