ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಅರ್ಥಿಕ ಸಬಲತೆ ಉಂಟು ಮಾಡುವ ಉದ್ದೇಶದಿಂದ ಭೀಮಾಶಂಕರ ಸಹಕಾರಿ ಸೌಹಾರ್ಧ ಕಾರ್ಯ ಪ್ರವೃತ್ತವಾಗಿದೆ ಎಂದು ಶಾಸಕ ಮತ್ತು ಭೀಮಾಶಂಕರ ಸಹಕಾರಿ ಸೌಹಾರ್ಧ ಸಂಘದ ಅಧ್ಯಕ್ಷ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಭೀಮಾಶಂಕರ ಬ್ಯಾಂಕಿನ ಸದಸ್ಯೆ ಡಾ|| ಭಾರತಿ ಗಜಾಕೋಶ ಇವರ ದವಾಖಾನೆ ಆವರಣದಲ್ಲಿ ನಡೆದ ವಾರ್ಷೀಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿಯು ಅರ್ಥಿಕವಾಗಿ ಸದೃಢವಾಗಿದ್ದು, ಪ್ರಗತಿಯತ್ತ ಸಾಗುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಮತ್ತು ನೌಕರ ವರ್ಗದವರು ಠೇವಣಿದಾರರು ಕಾರಣರಾಗಿದ್ದಾರೆ. ಸಾಲವನ್ನು ಸಕಾಲಕ್ಕೆ ಮರುಪಾವತಿಸಬೇಕೆಂದರು.
ಮುಖ್ಯ ವ್ಯವಸ್ಥಾಪಕ ಶ್ರೀಧರ ದೇಶಪಾಂಡೆ ಮಾತನಾಡಿ, ಬ್ಯಾಂಕು ಪ್ರಸಕ್ತ ವರ್ಷ ೬೪ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಇಂಡಿ, ವಿಜಯಪುರ, ಧೂಳಖೇಡ ಮತ್ತು ಚಡಚಣಗಳಲ್ಲಿ ಶಾಖೆಗಳನ್ನು ಹೊಂದಿದ್ದು ೬ ವರ್ಷ ೩ ತಿಂಗಳಲ್ಲಿ ಠೇವಣಿ ದ್ವಿಗುಣ ಗೊಳ್ಳುತ್ತದೆ ಎಂದರು..
ಆಡಳಿತ ಮಂಡಳಿಯ ದನ್ಯಕುಮಾರ ಶಹಾ, ರಮೇಶ ಗುತ್ತೆದಾರ, ಡಾ|| ರಮೇಶ ಪೂಜಾರಿ, ಮುತ್ತು ದೇಸಾಯಿ, ಅಶೋಕ ಗಜಾಕೋಶ, ಮಹಮ್ಮದ ಬೇಪಾರಿ, ಡಾ|| ಭಾರತಿ ಗಜಾಕೋಶ , ಸಿಬ್ಬಂದಿ ಪ್ರದೀಪ ಬಾರಿಕಾಯಿ, ರೇವಣಸಿದ್ದ ಬೊಳೆಗಾಂವ, ಶಿವಾನಂದ ಕಟಾಯಿ, ಶೃಷ್ಠಿಕರ್ತ ಕ್ಷತ್ರಿ, ಶಂಕರಗೌಡ ಪಾಟೀಲ, ಲಕ್ಷö್ಮಣ ಶೇಡಬಾಳ,ದೀಪಾ ಬೆಲ್ಲದ, ಮಂಜುನಾಥ ವರ್ಧಮಾನ,ಜಾಕೀರ ಹುಸೇನ ಮತ್ತಿತರಿದ್ದರು.
ಇದೇ ವೇಳೆ ಅಶೋಕ ಗಜಾಕೋಶ ದಂಪತಿಗಳನ್ನು ಸನ್ಮಾನಿಸಲಾಯಿತು.

