ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿಜಯಪುರ ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳ ವಾಸಕ್ಕಾಗಿ ಬಾಡಿಗೆ ಕಟ್ಟಡಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಠ ೨೦೦ ವಿದ್ಯಾರ್ಥಿಗಳ ವಸತಿ, ಊಟ ಉಪಚಾರ ಮಾಡಲು ಸೌಲಭ್ಯವುಳ್ಳ ಹಾಗೂ ಸರ್ಕಾರದ ನಿಯಮಾನುಸಾರದ ಪ್ರಕಾರ ವಿಸ್ತೀರ್ಣವುಳ್ಳ ಬಾಡಿಗೆ ಕೊಡುವ ಕಟ್ಟಡ ಮಾಲೀಕರು, ಸಂಘಸAಸ್ಥೆಯ ಪದಾಧಿಕಾರಿಗಳು ದಿನಾಂಕ ೨೧-೧೦-೨೦೨೪ ರ ಸಂಜೆ ೫ ಗಂಟೆಯೊಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
