Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶದಲ್ಲಿ ಪ್ರತಿ ವರ್ಷ ೨೦ಸಾವಿರಕ್ಕೂ ಹೆಚ್ಚು ಜನ ಈ ರೇಬೀಸ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲೂಕಾ ಪಶುವೈದ್ಯಾಧಿಕಾರಿ ಡಾ.ಮಾರುತಿ ತಡಲಗಿ ಹೇಳಿದರು.ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ತಾಲೂಕಾ ಆರೋಗ್ಯ ಇಲಾಖೆ, ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಮತ್ತು ವಿಶ್ವ ರೇಬೀಸ್ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ರೇಬೀಸ್ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ ಶ್ವಾನಗಳಿಂದ ಕಡಿತ ಮತ್ತು ಲಾಲಾರಸದ ಸಂಪರ್ಕದಿಂದ ಮನುಷ್ಯನಿಗೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಿದುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತವೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವುದು ತಜ್ಞರ ಅಭಿಮತವಾಗಿದೆ. ಶ್ವಾನಗಳಿಂದ ಮನುಷ್ಯನಿಗೆ ರೇಬೀಸ್ ಹರಡುವುದನ್ನು ೨೦೩೦ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಜಗತ್ತಿನಲ್ಲಿಯೇ…
ಉದಯರಶ್ಮಿ ದಿನಪತ್ರಿಕೆ – ಮಹಾಂತೇಶ ನೂಲಾನವರಸಿಂದಗಿ: ಅವರೊಬ್ಬ ಸಾಮಾಜಿಕ ಸೇವಾ ಕಾರ್ಯಕರ್ತ, ಸದಾ ಸಮಾಜ ಸೇವೆಗೆ ಕಂಕಣಬದ್ದವಾದ ವ್ಯಕ್ತಿ, ತಾವಿರುವಷ್ಟು ದಿನ ಶಿಕ್ಷಣ, ಧಾರ್ಮಿಕ, ಸಮಾಜ ಸೇವೆ, ರಾಜಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಜನತೆಯ ಮನೆ ಮಾತಾದ ವ್ಯಕ್ತಿ ಅವರೇ ಡಾ.ಎಸ್.ಜಿ.ಬಮ್ಮಣ್ಣಿ. ಅಂತವರ ಹೆಸರಿನಿಂದ ನಿರ್ಮಾಣವಾದ ರಸ್ತೆಯ ನಾಮಫಲಕ ಪುರಸಭೆಯ ನಿರ್ಲಕ್ಷದಿಂದ ಮಾಯವಾಗಿರುವುದು ಖೇದಕರ. ಹೀಗಾಗಿ ಪಟ್ಟಣದ ಜನತೆ ಪುರಸಭೆ ಅಧಿಕಾರಿಗಳ ಕಾರ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಡಾ.ಸಿದ್ದಲಿಂಗಪ್ಪ ಜಿ. ಬಮ್ಮಣ್ಣಿ ಅವರು ವೃತ್ತಿಯಲ್ಲಿ ಒಬ್ಬ ವೈದ್ಯನಾಗಿ ಅವರು ಮಾಡಿದ ಸಾಮಾಜಿಕ ಸೇವೆ ನಿಜಕ್ಕೂ ಸಿಂದಗಿಯ ಜನತೆ ಇಂದಿಗೂ ಮರೆಯುವಂತಿಲ್ಲ. ಸಿಂದಗಿ ಸಾಂಸ್ಕೃತಿಕ ಕ್ಷೇತ್ರವಾಗಲು ಡಾ. ಎಸ್.ಜಿ.ಬಮ್ಮಣ್ಣಿ ಅವರ ಸೇವೆ ಅನನ್ಯ. ಕನ್ನಡ ನಾಡಿನ ಖ್ಯಾತ ಕವಿಗಳಾದ ನರಸಿಂಹಯ್ಯ, ದೇ.ಜವರೇಗೌಡರು, ಸಿದ್ದಯ್ಯ ಪುರಾಣಿಕ, ಪ್ರೋ ಸಂಗಮ, ಚಂಪಾ ಅವರಂತ ಅನೇಕ ಕವಿಗಳನ್ನು, ಸ್ವಾಮಿಜಿಗಳನ್ನು, ಕಲಾವಿದರನ್ನು ಸಿಂದಗಿಗೆ ಕರೆತಂದು ಸಿಂದಗಿಯ ಜನತೆಗೆ ಪರಿಚಯಿಸಿದವರು.೧೯೬೮ರಲ್ಲಿ ಸಿಂದಗಿಯಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿ ಅದರ ಕಾರ್ಯಧ್ಯಕ್ಷರಾಗಿ ಅದರಡಿಯಲ್ಲಿ ಬಸವ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಇಕೋ ಕ್ಲಬ್ ಅಡಿಯಲ್ಲಿ ಗೋ ಗ್ರೀನ್ ಕಾರ್ಯಕ್ರಮ ಹಾಗೂ ಪಶುಪಾಲನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯಕ ಅನಿಲಕುಮಾರ ರಾಠೋಡ ಪ್ರಾಸ್ತಾವಿಕ ಮಾತನಾಡಿ, ಲಸಿಕೆ ಕಂಡುಹಿಡಿದು ಅನೇಕ ಜೀವಗಳನ್ನು ಉಳಿಸಿದ ಲೂಯಿಸ್ ಫ್ಯಾಶ್ಚರನಂತೆ ಮಕ್ಕಳು ಸಾಧನೆ ಮಾಡುವಂತೆ ಪ್ರೇರೇಪಿಸಿದರು.ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ತಾಲೂಕಿನ ಮುಖ್ಯ ಪಶುವೈದ್ಯಧಿಕಾರಿ ಸುರೇಶ ಭಜಂತ್ರಿ ಪಶುಗಳಿಂದ ಹರಡುವ ರೋಗಗಳು, ಅವುಗಳ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ರೇಬಿಸ್ ಲಸಿಕೆ ಕಂಡು ಹಿಡಿದಂತಹ ವಿಜ್ಞಾನಿ ಲೂಯಿಸ್ ಫ್ಯಾಶ್ಚರ ಹಾಗೂ ರೇಬಿಸ್ ಕುರಿತು ಬಸವರಾಜ ಸಜ್ಜನ ಮಕ್ಕಳೊಂದಿಗೆ ಸಂವಾದ ನಡೆಸಿದರು.ಗೋಗ್ರೀನ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ೨೫ ವರ್ಷಗಳಿಗಿಂತ ಹಳೆಯದಾದ ಮರಗಳ ಬೀಜಗಳ ತರಿಸಿ, ಸಾವಯವ ಗೊಬ್ಬರ ಹಾಗೂ ಮಣ್ಣಿನಿಂದ ಬೀಜದ ಉಂಡೆ ತಯಾರಿಸಿ ತಮ್ಮ ನೆರೆಹೊರೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ. ಆ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಬಾಚೂ ತಪ್ಪದೇ ಪಾಲಿಸಿದಲ್ಲಿ ಸುಂದರ ಹಾಗೂ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಕಸ ಗುಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಗಾಂಧೀಜಿಯವರ ಸ್ವಚ್ಛ ಭಾರತ ಕಸನಿಗೆ ನಾವೆಲ್ಲರೂ ಕೈಜೋಡಿಸಬೇಕು. ಎಲ್ಲಂದರಲ್ಲಿ ಕಸ ಬಿಸಾಡುವದು, ಪರಿಸರವನ್ನು ಮಲಿನಮಾಡುವದು ಮಾಡಬಾರದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಯಾವ ರೋಗಗಳೂ ನಮ್ಮ ಬಳಿ ಸುಳಿಯಲಾರವು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪಟ್ಟಣದಲ್ಲಿ ಹಲವು ಅಂಗಡಿಯವರು ತಮ್ಮಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಕಸದ ವಿಲೇವಾರಿ ವಾಹನಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಅಭಿರಕ್ಷಕರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಉಪ ಕಾನೂನು ಅಭಿರಕ್ಷಕರು ೦೨, ಸಹಾಯಕ ಕಾನೂನು ಅಭಿರಕ್ಷಕರು ೦೫, ಕಚೇರಿ ಸಹಾಯಕರ ೦೨ ಹಾಗೂ ಕಚೇರಿ ಪ್ಯೂನ್ ೦೨ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು, ಅಕ್ಟೋಬರ್ ೦೩ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಡಿಆರ್ ಕಟ್ಟಡ, ಜಿಲ್ಲಾ ನ್ಯಾಯಾಲಗಳ ಸಂಕೀರ್ಣ ವಿಜಯಪುರ ಇವರಿಗೆ ಸಲ್ಲಿಸುವಂತೆಯೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸುವಂತೆಯೂ ಹಾಗೂ ವೆಬ್‌ಸೈಟ್ https://vijayapura.dcourts.gov.in/dlsa/ವೀಕ್ಷಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಯುವ ಸಚಿವ ಮನ್ಸುಖ್ ಮಾಂಡವಿಯಾ ರನ್ನು ಭೇಟಿಯಾದ ರಾಷ್ಟ್ರೀಯ ಯುವ ಸಲಹಾ ಸಮಿತಿ ಪದಾಧಿಕಾರಿಗಳ ನಿಯೋಗ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವುದು, ಯುವ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಸೇರಿದಂತೆ ಯುವಕರ ಶ್ರೇಯೋಭಿವೃದ್ದಿಗೆ ಸಂಬಂಧಿಸಿದ ಹಲವಾರು ಯುವಕರ ಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ರಾಷ್ಟ್ರೀಯ ಯುವ ಸಲಹಾ ಸಮಿತಿ ಪದಾಧಿಕಾರಿಗಳ ನಿಯೋಗ ಕೇಂದ್ರ ಯುವ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ನವದೆಹಲಿಯಲ್ಲಿರುವ ಶ್ರಮ ಶಕ್ತಿ ಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.ಯುವಕರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ವಿಷಯಗಳನ್ನು ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು.ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ ಅಧ್ಯಕ್ಷ ಡಾ.ಜಾವೀದ ಜಮಾದಾರ ನಿಯೋಗದ ನೇತೃತ್ವ ವಹಿಸಿದ್ದರು.ಪ್ರಶಸ್ತಿ ಪುರಸ್ಕೃತರು ತಾವು ಜಿಲ್ಲೆ ಮತ್ತು ರಾಜ್ಯಗಳಲ್ಲಿ ಸ್ವಯಂಪ್ರೇರಿತವಾಗಿ ಅನುಷ್ಠಾನಗೊಳಿಸುತ್ತಿರುವ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದರು. ಈ ಉಪಕ್ರಮಗಳು ಸರ್ಕಾರದ ಯೋಜನೆಗಳನ್ನು ಉತ್ತೇಜಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ, ವಿಶೇಷವಾಗಿ ಗ್ರಾಮೀಣ ಜನರಲ್ಲಿ ರಾಷ್ಟ್ರದ ಅಭಿವೃದ್ಧಿಯಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಸುರಿದ ಭಾರಿ ಮಳೆಯಿಂದ ಮನೆಗಳು ಬಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶನಿವಾರ ಭೇಟಿ ನೀಡಿ, ವೈಯಕ್ತಿಕವಾಗಿ ಪರಿಹಾರ ನೀಡಿದಲ್ಲದೆ, ಸ್ಲಂ ಬೋರ್ಡದಿಂದ ಆದಷ್ಟು ಶೀಘ್ರವಾಗಿ ಪ್ರತಿಯೊಬ್ಬರಿಗೂ ಮನೆಗಳನ್ನು ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮೊದಲಿಗೆ ವಾರ್ಡ ನಂ.೨೧ ರಲ್ಲಿ ಬರುವ ಇಬ್ರಾಹಿಂಪುರದ ನೀಲವ್ವ ಭಜಂತ್ರಿ, ಲಲಿತಾ ಮುತ್ತಗಿ ಹಾಗೂ ಶಶಿಕಾಂತ ಹೊಸಮನಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಈ ಪ್ರದೇಶದಲ್ಲಿ ಒಟ್ಟು ೧೨ ಮನೆಗಳು ಬಿದ್ದಿವೆ. ಈಗಾಗಲೇ ಈ ಪ್ರದೇಶ ಸ್ಲಂ ಘೋಷಣೆಯಾಗಿದ್ದು, ತಾವು ಪಾವತಿಸಬೇಕಾದ ವಂತಿಗೆ ಹಣದ ಪೈಕಿ ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ತಲಾ ರೂ.೧೦ ಸಾವಿರ ಪಾವತಿಸುವುದಾಗಿ ಭರವಸೆ ನೀಡಿದರು.ನಂತರ ವಾರ್ಡ ನಂ.೩೨ರ ಜೋರಾಪುರಪೇಟ ರಾಘವೇಂದ್ರ ಮಠದ ಹತ್ತಿರ ಹಾಗೂ ಶಾಪೇಟಿ ಓಣಿಯಲ್ಲಿ ಚಿದಂಬರ ಜೋಶಿ, ಮಾರುತಿ ಶಂಕರ ಶಿಂಧೆ, ಸುಶೀಲಾಬಾಯಿ ಬಸಪ್ಪ ಶಾಪೇಟಿ ಅವರ ಮನೆಗಳಿಗೆ ಹಾಗೂ ಭಜಂತ್ರಿ ಗಲ್ಲಿಯ ಮೋಸೋಬಾ ದೇವಸ್ಥಾನಕ್ಕೆ, ಭೇಟಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕಗ್ಗೋಡ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಸೆ.೨೮ರಂದು ಶನಿವಾರ ವಿಶ್ವ ರೇಬೀಸ್ ದಿನಾಚರಣೆ ಆಚರಿಸಲಾಯಿತು.ಈ ವೇಳೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಬಿ.ಎಸ್.ಕನಮಡಿ ಮಾತನಾಡಿ, ನಾಯಿಯು ಸ್ನೇಹಮಯಿ ಮತ್ತು ಆಜ್ಞಾಪಾಲಕ ಪ್ರಾಣಿಯಾಗಿದ್ದರೂ ಸಹ ಅದಕ್ಕೆ ರೇಬೀಸ್ ರೋಗ ತಗುಲಿದರೆ ಅದರಿಂದ ಮಾನವನ ಜೀವಕ್ಕೆ ಅಪಾಯವಿದೆ. ಕಾರಣ ನಾಯಿ ಸಾಕುವವರು ಮತ್ತು ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.ಈ ವರ್ಷ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಲ್ಲಿ ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗಿದೆ. ಅಲ್ಲದೇ ಶಾಲಾ ಮಕ್ಕಳಿಗೆ ರೇಬೀಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಡಾ.ಕನಮಡಿ ವಿವರಿಸಿದರು.ಕುಮಟಗಿ ಗ್ರಾಪಂ ಅಧ್ಯಕ್ಷ ರಮೇಶ ಸಜ್ಜನ, ಹಿರಿಯ ಪಶುವೈದ್ಯಾಧಿಕಾರಿ ಡಾ.ಬಾಳಾಸಾಹೇಬ ಬಂಡಿ ಹಾಗೂ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರಿದ್ದರು.ಈ ಸಂದರ್ಭದಲ್ಲಿ ಸುಮಾರು ೩೫ ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಯಿತು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾನತಾ ಚಳುವಳಿಯ ಬಹುಮುಖ್ಯ ಭಾಗವಾಗಿ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಜನಪರ ಗಾಯಕರು, ಹೋರಾಟದ ಹಾಡುಗಾರರು ಬಹುದೊಡ್ಡ ಕೆಲಸ ಮಾಡುತಿದ್ದಾರೆ ಎಂದು ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಭೀಮಪ್ಪ ಎ. ಹೇಳಿದರು.ಇಲ್ಲಿನ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಮೇ ಸಾಹಿತ್ಯ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಹೋರಾಟ ಹಾಡುಗಳ ತರಬೇತಿ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮೂಢನಂಬಿಕೆಗೆ ಬಲಿಯಾಗಿ ಶೋಷಣೆಗೆ ಒಳಗಾಗುತ್ತಿರುವ ಬಹುಸಂಖ್ಯಾತ ಬಡವರು ಮತ್ತು ಕೆಳವರ್ಗದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸುವ ಜವಾಬ್ದಾರಿ ಜನಪರ ಚಳವಳಿಗಾರರ ಮೇಲಿದೆ. ಆ ನಿಟ್ಟಿನಲ್ಲಿ ಜನಪರ ಗಾಯಕರು ಮತ್ತಷ್ಟು ಕೆಲಸ ಮಾಡಬೇಕು ಎಂದು ಹೇಳಿದರು.ಬಸವಧರ್ಮ ಚಿಂತಕ ಡಾ. ಜೆ.ಎಸ್. ಪಾಟೀಲ್ ಮಾತನಾಡಿ, ಬುದ್ಧ-ಬಸವ-ಅಂಬೇಡ್ಕರ್ ಅವರು ಸಮಾನತೆಗಾಗಿ ಸಂಘರ್ಷ ಮಾಡಿದ್ದಾರೆ. ಸಂವಿಧಾನ ಜಾರಿಯಾಗಿ ೭೫ ವರ್ಷಗಳ ನಂತರವೂ ಲಿಂಗ ತಾರತಮ್ಯ, ಅಸ್ಪೃಶ್ಯತೆ ಆಚರಣೆ ಅಬಾಧಿತವಾಗಿ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಪರ ಹೋರಾಟಗಾರರು, ಹಾಡುಗಾರರು ಹೆಚ್ಚು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಡಾವಣೆ ಸುಕೂನ್ ಹಾಗೂ sancity ಬಡಾವಣೆಯಲ್ಲಿ ಶನಿವಾರ ಅಪ್ರತಿಮ ರಾಷ್ಟ್ರಪುರುಷ, ಸ್ವತಂತ್ರ ಹೋರಾಟಗಾರ, ಶಹೀದ್ ಭಗತ್ ಸಿಂಗ್ ಅವರ ಜನ್ಮದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶರಣು ಮಸೂತಿ, ದಯಾನಂದ ಕೇಲೂರ್, ವಿಜಯಕುಮಾರ, ರಾಘವ ಅಣ್ಣಿಗೇರಿ, ರಾಜಶೇಖರ್ ಕವಲಗಿ, ರಾಜು ಚವಾನ, ಅಶೋಕ್ ಮನಳ್ಳಿ, ಶೆಟ್ಟಿ, ಬಸು ಬೈಚಬಾಳ, ಪ್ರವೀಣ್ ಕೂಡಗಿ, ಪ್ರಕಾಶ್ ಸಿದ್ದಾಪುರ, ಸಿದ್ದು ಕುಂಬಾರ್, ಸಿ ವಿ ಪಾಟೀಲ್, ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು.
