ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪಟ್ಟಣದ ಆಶ್ರಯ ಕಾಲೋನಿಯ ಅಬ್ದುಲ ರಹೆಮಾನ ಮನಿಯಾರ ಮತ್ತು ಮಾರುತಿ ನಗರದ ಚಂದ್ರಾಮಪ್ಪ ಧನಗೊಂಡ ಇವರು ಸಾರ್ವಜನಿಕ ಸ್ಥಳದಲ್ಲಿ ನಿಂತು ೧ರೂಪಾಯಿಗೆ ೮೦ ರೂಪಾಯಿ ಕೊಡುವ ಕರಾರಿನ ಮೇಲೆ ಓಸಿ ಮಟಕಾ ಜೂಜಾಟದ ಸಂಖ್ಯೆಯನ್ನು ಬರೆದುಕೊಳ್ಳುವಾಗ ಪೊಲೀಸರ ಕೈಗೆ ಸಿಕ್ಕಿದ್ದು ಆರೋಪಿತರಿಂದ ಪೆನ್ನು, ಹಣ ಮತ್ತು ಓಸಿ ಚೀಟಿಯನ್ನು ಜಪ್ತು ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಗಳು ದಾಖಲಾಗಿವೆ.
