Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟಾಟಾ ಸಮೂಹದ ಮುಖ್ಯಸ್ಥ ರತನ ಟಾಟಾ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಮುಖಂಡರು ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವೇಶ್ವರ ಸೇವಾ ಸಮಿತಿ ಸದಸ್ಯ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ಭಾರತದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾಗಿದ್ದ ರತನ ಟಾಟಾ ಅವರು ಮಧ್ಯಮ ವರ್ಗದ ಜನರ ಆಶಾಕಿರಣವಾಗಿದ್ದರು. ದೇಶದ ಕಲ್ಯಾಣಕ್ಕಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇವರು ತಮ್ಮ ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜೊತೆಗೆ ದೇಶದ ಉದ್ಯಮ ವಲಯವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರವಾಗಿದ್ದಾರೆ. ಇವರ ನಿಧನದಿಂದ ದೇಶಕ್ಕೆ ತುಂಬಾ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಗಣ್ಣ ಕಲ್ಲೂರ, ಬಸವರಾಜ ಕೋಟಿ, ಶೇಖರ ಗೊಳಸಂಗಿ, ಬಬಲಕಿಶೋರ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹನೀಯರನ್ನು, ಮಹಾತ್ಮರನ್ನು ಸದಾ ಸಮಾಜವು ಸ್ಮರಿಸಬೇಕು. ಅವರು ನೀಡಿರುವ ಸಂದೇಶಗಳನ್ನು ಅರಿತುಕೊಂಡು ಉತ್ತಮ ಸಂಸ್ಕಾರ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಗದಗದ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಅಗಸಿ ಆವರಣದಲ್ಲಿ ಹಮ್ಮಿಕೊಂಡಿರುವ ಬಸವನಾಡ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಗುರು ಕುಮಾರೇಶ್ವರ ಶಿವಯೋಗಾಶ್ರಮ ನೀಲನಕ್ಷೆ ಬಿಡುಗಡೆ, ಸಾಹಿತ್ಯ ಬಳಗ ಮತ್ತು ಕ್ರಿಯಾಶೀಲ ಸಾಧಕ ಬಳದ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜವನ್ನು ಕಟ್ಟಿ ಬೆಳೆಸಿದ ಧೀಮಂತರಲ್ಲಿ ಹಾನಗಲ್ ಕುಮಾರಸ್ವಾಮೀಜಿ ಒಬ್ಬರಾಗಿದ್ದಾರೆ. ಬಸವೇಶ್ವರರರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಅವರು ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆಯಾಗಿದ್ದಾರೆ. ಮಠಗಳಲ್ಲಿ ಪ್ರಸಾದ ನಿಲಯ ತೆರೆದು ದಾಸೋಹ ವ್ಯವಸ್ಥೆಯನ್ನು ಆರಂಭಿಸಿದರು. ಅವರಿಂದ ಪ್ರೇರಣೆಗೊಂಡ ಅನೇಕ ಮಠಗಳು ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ, ಮೆಗಾ ಮಾರುಕಟ್ಟೆ ಹತ್ತಿರ, ರಾಣಿ ಚನ್ನಮ್ಮ ವೃತ್ತದಲ್ಲಿರುವ ಅಂಗಡಿಯವರು ಪಾದಚಾರಿ(ಪುಟ್ಪಾತ್) ರಸ್ತೆ ಮೇಲೆ ಅತಿಕ್ರಮಿಸಿದ ಜಾಗೆಯನ್ನು ತೆರವು ಗೊಳಿಸುವ ಕಾರ್ಯಾಚರಣೆಯು ಪುರಸಭೆಯಿಂದ ಗುರುವಾರ ಬೆಳ್ಳಂಬೆಳಗ್ಗೆ ೭ ಗಂಟೆಗೆ ಆರಂಭವಾಗಿ ಮಧ್ಯಾನ್ಹ ಸುಮಾರು ೧ ಗಂಟೆಯವರೆಗೂ ನಡೆಯಿತು.ಈ ತೆರವು ಕಾರ್ಯಾಚರಣೆಯ ನಡೆಯುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತೆರವು ಕಾರ್ಯಾಚರಣೆ ವೀಕ್ಷಿಸಿ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ಮಾಹಿತಿ ಪಡೆದುಕೊಂಡು ರಸ್ತೆಯಲ್ಲಿ ಅತಿಕ್ರಮಿಸಿದ ಜಾಗೆಯನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.ಪಟ್ಟಣದ ಬಸವೇಶ್ವರ ವೃತ್ತ, ಮೆಗಾ ಮಾರುಕಟ್ಟೆ ಹತ್ತಿರ, ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಕೆಲ ಅಂಗಡಿಕಾರರು ಪಾದಚಾರಿ(ಪುಟ್ಪಾತ್) ರಸ್ತೆ ಮೇಲೆ ಮೆಟ್ಟಿಲು ನಿರ್ಮಿಸಿದ್ದನ್ನು, ಅಂಗಡಿಗಳ ಮುಂಭಾಗ ಹಾಕಲಾಗಿದ್ದ ಪತ್ರಾಸ್, ಕೆಲ ಅಂಗಡಿಗಳ ಬೋರ್ಡ್ಗಳನ್ನು ತೆರವು ಗೊಳಿಸಲಾಯಿತು. ತೆರವು ಕಾರ್ಯಾಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾದಾಗ, ಪಾದಚಾರಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಂದಗಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆಯ ವ್ಯಾಪ್ತಿಯಲ್ಲಿನ ಖಾಲಿಯಿರುವ ಅಂಗನವಾಡಿ ಕಾಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಖಾಲಿಯಿರುವ ೫೨ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ೧೨೯ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ೦೯-೧೧-೨೦೨೪ ಕೊನೆಯ ದಿನವಾಗಿರುತ್ತದೆ. ಅಂಗನವಾಡಿ ಕಾರ್ಯಕತೆಯರ ಹುದ್ದೆಗೆ ಕನಿಷ್ಠ ಪಿಯುಸಿ ಹಾಗೂ ಸಹಾಯಕಿಯರ ಹುದ್ದೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್ಸೈಟ್ https://karnemakaone.kar.nic.in/abcd/ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮಾತೃಭಾಷೆಯಲ್ಲಿ ಮಾತನಾಡುವುದನ್ನು ಕಲಿಯುವುದು ಅತ್ಯಗತ್ಯ. ಮಾತೃಭಾಷೆಯನ್ನು ಸಾಮಾನ್ಯವಾಗಿ ಆತ್ಮದ ಭಾಷೆ ಎಂದು ಪರಿಗಣಿಸಲಾಗುತ್ತದೆ. ಒಬ್ಬರ ಸಂಸ್ಕೃತಿ, ಪರಂಪರೆ ಮತ್ತು ವೈಯಕ್ತಿಕ ಅನುಭವಗಳ ಸಾರವನ್ನು ಒಳಗೊಂಡಿದೆ ಎಂದು ಶಿಲ್ಪಾ ಕುದರಗೊಂಡ ಹೇಳಿದರು.ಪಟ್ಟಣದ ಹೂಗಾರ ಲೇಔಟ್‌ನಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂದಗಿ ಹಾಗೂ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ನವರಾತ್ರಿ ಉತ್ಸವ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಾತೃಭಾಷೆ ನಮ್ಮ ತುಟಿಗಳಲ್ಲಿ ನೃತ್ಯ ಮಾಡುವ ಮೊಟ್ಟ ಮೊದಲ ಭಾಷೆ. ನಮ್ಮ ಅಸ್ಮಿತೆಗೆ ಆಂತರಿಕವಾಗಿ ನಂಟು ಹೊಂದಿದೆ ಎಂದರು.ಈ ವೇಳೆ ಜನಪದ ವಿದ್ವಾಂಸೆ ಶಿವಲೀಲಾ ಮುರಾಳ ಮಾತನಾಡಿ, ಮಾತೃ ಭಾಷೆ ಎಂದರೆ ಮಗು ಜನನದಿಂದಲೇ ಕಲಿಯುವ ಮೊದಲ ಭಾಷೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಮಾತನಾಡುವ, ಕಥೆ ಹೇಳುವ ಮತ್ತು ಪದ್ಯ ಕಲಿಸುವ ವ್ಯವಧಾನವನ್ನು ಕಲ್ಪಿಸಿಕೊಳ್ಳಬೇಕು. ಸಂಸ್ಕೃತಿಯೊಂದಿಗೆ ಬೆರೆತಿರುವ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ನಡೆದಿದೆ.ಪೀರಪ್ಪ ಮುದನೂರ(33), ಶರಣಪ್ಪ ಪರಸನಹಳ್ಳಿ (30) ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಬೈಕ್ ಹಿಂಬದಿ ಸವಾರ ಸಹ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಪಟ್ಟಣದಲ್ಲಿ ಹಾದುಹೋಗಿರುವ ಸುರಪುರ – ಹುನಗುಂದ ರಾಜ್ಯ ಹೆದ್ದಾರಿಯಲ್ಲಿ ಪರಸನಹಳ್ಳಿ ಕಡೆ ಹೋಗುತ್ತಿದ್ದ ಬೈಕ್ ಹಾಗೂ ಅದರ ಎದುರು ಬದಿಯಿಂದ ಬರುತ್ತಿದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಉಭಯ ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಆದೇಶ ಖಂಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ನೇತೃತ್ವದಲ್ಲಿ ಪ್ರತಿಭಟನೆ ಗೆ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ವಕ್ಫ್ ಆಸ್ತಿ ಖಾತೆ ಬದಲಾವಣೆ ಹಾಗೂ ಪ್ಲ್ಯಾಗಿಂಗ್ ಮಾಡುವಂತೆ ಅಧಿಕಾರಿಗಳ ಮೇಲೆ ಕೂಗಾಡಿ, ೪೫ ದಿನಗಳಲ್ಲಿ ಪೂರ್ಣಗೊಳಿಸುವಂತೆ ಒತ್ತಡ ಹಾಕಿರುವುದನ್ನು ಖಂಡಿಸಿ, ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರ ನೇತೃತ್ವದಲ್ಲಿ, ಅ.೧೫ ರ ಮಂಗಳವಾರ ಬೆಳಿಗ್ಗೆ ೧೦.೩೦ಕ್ಕೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು.ದೇಶಕ್ಕೆ ಮಾರಕವಾದ ಮತ್ತು ಅವೈಜ್ಞಾನಿಕ ವಕ್ಫ್ ಮಸೂದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಈಗಾಗಲೇ ಮುಂದಾಗಿದ್ದು, ಅದಕ್ಕಾಗಿ ವಕ್ಫ್ ತಿದ್ದುಪಡಿ ಮಸೂದೆ ಜಂಟಿ ಸಂಸತ್…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶಾಸಕ ಯಶವಂತರಾಯಗೌಡರ ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ಹಬ್ಬದೂಟ ಮಾಡಲು ನಾವೆಲ್ಲಾ ಸೇರಿಲ್ಲ. ಈ ನೆಪದಲ್ಲಿ ತಾಲ್ಲೂಕಿನ ಬಡವರ ಸೇವೆ ಮಾಡಲು ಸೇರಿದ್ದೇವೆ ಎಂದು ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್ ಹೇಳಿದರು.ಗುರುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ, ಉಚಿತ ಆರೋಗ್ಯ ತಪಾಸಭೆ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ೨ ವರ್ಷಗಳ ಹಿಂದೆ ಶಾಸಕರ ಹುಟ್ಟುಹಬ್ಬದ ನಿಮಿತ್ಯ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದ ಮೂಲಕ ತಾಲ್ಲೂಕಿನ ೨೨ ಜನ ಹೃದಯ ರೋಗಿಗಳಿಗೆ ಉಚಿತವಾಗಿ ಹೃದಯ ರೋಗ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಈ ಸಲ ರಕ್ತ ಸಂಗ್ರಹಣೆ ನಮ್ಮ ಉದ್ದೇಶವಾಗಿದ್ದು, ಶಾಸಕರ ೫೭ನೇ ಹುಟ್ಟುಹಬ್ಬಕ್ಕೆ ೫೭ ಜನ ಯುವಕರು ರಕ್ತದಾನ ಮಾಡಲು ಕಾಯುತ್ತಿದ್ದಾರೆ. ನೂರಾರು ಜನ ತಮ್ಮ ರೋಗ ತಪಾಸಣೆಗೆ ಬಂದಿದ್ದಾರೆ. ಅವರೆಲ್ಲರಿಗೂ ರೋಗ ತಪಾಸಣೆ ಮಾಡಿಸುವದಲ್ಲದೇ ಅವರಿಗೆ ಅಗತ್ಯ ಔಷಧೋಪಚಾರ ನೀಡಲಾಗುವದು ಎಂದರು. ಕಾರ್ಯಕ್ರಮದಲ್ಲಿ ಶಾಸಕರ ೫೭ ನೇ ಹುಟ್ಟುಹಬ್ಬದ ನಿಮಿತ್ಯ ೫೭…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಂಸಾರವೆಂಬ ಈ ಭವಸಾಗರದಲ್ಲಿ ಬೀಸುವ ಗಾಳಿಯ ಸೊಡರಿನಲ್ಲಿ ಈಜಿ ದಡಸೇರುವದು ಅಷ್ಟು ಸುಲಭದ ಮಾತಲ್ಲ ಕುಟುಂಬ ವ್ಯವಸ್ಥೆಯ ತೇರನ್ನು ಎಳೆಯುತ್ತಾ ಸಮಾಜದಲ್ಲಿ ಸಮಾಜಮುಖಿಯಾಗಿ ಕೆಲಸಮಾಡುವ ಪರಿಕಲ್ಪನೆ ಹೊಂದಿದ ವ್ಯಕ್ತಿಗಳು ಅಪರೂಪ ಅಂತಹ ವ್ಯಕ್ತಿಗಳು ಬಡತನವಿರಲಿ ಸಿರಿತನವಿರಲಿ ಸಾಧನೆಯ ಶಿಖರ ಏರುವ ಗುರಿಯನ್ನು ಹೊಂದಿರುತ್ತಾರೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದಲ್ಲಿ ನಡೆದ ಅಧ್ಯಾತ್ಮಿಕ ಮತ್ತು ಸಂಸಾರ ವ್ಯವಸ್ಥೆ ಎನ್ನುವ ವಿವಿಧ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.ಮಾನವ ತನ್ನ ಜೀವಿತಾವಧಿಯ ಕೊನೆಯ ದಿನಗಳವರೆಗೂ ಧರ್ಮವಂತನಾಗಿ ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ತಂದೆ ತಾಯಿ ಗುರುವಿನ ಹಿರಿಯರ ಮಾಗದರ್ಶನದಲ್ಲಿ ನಡೆದದ್ದೇ ಆದರೆ ಎಂಥಹ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿರ್ವಹಣೆ ಮಾಡುವ ಜವಬ್ದಾರಿಯಿಂದ ತನ್ನದೇ ಆದ ಛಾಪನ್ನು ವಿವಿಧ ಕ್ಷೇತ್ರಗಳಲ್ಲಿ ಮೂಡಿಸುವ ನಾಯಕನಾಗುತ್ತಾನೆ ಎಂದರು.ಜೆಡಿಎಸ್ ಮುಖಂಡ ಸೋಮನಗೌಡ ಬ ಪಾಟೀಲ ಮಾತನಾಡಿ, ಮನುಷ್ಯನ ಮಾತುಗಳು ಕಠೋರವಾಗಿದ್ದರೂ ಮೃದುವಾದ ಮನಸ್ಸಿನಿಂದ ಗಂಡ ಹೆಂಡತಿಯರ ಪರಸ್ಪರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿಜಯಪುರ ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳ ವಾಸಕ್ಕಾಗಿ ಬಾಡಿಗೆ ಕಟ್ಟಡಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಕನಿಷ್ಠ ೨೦೦ ವಿದ್ಯಾರ್ಥಿಗಳ ವಸತಿ, ಊಟ ಉಪಚಾರ ಮಾಡಲು ಸೌಲಭ್ಯವುಳ್ಳ ಹಾಗೂ ಸರ್ಕಾರದ ನಿಯಮಾನುಸಾರದ ಪ್ರಕಾರ ವಿಸ್ತೀರ್ಣವುಳ್ಳ ಬಾಡಿಗೆ ಕೊಡುವ ಕಟ್ಟಡ ಮಾಲೀಕರು, ಸಂಘಸAಸ್ಥೆಯ ಪದಾಧಿಕಾರಿಗಳು ದಿನಾಂಕ ೨೧-೧೦-೨೦೨೪ ರ ಸಂಜೆ ೫ ಗಂಟೆಯೊಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
