Author: editor.udayarashmi@gmail.com

ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಆಸಕ್ತ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ, ಸಿಖ್ಕಲಿಗಾರ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಪ್ರೋತ್ಸಾಹ ಯೋಜನೆಯಡಿ ಸಾಲ-ಸೌಲಭ್ಯ ಪಡೆಯಲಿಚ್ಚಿಸುವವರು ನಿಗಮದ ವೆಬ್‌ಸೈಟ್ https://kmdconline.karnataka.gov.in/ನಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ದಿನಾಂಕ: ೩೧-೦೮-೨೦೨೪ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಮೌಲಾನಾ ಆಝಾದ ಭವನದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: ೦೮೩೫೨-೨೭೯೩೪೪, ಮೊ:೮೨೭೭೯೪೪೨೦೯ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರದಲ್ಲಿ ರಾಜ್ಯಸಭೆ ಸಂಸದೆ ಸುಧಾಮೂರ್ತಿ ಸ್ಪಷ್ಟನೆ ವಿಜಯಪುರ: ಜಿಲ್ಲೆಯ ಗೋಲಗುಂಬಜ್, ಬಾರಾ ಕಮಾನ್, ಗಗನ ಮಹಲ, ಇಬ್ರಾಹಿಮ್ ರೋಜಾ, ಬಸವನ ಬಾಗೇವಾಡಿ ಹಾಗೂ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಸ್ವಚ್ಚತೆಯನ್ನು ಕಲ್ಪಿಸಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಮಾಹಿತಿ ಕೇಂದ್ರ, ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಬಳಸಲಾಗುವುದು ಎಂದು ರಾಜ್ಯಸಭೆ ಸಂಸದರಾದ ಶ್ರೀಮತಿ ಸುಧಾಮೂರ್ತಿ ಹೇಳಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯಪುರ ನಗರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ವಿಜಯಪುರ ಜಿಲ್ಲೆಯ ಜೊತೆ ನನಗೆ ಭಾವನಾತ್ಮಕ ಸಂಬಂಧ ಇರುವುದಂದ ನೋಡಲ್ ಜಿಲ್ಲೆಯನ್ನಾಗಿ ವಿಜಯಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಬಳಸಿಕೊಂಡು ಸಮಗ್ರ ಅಭಿವೃದ್ದಿಗೆ ಕ್ರಮ ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಜನರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಬೇಕು ಎಂದು…

Read More

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಇದೇ ಆಗಸ್ಟ್ ೧೫ ರಂದು ನಗರದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೯ ಗಂಟೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಶಾಸಕರಾದ ಪ್ರಕಾಶ ಬಿ.ಹುಕ್ಕೇರಿ, ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷರಾದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ, ಸಂಸದರಾದ ರಮೇಶ ಜಿಗಜಿಣಗಿ, ಡಾ.ಸುಧಾ ಮೂರ್ತಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ವಿಠ್ಠಲ ಧೋಂಡಿಬಾ ಕಟಕಧೋಂಡ, ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ, ಅಶೋಕ ಮಲ್ಲಪ್ಪ ಮನಗೂಳಿ, ಕರ್ನಾಟಕ…

Read More

ವಿಜಯಪುರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹರ್-ಘರ್ ತಿರಂಗಾ ಅಭಿಯಾನದಡಿ ಐತಿಹಾಸಿಕ ಗೋಲಗುಮ್ಮಟದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್, ಸೈಕಲ್ ಜಾಥಾ ಹಾಗೂ ಗಾಂಧೀ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು.ಈ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ.ಸಿ.ಕೆ. ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ಕ್ರಿಡಾ ಇಲಾಖೆಯ ಎಸ್. ಬಿ. ಕಡಕಲ್, ತರಬೇತುದಾರರಾದ ರಾಜು ಚವ್ವಾಣ, ಅಲ್ಕಾ ಫಡತಾರೆ, ರಮೇಶ ರಾಥೋಡ, ಯಲ್ಲಪ್ಪ ಜುಂಪಲೆ, ಸಾಲುದ್ದಿನ ಮಳಗಿ, ರಫಿಕ್ ನಧಾಫ್, ಶಂಕರ ಸಣ್ಣಪ್ಪ, ಬಸವರಾಜ ಬೆಳ್ಳುಬ್ಬಿ, ಉಪಸ್ಥಿತರಿದ್ದರು.

Read More

ವಿಜಯಪುರ: ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಯಾವುದೇ ಬಾಕಿ ಕಾಮಗಾರಿಗಳನ್ನು ಉಳಿಸಿಕೊಳ್ಳದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವರಾದ ರಹೀಂ ಖಾನ್ ಅವರು ಹೇಳಿದರು.ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಯಾವುದೇ ಕಾಮಗಾರಿಗಳನ್ನು ಬಾಕಿ ಉಳಿಸಿಕೊಳ್ಳದೇ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಎಸ್‌ಎಫ್‌ಸಿ ಯೋಜನೆ ಸೇರಿದಂತೆ ಬಾಕಿ ಇರುವ ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ಯಾವುದಾದರೂ ಸಣ್ಣ ಪುಟ್ಟ ತೊಂದರೆಗಳಿದಲ್ಲಿ ಆದ್ಯತೆ ಮೇಲೆ ನಿಮ್ಮ ಹಂತದಲ್ಲಿ ಪೂರ್ಣಗೊಳಿಸಬೇಕು. ಅಧಿಕಾರಿಗಳ ಹಂತದಲ್ಲಿ ಸಾಧ್ಯವಾಗದ ಯಾವುದಾದರೂ ತೊಂದರೆಗಳಿದ್ದಲ್ಲಿ ಮೇಲಾಧಿಕಾರಿಗಳ, ಉನ್ನತಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ…

Read More

-ಸುಮನ್ ಪಾಟೀಲ್,ಕೆಸಿಪಿ ಕಾಲೇಜ್ ಜರ್ನಲಿಸಂ ವಿದ್ಯಾರ್ಥಿನಿ, ವಿಜಯಪುರ ಕೇಸರಿ ಬಿಳಿ ಹಸಿರು ಬಾವುಟ , ಹೂವುಗಳು ಬಲೂನ್ಗಳು, ಸಾಲ ಕಾಲೇಜು ಬ್ಯಾಂಕ್ ಕಚೇರಿಗಳ ಮುಂದೆ ನಮ್ಮ ಭಾರತದ ರಾಷ್ಟ್ರೀಯ ಬಾವುಟದ ಬಣ್ಣಗಳ ರಂಗೋಲಿ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಹೇಳುವ ಮಕ್ಕಳ ಭಾಷಣಗಳು , ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎಂಬ ದೇಶಭಕ್ತಿ ಗೀತೆ, ದೇಶಭಕ್ತಿ ಗೀತೆಗಳ ಮೇಲೆ ನೃತ್ಯಗಳು, ಪಿರಮಿಡ್ ಗಳು ಹಲವಾರು ಕಾರ್ಯ ಕ್ರಮಗಳು ಈ ದಿನ ಅಗಸ್ಟ್ 15 ಅಂದರೆ ನಮ್ಮ ಭಾರತ ಸ್ವಾತಂತ್ರ್ಯ ದಿನವನ್ನು ಇನ್ನಷ್ಟು ಮೆರಗುಗೊಳಿಸುತ್ತವೆ.ಇಂದಿಗೆ ಅಂದರೆ 78 ವರ್ಷಗಳ ಹಿಂದೆ ನಮ್ಮ ಭಾರತ ಬ್ರಿಟಿಷ್ ಸಾಮ್ರಾಜ್ಯ ಅಡಿಯಲ್ಲಿ ವರ್ಷಗಳ ಗುಲಾಮಗಿರಿ ಬಂಧನದ ನಂತರ, 1947 ಅಗಸ್ಟ್ 15 ರಂದು ಸ್ವಾತಂತ್ರ ಪಡೆಯಿತು. ಇದು ಸುಲಭದ ಕೆಲಸವಾಗಿರಲಿಲ್ಲ. ಮಹಾತ್ಮ ಗಾಂಧೀಜಿ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ ರಾಯ್, ರಾಣಿ ಲಕ್ಷ್ಮೀಬಾಯಿ, ಬಾಲ್ ಗಂಗಾಧರ್ ತಿಲಕ್…

Read More

ಸುಮನ್ ಪಾಟೀಲ್,ಕೆಸಿಪಿ ಕಾಲೇಜ್ ಜರ್ನಲಿಸಂ ವಿದ್ಯಾರ್ಥಿನಿ, ವಿಜಯಪುರ ಕೇಸರಿ ಬಿಳಿ ಹಸಿರು ಬಾವುಟ , ಹೂವುಗಳು ಬಲೂನ್ಗಳು, ಸಾಲ ಕಾಲೇಜು ಬ್ಯಾಂಕ್ ಕಚೇರಿಗಳ ಮುಂದೆ ನಮ್ಮ ಭಾರತದ ರಾಷ್ಟ್ರೀಯ ಬಾವುಟದ ಬಣ್ಣಗಳ ರಂಗೋಲಿ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಹೇಳುವ ಮಕ್ಕಳ ಭಾಷಣಗಳು , ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಎಂಬ ದೇಶಭಕ್ತಿ ಗೀತೆ, ದೇಶಭಕ್ತಿ ಗೀತೆಗಳ ಮೇಲೆ ನೃತ್ಯಗಳು, ಪಿರಮಿಡ್ ಗಳು ಹಲವಾರು ಕಾರ್ಯ ಕ್ರಮಗಳು ಈ ದಿನ ಅಗಸ್ಟ್ 15 ಅಂದರೆ ನಮ್ಮ ಭಾರತ ಸ್ವಾತಂತ್ರ್ಯ ದಿನವನ್ನು ಇನ್ನಷ್ಟು ಮೆರಗುಗೊಳಿಸುತ್ತವೆ.ಇಂದಿಗೆ ಅಂದರೆ 78 ವರ್ಷಗಳ ಹಿಂದೆ ನಮ್ಮ ಭಾರತ ಬ್ರಿಟಿಷ್ ಸಾಮ್ರಾಜ್ಯ ಅಡಿಯಲ್ಲಿ ವರ್ಷಗಳ ಗುಲಾಮಗಿರಿ ಬಂಧನದ ನಂತರ, 1947 ಅಗಸ್ಟ್ 15 ರಂದು ಸ್ವಾತಂತ್ರ ಪಡೆಯಿತು. ಇದು ಸುಲಭದ ಕೆಲಸವಾಗಿರಲಿಲ್ಲ. ಮಹಾತ್ಮ ಗಾಂಧೀಜಿ ಜವಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ ರಾಯ್, ರಾಣಿ ಲಕ್ಷ್ಮೀಬಾಯಿ, ಬಾಲ್ ಗಂಗಾಧರ್ ತಿಲಕ್…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ನಿಮಗೆ ಓದಿಸಲು ಅದೆಷ್ಟು ಖರ್ಚು ಮಾಡಿದ್ದೇವೆ ಗೊತ್ತಾ, ಹೊಟ್ಟೆ ಬಟ್ಟೆ ಕಟ್ಟಿ ನಾವು ಅಷ್ಟೊಂದು ಸಪೋರ್ಟ್ ಮಾಡಿರೋದ್ರಿಂದಲೇ ನೀನು ಇಂದು ಇಷ್ಟು ಮುಂದೆ ಬಂದಿರುವುದು, ಕಣ್ಣಿಗೆ ಹೆಣ್ಣಿಗೆ ಬಿಟ್ಟುಕೊಂಡು ಹಗಲು ರಾತ್ರಿ ನಿಮ್ಮನ್ನು ಓದಿಸಿದ್ದೇವೆ, ನಿಮ್ಮನ್ನು ಓದಿಸಬೇಕಾದರೆ ಕಣ್ಣೀರಲ್ಲ ರಕ್ತ ಸುರಿಸಿ ದುಡಿದಿದ್ದೇವೆಅಕಸ್ಮಾತ್ ನಾನು ನಿನ್ನನ್ನು ನಮ್ಮಿಂದ ಸಾಧ್ಯವಾಗುವುದಿಲ್ಲ ಅಂತ ಬಿಟ್ಟು ಹೋಗಿದ್ರೆ ನೀನೇನ್ ಆಗ್ತಿದ್ದೆ ಗೊತ್ತಾನೀ ಹುಟ್ಟೋಕು ಮುಂಚೆ ನಿನ್ನನ್ನ ಅಬಾರ್ಷನ್ ಮಾಡಿಸಿ ತೆಗೆಸಬೇಕು ಅಂತ ಮಾಡಿದ್ದೆ ನಾನೇನು ಮಾಡಿದ್ರೂ ನಿನಗೆ ಅದರ ಕಿಮ್ಮತ್ತು ಗೊತ್ತಾಗ್ತಾ ಇಲ್ಲ, ನಾನು ಸತ್ತು ಹೋದ ಮೇಲೆ ನನ್ನ ಬೆಲೆ ನಿನಗೆ ಗೊತ್ತಾಗುತ್ತದೆ… ಹೀಗೆಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಹೇಳುವುದನ್ನು ಆಗಾಗ ನಾವು ಕೇಳುತ್ತೇವೆ. ಇದು ಅವರ ಮನದಾಳದ ಮಾತುಗಳು. ಮಕ್ಕಳನ್ನು ಬೆಳೆಸಿ ಅವರಿಗೆ ನಾವು ಉಪಕಾರ ಮಾಡಿದ್ದೇವೆ ಎಂಬಂತಹ ಭಾವವನ್ನು ಅವರಲ್ಲಿ ಬಿತ್ತುವ ಪಾಲಕರು ಅವರಿಂದ ಕೃತಜ್ಞತೆಯ ಬೆಳೆಯನ್ನು ನಿರೀಕ್ಷಿಸುತ್ತಾರೆ. ಆದರೆ…

Read More

ವಿಜಯಪುರ: ಪುಸ್ತಕದ ಮೌಲ್ಯ ಅರಿಯಲು ಗ್ರಂಥಾಲಯ ಅವಶ್ಯ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು. ಹೆಚ್ಚೆಚ್ಚು ಸದಸ್ಯರನ್ನು ಮಾಡಿ ಗ್ರಂಥಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆಯ ನಿಮಿತ್ತ ‘ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿಗ್ರಂಥಾಲಯದ ಪಾತ್ರ’ಕುರಿತು ಮಾತನಾಡಿದರು.ಗ್ರಂಥಾಲಯವು ಜ್ಞಾನದ ಕಣಜವಾಗಿದ್ದು, ಓದುಗನಿಗೆ ಜ್ಞಾನವನ್ನು ಉಣಬಡಿಸುವ ಗ್ರಂಥಪಾಲಕರ ಶ್ರಮ ಬಹಳವಿದೆ. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌ ಆರ್‌ ರಂಗನಾಥನ್‌ ಪ್ರಮುಖ ಕಾರಣ. ಅವರು ನೀಡಿದ ಗ್ರಂಥಾಲಯದ ಪಂಚ ಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ದೇಹಕ್ಕೆ ಅನ್ನ, ನೀರು, ಗಾಳಿ, ಎಷ್ಟು ಮುಖ್ಯವೋ ಹಾಗೆಯೇ ಮಾನವನ ಮತ್ತು ಸಮಾಜದ ವಿಕಾಸಕ್ಕೆ ಪುಸ್ತಕಗಳು ಬಹು ಮುಖ್ಯ. ಪುಸ್ತಕಗಳು ಸದಾ ಒಳ್ಳೆಯ ಆಲೋಚನೆಗೆ ದಾರಿ ಮಾಡಿಕೊಟ್ಟು, ಸುಶಿಕ್ಷಿತ ಸಮಾಜ ನಿರ್ಮಿಸುವಲ್ಲಿ ನಿರ್ಣಾಯಕವಾಗಿವೆ ಎಂದು ಹೇಳಿದರು.ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಅಧ್ಯಕ್ಷತೆ…

Read More

ವಿಜಯಪುರ: ಪರಿಸರ ಸಂರಕ್ಷಣೆಗಾಗಿ ಹಸಿರು ಇಂಧನ ಮತ್ತು ಉತ್ತಮ ಆರೋಗ್ಯಕ್ಕಾಗಿ ಸಾವಯವ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಮಂಗಳವಾರ ವಿಜಯಪುರ ನಗರದಲ್ಲಿ ಹೆಸ್ಕಾಂ ನ ವಿಜಯಪುರ ನಗರ ಉಪವಿಭಾಗ- 1, ಶಿವಗಿರಿ ಶಾಖಾಧಿಕರಿಗಳ ಕಟ್ಟಡ ಹಾಗೂ ಭೂತನಾಳ ಶಾಖಾಧಿಕಾರಿಗಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಅಭಿವೃದ್ಧಿ ಯೋಜನೆಗಳಿಗೆ ವಿದ್ಯುಚ್ಛಕ್ತಿ ಅಗತ್ಯವಾಗಿದೆ. ಆದರೆ, ಇದೇ ವಿದ್ಯುಚ್ಛಕ್ತಿ ಉತ್ಪಾದನೆಗೆ ಪರಿಸರಕ್ಕೂ ಹಾನಿಯಾಗಿದೆ. ಅಭಿವೃದ್ಧಿಗೆ ಅಗತ್ಯವಾಗಿರುವ ವಿದ್ಯುತ್ ಉತ್ಪಾದನೆಗೆ ಜಲವಿದ್ಯುತ್, ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ನಂಥ ಹಸಿರು ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರೂ ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಮನೆಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನೆ ಸಲಕರಣೆ ಬಳಸಬೇಕು. ಈ ಮೂಲಕ ಈಗಾಗಲೇ ಹಾನಿಯಾಗಿರುವ ಪರಿಸರವನ್ನು ಕಾಪಾಡಬೇಕಿದೆ. ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಉತ್ತಮ ಪರಿಸರ ಮತ್ತು ಭೂಮಂಡಲವನ್ನು ನಾವು ಮುಂದಿನ…

Read More