ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಜಯಪುರದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪನ್ನು ಗೌರವಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಮುಡಾನಲ್ಲಿ ಅಕ್ರಮವಾಗಿ 14 ಸೈಟ ಪಡೆದಿರುವುದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ ಕೊಡದೆ ಪಲಾಯನ ಮಾಡಿದರು. ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯ ನಿಮಗೆ ಇಂತಹ ಘಟನೆ ಶೋಭೆ ತರುವದಿಲ್ಲ. ನೈತಿಕ ಹೊಣೆ ಹೊತ್ತಿ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯಪಾಲರ ವಿರುದ್ಧ ಮಾತನಾಡಿ ದಬ್ಬಾಳಿಕೆ ಮಾಡಿದ್ದೀರಿ, ಆದರೆ ಹೈಕೋರ್ಟ್ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. 30 ಗಂಟೆಗಳ ಕಾಲ ವಾದ-ವಿವಾದ ನಡೆದು ತಾವು ಪಡೆದ ಸೈಟುಗಳು ಅಕ್ರಮ ಎಂದು ತನಿಖೆ ಆದೇಶಿಸಿದೆ ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಹೋಗುತ್ತಿದ್ದರು ಇದೇ ಏನು ನೀವು ಸಂವಿಧಾನಕ್ಕೆ ಕಾನೂನಿಗೆ ಬೆಲೆ ಕೊಡುವ ರೀತಿ ಎಂದು ಪ್ರಶ್ನಿಸಿದರಲ್ಲದೆ, 40 ವರ್ಷಗಳ ನಿಮ್ಮ ಸುದೀರ್ಘ ರಾಜಕಿಯದಲ್ಲಿ ಹೆಗಡೆ ಪಟೇಲ್ ಅವರಂತಹ ಗರಡಿಯಲ್ಲಿ ಪಳಗಿ ರಾಜೀನಾಮೆ ನೀಡದಿರುವದು ಸಂವಿಧಾನ ವಿರೋಧಿ ಧೋರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ್, ಕಾಸುಗೌಡ ಬಿರಾದಾರ್, ಪ್ರಧಾನ ಕಾರ್ಯದರ್ಶಿಗಳಾದ ಮುಳುಗುಡ ಪಾಟೀಲ್, ಈರಣ್ಣ ರಾವೂರ್, ಸಾಬು ಮಾಶಾಳ, ಸಂಜಯ ಐಹೊಳೆ, ಉಮೇಶ ಕೋಳ್ಕೂರ್, ಗೋಪಾಲ್ ಘಟಕಾಂಬಳೆ, ಶಂಕರ್ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾದವ್, ಕರಡಿ, ಜವಹಾರ ಗೋಸಾವಿ, ರವಿಕಾಂತ ಬಗಲಿ, ಗುರುಲಿಂಗಪ್ಪ ಅಂಗಡಿ, ಮಹೇಂದ್ರ ನಾಯಕ್, ಸುರೇಶ್ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಭೀಮಾಶಂಕರ್ ಹದನೂರು, ಶೀಲವಂತ ಉಮರಾಣಿ, ಬಸವರಾಜ ಹೂಗಾರ, ಚಿದಾನಂದ ಚಲವಾದಿ, ಸಪ್ನಾ ಕಣ್ಮುಚ್ಚಿನಾಳ ಮಲ್ಲಮ್ಮ ಜೋಗುರ, ಲಕ್ಷ್ಮಿ ಕನ್ನೊಳ್ಳಿ, ಗೀತಾ ಕುಕನೂರು, ಕಾಂತು ಸಿಂಧೆ, ವಿಜಯ ಜೋಶಿ ಸೇರಿದಂತೆ ಎಲ್ಲಾ ಮಂಡಲದ ಅಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯರು, ಮಹಿಳಾ ಮೋರ್ಚಾ ಪದಾಧಿಕಾರಿ, ಯುವ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

