ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪ್ರಪಂಚದ ಎಲ್ಲ ಭಾಷೆಗಳ ತಾಯಿ ಸಂಸ್ಕೃತ ಭಾಷೆ, ಇದು ದೇವಾನುದೇವತೆಗಳ ಭಾಷೆಯಾಗಿದು, ಖುಷಿ-ಮುನಿಗಳ ಮುಖಾಂತರ ಮನುಷ್ಯನ ಹತ್ತಿರ ಸಾಗಿ ಬಂದಿದೆ ಇದನ್ನು ಉಳಿಸಿ,ಬೆಳೆಸುವದು ನಮ್ಮೆಲ್ಲರ ಕರ್ತವ್ಯ ಎಂದು ಗುಂದಗಿಯ ಶ್ರೀಸ್ವಾಮಿ ವಿವೇಕಾನಂದ ಸಂಸ್ಕೃತ ಪಾಠ ಶಾಲೆಯ ಅಧ್ಯಕ್ಷ ರಾಜಕುಮಾರ ಕರಜಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಗುಂದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಸ್ವಾಮಿ ವಿವೇಕಾನಂದ ಸಂಸ್ಕೃತ ಪಾಠ ಶಾಲೆ ಗುಂದಗಿ ಇವರ ಸಹಯೋಗದಲ್ಲಿ ಶನಿವಾರ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ನಿರ್ದೇಶನಾಲಯ ಬೆಂಗಳೂರ ಇವರು ಆಯೋಜಿಸಿದ “ಆಸ್ಮಾಕಂ ಸಂಸ್ಕೃತ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದ ಅವರು,
ಸಂಸ್ಕೃತ ಕೇವಲ ಮಾತನಾಡುವ ಭಾಷೆ ಮಾತ್ರವಲ್ಲ. ಸನಾತನ ಪರಂಪರೆಯನ್ನು ಹಲವಾರು ಮೌಲಿಕ ಚಿಂತೆಗಳ ಪ್ರವಾಹಗಳು ಇದರಲ್ಲಿ ಅಡಗಿವೆ. ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ನಿರ್ದೇಶನಾಲಯ ಬೆಂಗಳೂರ ಇವರು ಆಯೋಜಿಸಿದ ಆಸ್ಮಾಕಂ ಸಂಸ್ಕೃತ ಕಾರ್ಯಕ್ರಮ ಪಾಠ ಶಾಲೆಗಳಲ್ಲಿ ಸಂಸ್ಕೃತ ವಾತಾವರಣ ಮೂಡಿಸಲು ಸಹಕಾರಿಯಾಗಿದೆ.
ಮುಗು ಶ್ರೀಮತಿ ಸುಜಾತಾ ಜಾಲಗೇರಿ ಮಾತನಾಡಿ, ಸಂಸ್ಕೃತ ಪ್ರಾಚೀನ ಭಾರತೀಯ ಭಾಷೆಯಾಗಿದ್ದು, ಇದಕ್ಕೆ ದೇವವಾಣಿ ಎಂದು ಕರೆಯಲಾಗುತ್ತದೆ. ಈ ಭಾಷೆಯು ಸರಳ ಮತ್ತು ಸುಸಂಬಂಧವಾಗಿದ್ದು. ಪ್ರತಿಯೊಬ್ಬರು ಕಲಿಯಬಹುದಾಗಿದೆ. ಸಂಸ್ಕೃತ ಭಾಷಾ ಕಲಿಕೆಯಿಂದ ಜ್ಞಾನಾರ್ಜನೆ ವೃದ್ಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗುರುಗಳಾದ ಈರಪ್ಪ ಕಾಂಬಳೆ, ಶಿವಾನಂದ ಬಿರಾದಾರ, ಎಮ್.ಎನ್.ಪಾಟೀಲ, ಬಸವರಾಜ ಕರಜಗಿ, ಸುಭಾಸ ಜಾಲಗೇರಿ, ಶ್ರೀಮತಿ ನೀಲಮ್ಮ ಕರಜಗಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಸ್ವಾಮಿ ವಿವೇಕಾನಂದ ಸಂಸ್ಕೃತ ಪಾಠ ಶಾಲೆಯ ಮಕ್ಕಳು ಹಾಗೂ ಶಿಕ್ಷ ವೃಂದ ಉಪಸ್ಥಿತರಿದ್ದರು.

