ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಡೀ ಪ್ರಪಂಚದಲ್ಲಿಯೇ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರತಕ್ಕಂತಹ ಏಕೈಕ ರಾಷ್ಟ್ರ ಭಾರತ. ಹಾಗಾಗಿ ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾರಬಾರದು ಎಂಬುದು ಭಾರತ ಸಂವಿಧಾನದ ಸ್ಪಷ್ಟವಾದ ನಿಲುವಾಗಿದೆ, ಆದರೆ ಬಿಹಾರ್ ರಾಜ್ಯದಲ್ಲಿ ಬೌದ್ಧರಲ್ಲದವರ ಅಧೀನದಲ್ಲಿರುವ
ಬೌದ್ಧ ಗಯಾ ಬುದ್ಧ ವಿಹಾರದ ವಿಮೋಚನಾ ಸಂಕಲ್ಪಕ್ಕಾಗಿ ಬಿಹಾರದ ಪಾಟ್ನಾದಲ್ಲಿ ಸುಮಾರು 5 ಲಕ್ಷ ಬೌದ್ಧರ ಸಾರ್ವಜನಿಕ ಸಭೆ ಮತ್ತು ಶಾಂತಿಯಾತ್ರೆಗೆ ವಿಶೇಷವಾಗಿ ಸಿಂದಗಿ, ವಿಜಯಪುರ, ಮತ್ತು ಉತ್ತರ ಕರ್ನಾಟಕದಿಂದ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮತ್ತು ಎಲ್ಲಾ ದಲಿತ ಸಂಘಟನೆಗಳ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಾಗವಹಿಸಲು ಹೋಗುತ್ತಿದ್ದೇವೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ,ಧಮ್ಮ ವಿಜಯ ಬುದ್ಧ ವಿಹಾರದ ಉಪಾಸಕ ರವಿ ಹೋಳಿ ಭಂಟನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

