Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶೆರೆ ಮನುಷ್ಯನ ಆಯುಷ್ಯ ಕಡಿಮೆ ಮಾಡುತ್ತದೆ :ಅಮೃತಾನಂದ ಶ್ರೀ
(ರಾಜ್ಯ ) ಜಿಲ್ಲೆ

ಶೆರೆ ಮನುಷ್ಯನ ಆಯುಷ್ಯ ಕಡಿಮೆ ಮಾಡುತ್ತದೆ :ಅಮೃತಾನಂದ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಇಂಡಿ: ಯುವಕರು ಶೆರೆ ಸಹವಾಸ ಮಾಡಿದರೆ ಅದರಿಂದ ಹೆಂಡತಿ, ಕುಟುಂಬ, ಸಮಾಜದಿಂದ ವಂಚಿತನಾಗುವದಲ್ಲದೆ ಶೆರೆ ಯುವಕರ ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಗುರುದೇವ ಆಶ್ರಮ ಕಾತ್ರಾಳದ ಅಮೃತಾನಂದ ಶ್ರೀಗಳು ಹೇಳಿದರು.
ಪಟ್ಟಣದ ಕಾಳಿಕಾ ಮಂದಿರದಲ್ಲಿ ತಾಲೂಕಾ ಆಡಳಿತ, ಅಬಕಾರಿ ಇಲಾಖೆ, ಪುರಸಭೆ ಇಂಡಿ ಮತ್ತು ಗ್ರಾ.ಪಂ ರೂಗಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದಲ್ಲಿ ನಡೆದ ತಾಲೂಕಿನ ಬೊಳೆಗಾಂವ ಗ್ರಾಮ ವ್ಯಸನ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದು ಮಹಿಳೆಯರಲ್ಲಿ ಹೆಚ್ಚು ಸಂಸ್ಕೃತಿ ಕಾಣುತ್ತಿದ್ದೇವೆ. ಬೊಳೆಗಾಂವ ಗ್ರಾಮವನ್ನು ವ್ಯಸನ ಮುಕ್ತ ಮಾಡಲು ಸರಕಾರದ ಸಹಭಾಗಿತ್ವದಲ್ಲಿ ಎಸಿ ಅಬೀದ ಗದ್ಯಾಳರವರು ಮಾಡುತ್ತಿರುವ ಪ್ರಯೋಗ ಜಿಲ್ಲೆಯಲ್ಲಿಯೆ ಮೊದಲನೆಯದು. ಇಲ್ಲಿ ೭೦ ಜನ ಒಂದು ವಾರದಿಂದ ಭಾಗವಹಿಸಿ ವ್ಯಸನ ಮುಕ್ತರಾಗಿದ್ದು ಮತ್ತು ಮುಂಬರುವ ದಿನಗಳಲ್ಲಿ ಬೊಳೆಗಾಂವ ಗ್ರಾಮ ವ್ಯಸನ ಮುಕ್ತ ರಾಗುತ್ತಿರುವದು ಇದು ನಾವು ಗಾಂಧೀಜಿಗೆ ನೀಡುತ್ತಿರುವ ದೊಡ್ಡ ಕಾಣಿಕೆ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ದಿಯವರ ಪ್ರಯತ್ನದಿಂದ ೭೦ ಜನರು ವ್ಯಸನ ಮುಕ್ತರಾಗಿದ್ದು ಅಂಧಕಾರದಿಂದ ಬೆಳಕಿನೆಡೆಗೆ ಬಂದಿದ್ದಾರೆ. ಯುವಕರು ತಮ್ಮಿಲ್ಲಿರುವ ಋಣಾತ್ಮಕ ವಿಚಾರಗಳನ್ನು ಬಿಟ್ಟು ಧನಾತ್ಮಕ ವಿಚಾರ ಮಾಡಿದರೆ ವ್ಯಸನ ಮುಕ್ತವಾಗಲು ಸಾಧ್ಯ ಎಂದರು.
ಜನ ಜಾಗೃತಿ ವೇದಿಕೆ ರಾಜ್ಯ ಅಧ್ಯಕ್ಷ ಸೋಮನಗೌಡ ಪಾಟೀಲ ಮನಗೂಳಿ( ಅಪ್ಪುಗೌಡ ) ಮಾತನಾಡಿ ರಾಜ್ಯದಲ್ಲಿ ಒಂದು ಲಕ್ಷ ೮೦ ಸಾವಿರ ಜನರನ್ನು ಜನ ಜಾಗೃತಿ ಸಂಸ್ಥೆ ವ್ಯಸನ ಮುಕ್ತ ಮಾಡಿ ಹೊಸ ಜೀವನ ನೀಡಿದ್ದಾರೆ, ಸಮಾಜದಲ್ಲಿ ಉತ್ತಮರಾಗಿ ಬದುಕಬೇಕಾಗಿದೆ. ಹೇಳುವದು ಸರಳವಿದೆ. ಆದರೆ ಪಾಲನೆ ಮಾಡುವದು ತುಂಬಾ ಕಷ್ಟವಾಗಿದ್ದು ಬೊಳೆಗಾಂವ ೭೦ ಜನರನ್ನು ವ್ಯಸನ ಮುಕ್ತ ಮಾಡಿರುವದು ಸ್ವಾಗತಾರ್ಹ, ಇನ್ನಷ್ಟು ಪ್ರಯತ್ನಿಸಿ ಬೊಳೆಗಾಂವ ವ್ಯಸನ ಮುಕ್ತ ಮಾಡಲು ಪ್ರಯತ್ನಿಸಲಾಗುವದು ಎಂದರು.
ಝಳಕಿಯ ಉಪನ್ಯಾಸಕಿ ರವಿ ಅರಳಿ,ಧರ್ಮಸ್ಥಳ ಕ್ಷೇಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿದೇರ್ಶಕ ಸಂತೋಷಕುಮಾರ ರೈ,ಯೋಜನಾಧಿಕಾರಿ ನಟರಾಜ ಎಲ್.ಎಂ,ಪದ್ಮಾ ಮಾತನಾಡಿದರು.
ವೇದಿಕೆಯ ಮೇಲೆ ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ರುದ್ರಪ್ಪಾ ಪೂಜಾರಿ, ಅಬಕಾರಿ ಇಲಾಖೆಯ ಪರೀನಾ ವಣಕ್ಯಾಳ, ರಾಹುಲ್ ನಾಯಕ,ವಾದಿರಾಜ, ತಾ.ಪಂ ಸಂಜಯ ಖಡಗೇಕರ, ಪ್ರಾದೇಶಿಕ ಯೋಜನಾಧಿಕಾರಿ ರಾಜೇಶ, ರೂಗಿ ಗ್ರಾ.ಪಂ ಪಿಡಿಒ ಬಸವರಾಜ ಬಬಲಾದ, ಶಶಿಕಲಾ ಬೇಟಗೇರಿ, ಸರಸ್ವತಿ, ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಪರಶುರಾಮ ಹೊಸಮನಿ, ಯೋಗ ಶಿಕ್ಷಕ ಬಿ.ಎಸ್.ಪಾಟೀಲ, ಗ್ರಾ.ಪಂ ಸದಸ್ಯ ಉಮೇಶ ಮತ್ತಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.