ವಿಜಯಪುರದಲ್ಲಿ ಅಭಿಯಂತರ ದಿನಾಚರಣೆಗೆ ಚಾಲನೆ ನೀಡಿದ ಡಿಸಿ ಟಿ.ಭೂಬಾಲನ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್.ಎಂ.ವಿಶ್ವೇಶ್ವರಯ್ಯನವರು ಇಂಜನಿಯರಿಂಗ್ ಕ್ಷೇತ್ರದಲ್ಲಿ ಅಗಾಧ ಕೊಡುಗೆ ನೀಡಿದ ಅಪ್ರತಿಮ ಕನ್ನಡಿಗರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ ಹೇಳಿದರು.
ನಗರದ ಸ್ಪೂರ್ತಿ ರೆಸಾರ್ಟ್ ಆವರಣದಲ್ಲಿ ಭಾನುವಾರ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ ಸಿವಿಲ್ ಇಂಜಿನಿಯರ್‌ಗಳ ಸಂಘ ವಿಜಯಪುರ ಅಡಿಯಲ್ಲಿ ಎಂ.ವಿಶ್ವೇಶ್ವರಯ್ಯ ಜನ್ಮದಿನವನ್ನು ಅಭಿಯಂತರ ದಿನಾಚರಣೆಯನ್ನಾಗಿ ಆಚರಣೆ ಮಾಡುವ ಸಂದರ್ಭದಲ್ಲಿ ಪಾಲ್ಗೊಂಡು ದೀಪ ಬೆಳಗಿಸಿ ಮಾತನಾಡಿದರು.
ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಎಲ್ಲಾ ಅಭಿಯಂತರರಿಗೆ ಅಭಿನಂದನೆಗಳು. ವಿಕಸಿತ ಭಾರತ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಅಮೂಲ್ಯ ಎಂದರು.
ಕಾರ್ಯಕ್ರಮದ ಪ್ರಾಯೋಜಕ ಜೆಎಸ್‌ಡಬ್ಲೂ ಸ್ಟೀಲ್ಸ್ನ ಅತಿಶ ಶಶಿಧರ, ಸಹಪ್ರಾಯೋಜಕ ವಿವಾ ಗ್ರೂಪ್‌ನ ಕರ್ನಾಟಕ ಭಾಗದ ಮುಖ್ಯಸ್ಥ ಗೋವಿಂದರಾಜ. ವಿ. ಅಲ್ಟಾçಟೆಕ್ ತಾಂತ್ರಿಕ ಮುಖ್ಯಸ್ಥ ಚೇತನ ತಮ್ಮ ಕಂಪನಿಗಳ ಕಾರ್ಯಕ್ಷಮತೆ, ವ್ಯಾಪ್ತಿ, ಗುಣಮಟ್ಟ, ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ರಿಯಲ್ ಎಸ್ಟೇಟ್ ಉದ್ಯಮದ ಮಹಾವೀರ ಮೆಹತಾ, ನಿವೃತ್ತ ಕಾರ್ಯನಿರ್ವಾಹಕ ಇಂಜನೀಯರ ಎಂ.ಬಿ.ಉಳ್ಳಾಗಡ್ಡಿ, ಗುತ್ತಿಗೆದಾರ ಎಸ್.ಐ. ಡೋಣೂರಮಠ, ಬಿ.ಎಲ್.ಡಿ.ಇ ಇಂಜನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ನವೀನ ದೇಸಾಯಿ, ಸಂಘದ ಹಿರಿಯ ಸದಸ್ಯರಾದ ಗಂಗಾಧರ, ವಿಜಯಸಿಂಗ ರಜಪೂತ್ ಹಾಗೂ ಹಿರಿಯ ಪತ್ರಕರ್ತ ಗೋಪಾಲ ನಾಯಿಕ, ವಸಿ ಅಹ್ಮದ್ ಪಟೇಲ, ಸುನೀಲ ಹಿರೇಮನಿರವರನ್ನು ಸನ್ಮಾನಿಸಲಾಯಿತು.
ಅರುಣ ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಸಿ.ಆರ್.ಗಂಗಾಧರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಮಾಜಿ ಉಪಾಧ್ಯಕ್ಷ ಅಶೋಕ ರುಣವಾಲ, ಸಂಘದ ಕಾರ್ಯದರ್ಶಿ ಆಶ್ರಫ್ ಕುಡಚಿ, ಜಂಟಿ ಕಾರ್ಯದರ್ಶಿ ಅಶೋಕ ಜಮಖಂಡಿ ಸೇರಿದಂತೆ ಇತರ ಅಭಿಯಂತರರು ಇದ್ದರು.

