ಉದಯರಶ್ಮಿ ದಿನಪತ್ರಿಕೆ
ಢವಳಗಿ: ಸಮೀಪದ ರೂಡಗಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳು ಮುದ್ದೇಬಿಹಾಳ ತಾಲ್ಲೂಕಿನ ಘಾಳಪೂಜಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬ್ಬಡ್ಡಿ ಆಟದಲ್ಲಿ ತಾಳಿಕೋಟಿ ವಲಯದ ವಿರುದ್ಧ ನಡೆದ ಪೈನಲ್ ಪಂದ್ಯದಲ್ಲಿ ಗೆದ್ದು ಮುಂದೆ ನಡೆಯುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂಗಮೇಶ ಹಾರಿವಾಳ, ಸದಸ್ಯರಾದ ಆನಂದ ರಾಠೋಡ ಹಾಗೂ ಗ್ರಾಮಸ್ಥರಾದ ಬಸವರಾಜ ದೊಡಮನಿ, ಕುಮಾರ ಸೂಳಿಬಾವಿ ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷರು, ಶ್ರೀಶೈಲ ದೊಡಮನಿ, ಶಿವಾನಂದ ಚವ್ಹಾಣ, ನಿಂಗು ಕೋಲಕಾರ, ಶಾಲೆಯ ಶಿಕ್ಷಕರಾದ ಶಿವಾನಂದ ಮುತ್ತಗಿ, ಎಮ್ ವಾಯ್ ಕಳ್ಳಿಮನಿ, ಸಾಬಣ್ಣ, ಶ್ರೀಮತಿ ಪಿ ಪಿ ಕೋಟಿ, ಗ್ರಾಮಸ್ಥರು ಸೇರಿದಂತೆ ಶಾಲೆಯ ಸಿಬ್ಬಂದಿಗಳು ಸೇರಿ ಕಬ್ಬಡಿ ಆಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳೊಡನೆ ದೈಹಿಕ ಶಿಕ್ಷಕರಾದ ಸಂಜೀವ ರಾಠೋಡ ಹಾಗೂ ತಂಡದ ಮ್ಯಾನೇಜರ್ ಅನಿಲ ಚವ್ಹಾಣ ಗುರುಗಳಿಗೂ ಸನ್ಮಾನಿಸಿ, ಗೌರವಿಸಿದರು.

