Author: editor.udayarashmi@gmail.com

ಎನ್‌ಡಿಎ ಪರೀಕ್ಷೆಯಲ್ಲಿ ವಿಜಯಪುರದ ಎಕ್ಸಲೆಂಟ್ ಕಾಲೇಜ್ ವಿದ್ಯಾರ್ಥಿಗಳ ಸಾಧನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿರುವ ಕೆಲವು ಸೇವೆಗಳಿಗೆ ಬೇಕಾದಂತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಕೇಂದ್ರ ಲೋಕ ಸೇವಾ ಆಯೋಗವು ಪ್ರತಿ ವರ್ಷವು ಎನ್‌ಡಿಎ ಪರೀಕ್ಷೆಗಳನ್ನು ನಡೆಸುತ್ತದೆ. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿರುತ್ತಲಿದ್ದು ೨೦೨೪ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಮರ್ಥ ಎಸ್. ಕಲಾಲ್, ಶ್ರೀಧತ್ತಾ ದೀಕ್ಷಿತ, ಪ್ರಮೋದ ಚಾಂದಕವಟೆ, ಆದರ್ಶ ವಜ್ರವಾಡ, ಪ್ರೀತಿ ಗಿರೀಶ ಮಂಟೂರು ಸೇರಿದಂತೆ ಐದು ಜನ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಲಿಯುತ್ತಿರುವ ಕಾಲೇಜಿಗೂ ಹಾಗೂ ವಿಜಯಪುರ ಜಿಲ್ಲೆಗೂ ಕೀರ್ತಿ ತಂದಿದ್ದಾರೆ.ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹರ್ಷ ವ್ಯಕ್ತಪಡಿಸುತ್ತ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಠಿಣವಾಗರುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತಮ್ಮಲ್ಲಿನ ದೇಶಭಕ್ತಿಯನ್ನು ಪರೀಕ್ಷೆ ಎದುರಿಸುವ ಮೂಲಕ…

Read More

ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಜಯಪುರದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪನ್ನು ಗೌರವಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಮುಡಾನಲ್ಲಿ ಅಕ್ರಮವಾಗಿ 14 ಸೈಟ ಪಡೆದಿರುವುದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ‌ ಕೊಡದೆ ಪಲಾಯನ ಮಾಡಿದರು. ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯ ನಿಮಗೆ ಇಂತಹ ಘಟನೆ ಶೋಭೆ ತರುವದಿಲ್ಲ. ನೈತಿಕ ಹೊಣೆ ಹೊತ್ತಿ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ರಾಜ್ಯಪಾಲರ ವಿರುದ್ಧ ಮಾತನಾಡಿ ದಬ್ಬಾಳಿಕೆ ಮಾಡಿದ್ದೀರಿ, ಆದರೆ ಹೈಕೋರ್ಟ್ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. 30 ಗಂಟೆಗಳ ಕಾಲ ವಾದ-ವಿವಾದ ನಡೆದು ತಾವು ಪಡೆದ ಸೈಟುಗಳು ಅಕ್ರಮ ಎಂದು ತನಿಖೆ ಆದೇಶಿಸಿದೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯದ ಉಚ್ಛನ್ಯಾಯಾಲಯ ಮುಖ್ಯಮಂತ್ರಿಗಳ ವಿರುಧ್ಧ ಪ್ರಾಥಮಿಕ ತನಿಖೆಗೆ ಆದೇಶಿಸಿದ್ದು, ನ್ಯಾಯಾಲಯಕ್ಕೆ ನಾವು ಗೌರವಿಸುತ್ತೇವೆ. ಈ ಕುರಿತು ಕಾನೂನು ಹೋರಾಟದ ಜೊತೆಗೆ ರಾಜಕೀಯ ಹೋರಾಟಕ್ಕೆ ಎಲ್ಲ ೧೩೬ ಜನ ಶಾಸಕರು ಸಿದ್ದರಾಮಯ್ಯನವರೊಂದಿಗೆ ಇರುತ್ತೇವೆ ಎಂದು ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಹೇಳಿದರುಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಸರಕಾರ ಅಭದ್ರಗೊಳಿಸುವ ಷಡ್ಯಂತರ ನಡೆಸುತ್ತಿರುವ ಬಿಜೆಪಿ ನಾಯಕರ ಕಸರತ್ತು ಕರ್ನಾಟಕದಲ್ಲಿ ನಡೆಯುವುದಿಲ್ಲ, ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಅವರು ದೊಂಬರಾಟ ನಡೆಸುತ್ತಿದ್ದಾರೆ, ಆದರೆ ಅದು ಫಲಿಸುವುದಿಲ್ಲ. ವಿರೋಧ ಪಕ್ಷದ ಷಡ್ಯಂತ್ರಕ್ಕೆ ದೆಹಲಿ, ಜಾರ್ಖಂಡ್ ರಾಜ್ಯಗಳಲ್ಲಿಯೂ ಸಹ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರುಗಳು ಷಡ್ಯಂತ್ರ ರೂಪಿಸಿ ಸರಕಾರ ಅಭದ್ರಗೊಳಿಸುವ ಕಾರ್ಯ ಮಾಡಿವೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಾಗುವುದಿಲ್ಲ.ಬಿಜೆಪಿ ಸರಕಾರ ಈಡಿ, ಸಿಬಿಐ, ಐಟಿ ಇಲಾಖೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ವಿರುಧ್ಧ ಕಾರ್ಯ ಮಾಡುತ್ತಿದ್ದಾರೆ. ಈ ರಾಜ್ಯದ ಪ್ರಜ್ಞಾವಂತ ಜನ ೨೦೨೪ರಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಅರ್ಥಿಕ ಸಬಲತೆ ಉಂಟು ಮಾಡುವ ಉದ್ದೇಶದಿಂದ ಭೀಮಾಶಂಕರ ಸಹಕಾರಿ ಸೌಹಾರ್ಧ ಕಾರ್ಯ ಪ್ರವೃತ್ತವಾಗಿದೆ ಎಂದು ಶಾಸಕ ಮತ್ತು ಭೀಮಾಶಂಕರ ಸಹಕಾರಿ ಸೌಹಾರ್ಧ ಸಂಘದ ಅಧ್ಯಕ್ಷ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಭೀಮಾಶಂಕರ ಬ್ಯಾಂಕಿನ ಸದಸ್ಯೆ ಡಾ|| ಭಾರತಿ ಗಜಾಕೋಶ ಇವರ ದವಾಖಾನೆ ಆವರಣದಲ್ಲಿ ನಡೆದ ವಾರ್ಷೀಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಹಕಾರಿಯು ಅರ್ಥಿಕವಾಗಿ ಸದೃಢವಾಗಿದ್ದು, ಪ್ರಗತಿಯತ್ತ ಸಾಗುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಮತ್ತು ನೌಕರ ವರ್ಗದವರು ಠೇವಣಿದಾರರು ಕಾರಣರಾಗಿದ್ದಾರೆ. ಸಾಲವನ್ನು ಸಕಾಲಕ್ಕೆ ಮರುಪಾವತಿಸಬೇಕೆಂದರು.ಮುಖ್ಯ ವ್ಯವಸ್ಥಾಪಕ ಶ್ರೀಧರ ದೇಶಪಾಂಡೆ ಮಾತನಾಡಿ, ಬ್ಯಾಂಕು ಪ್ರಸಕ್ತ ವರ್ಷ ೬೪ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಇಂಡಿ, ವಿಜಯಪುರ, ಧೂಳಖೇಡ ಮತ್ತು ಚಡಚಣಗಳಲ್ಲಿ ಶಾಖೆಗಳನ್ನು ಹೊಂದಿದ್ದು ೬ ವರ್ಷ ೩ ತಿಂಗಳಲ್ಲಿ ಠೇವಣಿ ದ್ವಿಗುಣ ಗೊಳ್ಳುತ್ತದೆ ಎಂದರು..ಆಡಳಿತ ಮಂಡಳಿಯ ದನ್ಯಕುಮಾರ ಶಹಾ, ರಮೇಶ ಗುತ್ತೆದಾರ, ಡಾ|| ರಮೇಶ ಪೂಜಾರಿ, ಮುತ್ತು ದೇಸಾಯಿ, ಅಶೋಕ ಗಜಾಕೋಶ, ಮಹಮ್ಮದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಜೆನಿತ್- 2024 ವಾರ್ಷಿಕ ಕ್ರೀಡಾ ದಿನ ಆಚರಿಸಲಾಯಿತು.ಶ್ರೀ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಗ್ರಂಥಾಲಯ ಕಟ್ಟಡದ ಸಭಾಂಗಣದಲಿ ಕ್ರೀಡಾ ವಿಭಾಗ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಖ್ಯಾತ ಟ್ರ‍್ಯಾಕ್ ಸೈಕ್ಲಿಸ್ಟ್ ವೆಂಕಪ್ಪ ಕೆಂಗಲಗುತ್ತಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವಿವಿ ಕುಲಪತಿ ಡಾ. ಆರ್.ಎಸ್.ಮುಧೋಳ, ಕ್ರೀಡಾ ಸಮಿತಿಯ ಉಪಾಧ್ಯಕ್ಷ ಡಾ.ಗಿರೀಶ್ ಕುಳ್ಳೊಳ್ಳಿ, ವೈದ್ಯಕೀಯ ವಿಭಾಗದ ಡೀನ್ ಡಾ.ತೇಜಸ್ವಿನಿ ವಲ್ಲಭ, ಉಪಪ್ರಾಚಾರ್ಯ ಡಾ. ಎಂ.ಬಿ.ಪಾಟೀಲ, ಡಾ.ಸುಮಂಗಲಾ ಪಾಟೀಲ, ಬಿ.ಎಲ್.ಡಿ.ಇ. ಸಂಘದ ದೈಹಿಕ ಶಿಕ್ಷಣ ನಿರ್ದೇಶಕ ಎಸ್. ಎಸ್. ಕೋರಿ, ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕಿ ಡಾ. ಮಹಾದೇವಿ ವಾಲಿ,ವಿದ್ಯಾರ್ಥಿ ಪ್ರತಿನಿಧಿಗಳಾದ ಡಾ.ರುತುಜಾ ನಿಕಮ್, ಡಾ. ಎಸ್. ರಾಹುಲ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಸುಮಾರು 500 ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಂಬಾಕು ಮತ್ತು ಮಾದಕವಸ್ತು ಸೇವನೆ ಒಂದು ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ತಡೆಯಲು ಎಲ್ಲರೂ ಜಂಟಿಯಾಗಿ ಹೋರಾಟ ನಡೆಸಬೇಕಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ ಆರ್.ಎಸ್.ಮುಧೋಳ ಹೇಳಿದ್ದಾರೆ.ಮಂಗಳವಾರ ಬಿ.ಎಲ್.ಡಿ.ಈ. ವಿವಿಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಂಬಾಕು ವ್ಯಸನ ಮುಕ್ತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ತಂಬಾಕು ವ್ಯಸನ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಒಂದು ದೊಡ್ಡ ಜಾಡ್ಯವಾಗಿ ಬೆಳೆದಿದೆ. ಸರಕಾರಗಳು, ವೈದ್ಯರು ಹಾಗೂ ಬೇರೆ ಬೇರೆ ಸಂಘ- ಸಂಸ್ಥೆಗಳು ಇದನ್ನು ತಡೆಯಲು ಹೋರಾಟ ನಡೆಸಿವೆ. ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ಈಗ ದೇಶದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ತೆರೆಯಲು ನಿರ್ಧರಿಸಿವೆ. ಜನತೆಯ ಆರೋಗ್ಯದ ಬಗೆಗೆ ಸದಾ ತುಡಿಯುವ, ಅಪಾರ ಸಾಮಾಜಿಕ ಕಳಕಳಿ ಹೊಂದಿರುವ ಕೇಂದ್ರ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಓಪಿಡಿ ಸಂಖ್ಯೆ19ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿ ಪರಿಣಿತ ಆಪ್ತ ಸಲಹಾಕಾರರು, ವೈದ್ಯರು ಲಭ್ಯರುತ್ತಾರೆ. ಅಲ್ಲದೇ, ವ್ಯಸನ ತಡೆಗಟ್ಟಲು ಅಗತ್ಯವಿರುವ ತಪಾಸಣೆ…

Read More

ಉದಯರಶ್ಮಿ ದಿನಪತ್ರಿಕೆ ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಸಂಘದ 2023-24 ನೇ ಸಾಲಿನ 104ನೇ ವಾರ್ಷಿಕ ಮಹಾ ಸಭೆ ಸಂಘದ ಕಚೇರಿಯ ಆವರಣದಲ್ಲಿ ನಡೆಯಿತು.ಬ್ಯಾಂಕ್‌ನ ಅಧ್ಯಕ್ಷ ನಿಂಗಪ್ಪ ಗುಗ್ಗರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶಿವರುದ್ರಯ್ಯ ಮಠಪತಿ ಸಭೆಯ ನಡಾವಳಿ ಓದಿದರು.ಸಹಕಾರಿ ಬ್ಯಾಂಕುಗಳಿಗೆ ಠೇವಣಿದಾರರು ಹಾಗೂ ಷೇರುದಾರರು ಜೀವಾಳವಾಗಿದ್ದು, ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಿದಲ್ಲಿ ಮಾತ್ರ ಸಹಕಾರಿ ಸಂಘ ಸಂಸ್ಥೆಗಳು ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯ ಎಂದು ಉದ್ಘಾಟಿಸಿ ಬಾಬುರಾವ್ ಮಹಾರಾಜರು ಮಾತನಾಡಿದರು.ರಸಗೊಬ್ಬರ ಸೇರಿದಂತೆ ನಾನಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ಸಂಘವನ್ನು ಅಭಿವದ್ಧಿ ಪಥದತ್ತ ಸಾಗಿಸಲು ಸದಸ್ಯರು ಸೂಚಿಸಿದರು.ಸಾವಯವ ಕೃಷಿಯು ಬೆಳೆ ಉತ್ಪಾದನೆಯ ಪಶುಸಂಗೋಪನೆಯ ನಡುವೆ ಸಾಮರಸ್ಯದ ಸಮತೋಲನವನ್ನು ಸೃಷ್ಟಿಸುತ್ತದೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ಚಕ್ರಗಳ ಜೊತೆಗಿನ ಜೋಡಣೆಯನ್ನು ಸುಗಮಗೊಳಿಸುತ್ತದೆ ಎಂದು ತೆಲಸಂಗದ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಹೇಳಿದರುವೇದಿಕೆಯ ಮೇಲೆ ಕಾರ್ಯದರ್ಶಿ ದುಂಡಪ್ಪ ಗುಗ್ಗರಿ, ಹಿರಿಯರಾದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ. ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಹೊತ್ತು ಮಳೆ ಸುರಿಯಿತು. ರಾತ್ರಿ ೯ ಗಂಟೆ ಸುಮಾರಿಗೆ ಸಿಡಿಲು,ಗುಡುಗು ಅಬ್ಬರದೊಂದಿಗೆ ಆರಂಭವಾದ ಜೋರಾದ ಮಳೆ ತಡರಾತ್ರಿಯವರೆಗೂ ಸುರಿಯಿತು.ತೊಗರಿ ಬೆಳೆ ಸೇರಿದಂತೆ ವಿವಿಧ ಮುಂಗಾರು ಬೆಳೆಗಳು ಮಳೆಯ ಕೊರತೆಯಿಂದ ಬೆಳೆ ಸರಿಯಾಗಿ ಬರುವುದಿಲ್ಲ ಎಂಬ ಆತಂಕದಲ್ಲಿದ್ದ ರೈತ ಬಾಂಧವರಿಗೆ ಈ ಮಳೆಯು ಒಂದಷ್ಟು ಬೆಳೆಗಳಿಗೆ ಆಸರೆ ತಂದಿರುವದರಿಂದ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ.ಜೋರಾದ ಸುರಿದ ಮಳೆ ಪರಿಣಾಮ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ಉಕ್ಕಲಿ, ದಿಂಡವಾರ ಗ್ರಾಮದಲ್ಲಿ ತಲಾ ಒಂದೊಂದು ಕಚ್ಚಾ ಮನೆಗಳು ಭಾಗಶಃ ಕುಸಿದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ವಿವರಃ ಬಸವನಬಾಗೇವಾಡಿ ಕೇಂದ್ರದಲ್ಲಿ ೫೯ ಎಂ.ಎಂ., ಹೂವಿನಹಿಪ್ಪರಗಿ ಕೇಂದ್ರದಲ್ಲಿ ೨೪.೨ ಎಂ.ಎಂ., ಮನಗೂಳಿ ಕೇಂದ್ರದಲ್ಲಿ ೩೧.೨ ಎಂ.ಎಂ., ಆಲಮಟ್ಟಿ ಕೇಂದ್ರದಲ್ಲಿ ೭೩.೮ ಎಂ.ಎಂ, ಅರೇಶಂಕರ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಪೌರಕಾರ್ಮಿಕರು ಕಾರ್ಯನಿರ್ವಹಿಸುವಾಗ ಕಡ್ಡಾಯವಾಗಿ ಆರೋಗ್ಯ ರಕ್ಷಣಾ ಕವಚಗಳನ್ನು ಬಳಕೆ ಮಾಡುವದು ತುಂಬಾ ಅಗತ್ಯವಿದೆ ಎಂದು ಮನಗೂಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಮೂಲ್ಯವಾಗಿದೆ ಎಂದರು.ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಮನುಷ್ಯನ ಸುಖ ಜೀವನದಲ್ಲಿದೆ. ಜೀವನ ಕೆಲಸದಲ್ಲಿದೆ. ಕೆಲಸ ಯಾರ ಗೌರವವನ್ನು ತಗ್ಗಿಸುವುದಿಲ್ಲ. ಬಸವಾದಿ ಶರಣರು ಸ್ವಚ್ಛತೆಯ ಯಾವುದೇ ಕೆಲಸವನ್ನು ಮಾಡಿದರೂ ಅದಕ್ಕೆ ಕಾಯಕ ಎಂದು ಅದನ್ನು ದೈವತ್ವಕ್ಕೇರಿಸಿದರು. ಅಂತಹ ಕಾಯಕದ ಕಾಲ ಬಳಿ ಸ್ವರ್ಗವಿದೆ ಎಂದರು.ಇನ್ನೋರ್ವ ಸಾಹಿತಿ ಸಿದ್ದರಾಮ ಬಿರಾದಾರ ಮಾತನಾಡಿ, ಪೌರಕಾರ್ಮಿಕರ ಸೇವೆಯನ್ನು ಸ್ಮರಿಸುವ ಈ ದಿನ ಬಹಳ ಮಹತ್ವಪೂರ್ಣವಾಗಿದೆ ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ಭಾಗ್ಯರಾಜ ಸೊನ್ನದ ಅವರು ಪೌರಕಾರ್ಮಿಕರ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಡಾ.ಆರ್.ಕೆ.ಪತ್ತಾರ, ಶೇಖರಗೌಡ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಕಲಿಯುವುದಕ್ಕೆ ಬರುತ್ತಲಿದ್ದಾರೆ. ಆ ಗ್ರಾಮದ ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಬಸ್ಸಿನ ಸೌಕರ್ಯವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ನೂತನ ಬಸ್ಸಿಗೆ ಮಂಗಳವಾರ ವಿದ್ಯಾರ್ಥಿಗಳಿಂದಲೇ ಚಾಲನೆ ನೀಡಿಸಿ ಮಾತನಾಡಿದ ಅವರು, ಬಸ್ಸಿನ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಬೀಳುತ್ತಿದ್ದರು. ಇದನ್ನು ಅರ್ಥೈಸಿಕೊಂಡು ಆ ಗ್ರಾಮದ ಯಾವ ಮಕ್ಕಳಿಗೂ ಕಲಿಕಿಗೆ ತೊಂದರೆಯಾಗಬಾರದು ಎಂದು ನಿರ್ಧರಿಸಿ ಅವರ ಬೇಡಿಕೆಯನ್ನು ಪೂರೈಸಲು ಮುಂದಾಗಿದ್ದೇವೆ. ತಾಲೂಕಿನಲ್ಲಿ ಇನ್ನೂ ಕೆಲವು ಗ್ರಾಮಗಳಿಂದ ಸಿಂದಗಿ ನಗರಕ್ಕೆ ಶಾಲಾ ಕಾಲೇಜಿನ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಂತವುಗಳನ್ನು ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.ಇದೇ ಸಂದರ್ಭದಲ್ಲಿ ಸಿಂದಗಿ ಘಟಕ ವಿಭಾಗಿ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ, ಸಿಂದಗಿ…

Read More