ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬುದ್ಧ ಬಸವ ಗಾಂಧಿ ಟ್ರಸ್ಟ್ ರಿ ಸಿದ್ಧನಹಳ್ಳಿ ಬೆಂಗಳೂರು ಇವರು ಆಯೋಜಿಸಿದ್ದ ರಾಜ್ಯಮಟ್ಟದ ೧೫ನೇ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ, ೨೦೨೩-೨೪ ರ ಹಿರಿಯ ಸಾಹಿತಿ ವಿಜಯಾ ನಾಗೇಶ್ ದತ್ತಿ ಪುಸ್ತಕ ಬಹುಮಾನಕ್ಕೆ ವಿಜಯಪುರದ ಯುವ ಸಂಶೋಧಕಿ ಡಾ.ಚೈತನಾ ಸಂಕೊಂಡರ ಬಯಲು ಬೊಂಬೆ ಕೃತಿ ಆಯ್ಕೆಯಾಗಿದೆ.
ಈ ಪ್ರಯುಕ್ತ ರವಿವಾರ ಬೆಂಗಳೂರಿನಲ್ಲಿ ಶೇಷಾದ್ರಿಪುರಂ ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಸಂಶೋಧಕಿ ಡಾ.ಚೈತನಾ ಅವರಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಬಯಲು ಬೊಂಬೆ ಇದೊಂದು ಸಂಶೋಧನಾ ಕೃತಿಯಾಗಿದ್ದು, ಯುವ ಸಂಶೋಧಕಿಯ ಕೃತಿಗೆ ದತ್ತಿ ಪುಸ್ತಕ ಬಹುಮಾನ ಲಭಿಸಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

