ಲಿಂಗರಾಜ ವಿವಿದೊದ್ಧೇಶ ಸಂಸ್ಥೆ & ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ.ಪಾಟೀಲ ಸಮುದಾಯ ಭವನದಲ್ಲಿ ಸೆ.೨೨ ರಂದು ಬೆಳಿಗ್ಗೆ ೧೦ ಗಂಟೆಗೆ ದಿ.ಶ್ರೀ ಲಿಂಗರಾಜ ವಿವಿದೋದ್ಧೇಶ ಸಂಸ್ಥೆ, ಶ್ರೀ ಸಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ನಿಯಮಿತ, ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಾಜದ ಮುಖಂಡ ಬಿ ಆರ್ ಪಾಟೀಲ ಸಾವಳಗಿ ಕೋರಿದರು.
ವಿಜಯಪುರದ ಎಸ್.ಎಸ್. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿರಸಂಗಿ ಲಿಂಗರಾಜ ಮಹಾರಾಜರು ತ್ಯಾಗ, ದಾನಕ್ಕೆ ಇನ್ನೊಂದು ಹೆಸರು, ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕು, ಅವರ ದೂರದೃಷ್ಟಿ ಫಲವಾಗಿ ಇಂದು ಅನೇಕರು ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿದ್ದಾರೆ ಎಂದರು.
ಹಿರಿಯರಾದ ಆರ್.ಎಸ್. ಜನಗೊಂಡ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ, ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡುವುದರಿಂದ ಇತರರಿಗೂ ಸ್ಪೂರ್ತಿ ದೊರಕುತ್ತದೆ, ಪ್ರತಿಭಾ ಪುರಸ್ಕಾರ ಒಂದು ಮಹತ್ವಪೂರ್ಣ ಕಾರ್ಯವಾಗಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಠದ ಶ್ರೀ ಡಾ.ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಾಪುಗೌಡ ಪಾಟೀಲ ಶೇಗುಣಸಿ, ಸುರೇಶಗೌಡ ಬಿರಾದಾರ, ಎಸ್.ಎ. ಬಿರಾದಾರ, ಪ್ರತಿಭಾ ಪಾಟೀಲ ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶಗೌಡ ಪಾಟೀಲ ತೊರವಿ, ಬಸವರಾಜ ಬಾಲಿ, ಸುನೀಲ ಬಿರಾದಾರ, ಬಿ.ಎಸ್ ಮಜ್ಜಿಗಿ, ರಾಜು ಬಿಸನಾಳ.
ಸಿದ್ದು ಕುಡುವಕ್ಕಲಿಗೆರ, ಎನ್.ಬಿ. ಬಿರಾದಾರ, ಸುನೀಲ ಗುಬ್ಬಿ, ಅನೀಲ ಕೊಟ್ಯಾಳ, ಸಿ.ಬಿ ಪಾಟೀಲ, ಅಪ್ಪು ಮಾತಾಳಿ, ವಿನೋದಕುಮಾರ ಮಣೂರ, ಎಮ್.ಎಸ್ ಟಕ್ಕಳಕಿ ಹಾಗೂ ಸಮಾಜದ ಮಹಿಳಾ ಹಾಗೂ ಪುರುಷ ನೌಕರರು & ಬಂಧುಗಳು ಉಪಸ್ಥಿತರಿದ್ದರು.

