Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ರಂಗೇರಿದ ಹಾಗಿದೆ ತಂಗಾಳಿ ನೋಡುಹೂಗಳ ಕಂಪ ಸೂಸಿ ಹಾಡಿದೆ ಹಾಡುಹಿತವಾಗಿ ನುಡಿಸಿದೆ ಸುಮಧುರ ಧಾಟಿನಿನ್ನೊಲವ ಭಾವದ ವೀಣೆಯ ಮೀಟಿ ಚೆಲುವೇರಿದೆ ತಾಣ ನಿನ್ನೆಡೆಗೆ ಬರುವಾಗಹಿತವಾಗಿದೆ ದಿನ ಮೊಗದಿ ನಗು ಕಂಡಾಗಅರಿಯದ ತವಕ ಹೃದಯವ ತುಂಬಿದಾಗಅದೇನೋ ಹುರುಪು ಹೆಜ್ಜೆಗಳಿಗೆ ಈಗೀಗ ಮನಸಾಗಿದೆ ಮರುಳಂತೆ ಕನಸ ಕೂಡಿಸಿಸೊಗಸಾದ ಹೂಗಳ ಹೃದಯದಿ ಅರಳಿಸಿಬಯಲಾಗಿದೆ ಒಲವು ಮನಸನು ಸೇರಿಸಿಜೊತೆ ಸೇರಿ ನಡೆವ ಕನಸನು ನನಸಾಗಿಸಿ – ಪುಷ್ಪ ಹೆಚ್.ಎಸ್ಶಿವಮೊಗ್ಗ

Read More

ಲೇಖನ- ಹೇಮಲತಾ ಉದಯರಶ್ಮಿ ದಿನಪತ್ರಿಕೆ ಹುಡುಗ ಜಾಣ ಆದರೆ ಗುರಿಯೆಡೆಗೆ ಗಮನವಿಲ್ಲ. ಓದಲು ಪುಸ್ತಕ ತೆರೆದರೆ ಸಾಕು ಮೇಲಿಂದ ಮೇಲೆ ಆಕಳಿಕೆ ತೂಕಡಿಕೆ ಹಸಿವು ಎಲ್ಲಾ ಒಮ್ಮೆಲೇ ದಾಳಿ ಮಾಡಿ ಪುಸ್ತಕ ಮುಚ್ಚುವಂತೆ ಮಾಡುತ್ತಿತ್ತು. ಇದೇ ಕಾರಣಕ್ಕೆ ಅಂಕಗಳಲ್ಲಿ ಸರಾಸರಿ ತೆಗೆದು ಪಾಸ್ ಆಗುವುದೇ ಮಹಾ ಭಾಗ್ಯ ಎನ್ನುವಂತಾಗಿ ಅಪ್ಪನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ.ಮಗನ ಅಳು ಮ‌ನೆಯವರ ವಿರುಧ್ಧವಾದ ಅಭಿಪ್ರಾಯಗಳ ಮಧ್ಯೆಯೂ ದೀಪುವನ್ನು ಅವನ ತಂದೆ ದೊಡ್ಡ ಪಟ್ಟಣದ ಒಳ್ಳೆಯ ಹೆಸರಿದ್ದ ವಸತಿ ಸಮೇತದ ಶಾಲೆಗೆ ಸೇರಿಸಿ ಬಂದ.ಮರು ದಿನದಿಂದಲೇ ದೀಪುವಿಗೆ ಹಿರಿಯ ತರಗತಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ಹೆಸರಲ್ಲಿನ ಕಿರುಕುಳ ಶುರುವಾಗಿತ್ತು. ಹೇಳಿದಂತೆ ಕೇಳದಿದ್ದರೇ ಚಿತ್ರ ಹಿಂಸೆ ಕೊಟ್ಟು ಅವಹೇಳನ ಮಾಡಿ ನಗುತ್ತಾ ಶಾಲೆಯ ಎಲ್ಲರಿಗೂ ಇವನು ಬರೀ ಅಂಗಿ‌ ಚಡ್ಡಿ ಗಂಡಸು ಅಷ್ಟೇ. ಪುಕ್ಲ ಹುಡುಗಿರ ಹಾಗೆ, ಹೆಣ್ಣಪ್ಪಿ ಎಂದು ಉಳಿದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಕೀಳಾಗಿಸುತ್ತಿದ್ದರು. ಊರಿಂದ ಕಳಿಸಿದ್ದ ಚಕ್ಲಿ ಕೊಬ್ರಿ ಮಿಠಾಯಿ ಉಂಡೆಗಳನ್ನೆಲ್ಲಾ ಕಿತ್ತುಕೊಂಡು ಅವನ ಮುಂದೆಯೇ ಹಂಚಿ ತಿಂದಿದ್ದರು.…

Read More

ಹುಲಜಂತಿಯಲ್ಲಿ ಮಾಳಿಂಗರಾಯನಿಗೆ ಮುಂಡಾಸ ಕಾರ್ಯಕ್ರಮ | ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳ ಆಗಮನ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಸಮೀಪದ ಕರ್ನಾಟಕದ ಗಡಿಗೆ ಅಂಟಿಕೊಂಡಿರುವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನ ಮುಂಡಾಸವು ಇದೇ ಗುರುವಾರ ರಾತ್ರಿ ನೆರವೇರಲಿದ್ದು ಹಾಗೂ ಮಾಳಿಂಗರಾಯನ ಭೇಟಿ ಕಾರ್ಯಕ್ರಮವು ಶುಕ್ರವಾರದಂದು ನೆರವೇರಲಿರುವ ಹಿನ್ನಲೆಯಲ್ಲಿ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.ಗುರುವಾರದಂದು ನೆರವೇರುವ ಈ ಮುಂಡಾಸವನ್ನು ನೋಡಲು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಸಾಗರ ರಾತ್ರಿ ವೇಳೆಯಲ್ಲಿಯೇ ಆಗಮಿಸುತ್ತಿದೆ. ಈ ಮುಂಡಾಸ್ ಯಾವ ದಿಕ್ಕಿನೆಡೆಗೆ ವಾಲಿರುತ್ತದೆ ಎಂಬುದರ ಮೇಲೆ ಮುಂಬರುವ ರಾಜಕೀಯ, ಸಾಮಾಜಿಕ ಹಾಗೂ ಮಳೆ-ಬೆಳೆಯನ್ನು ವಿಶ್ಲೇಷಿಸುವುದು ಇಲ್ಲಿನ ವಿಶೇಷ.ಭಂಡಾರದಲ್ಲಿ ಮಿಂದೇಳುವ ಭಕ್ತ ಸಮೂಹ: ಶುಕ್ರವಾರದಂದು ಸಾಯಂಕಾಲ ೩ ಗಂಟೆಗೆ ಮಾಳಿಂಗರಾಯನ ಭೇಟಿ ಕಾರ್ಯಕ್ರಮದಲ್ಲಿ ಶಿರಾಡೋಣದ ಬೀರಲಿಂಗೇಶ್ವರ, ಏಣಕಿ ಜಕರಾಯ, ಹುನ್ನೂರು ಬೀರಲಿಂಗೇಶ್ವರ ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ಕಂಟಲು ಎತ್ತುಗಳು ದೇವಾಲಯದ ಎದುರಿನ ಹಳ್ಳದ…

Read More

ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಿಕೋಟಾ ತಾಲೂಕು ಮಟ್ಟದ ಸಮಾವೇಶ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪಟ್ಟಣದಲ್ಲಿ ಅ.೨೮ ರಂದು ವಿಶಾಲಾ ಸ್ವಯಂ ಸೇವಾ ಸಂಸ್ಥೆ, ವಿಜಯಪುರ ವತಿಯಿಂದ ಅಜೀಂ ಪ್ರೇಮಜಿ ಪ್ರತಿಷ್ಠಾನದ ನೆರವಿನಿಂದ ತಿಕೋಟಾ ತಾಲೂಕಿನ ೦೬ ಗ್ರಾಮ ಪಂಚಾಯತಿಗಳಲ್ಲಿ ರಚನೆಯಾದ ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಾಲೂಕು ಮಟ್ಟದ ಸಮಾವೇಶ ಜರುಗಿತು.ಸಮಾವೇಶಕ್ಕೆ ತಾಲೂಕು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕಗೊಂಡ ಚಾಲನೆ ನೀಡಿ, ಮಾತನಾಡಿದರು.ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಭಾಗಿಯಾದ ಎಲ್ಲ ಸದಸ್ಯರು ಇಲ್ಲಿ ಪಡೆದುಕೊಂಡ ಮಾಹಿತಿಯನ್ನು ನಿಮ್ಮ ಗ್ರಾಮದ ಇತರ ಜನರಿಗೂ ತಿಳಿಸಿ ಹೇಳಿ ಅವರಿಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರೇರೆಪಿಸಬೇಕು ಎಂದರು.ವಿಶಾಲಾ ಸಂಸ್ಥೆಯ ನಿರ್ದೇಶಕಿ ಸರೋಜಾ ಕಮಲಾಪುರ ಮಾತನಾಡಿ, ಸಂಸ್ಥೆ ಬೆಳೆದು ಬಂದ ದಾರಿಯ ಕುರಿತು ಮಾಹಿತಿ ನೀಡಿದರು.ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ ಮಾತನಾಡಿ, ಮಹಾತ್ಮ ಗಾಂಧಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರವಾನಗಿ ಭೂಮಾಪಕರರ ಮೇಲೆ ಪದೇ ಪದೇ ಪದೇ ಹಲ್ಲೆಯಾಗುತ್ತಿರುವುದನ್ನು ಖಂಡಿಸಿ, ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಪರವಾನಗಿ ಭೂಮಾಪಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಭೂಮಾಪನ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಬಸವನಬಾಗೇವಾಡಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಲ್ಹಾರ ತಾಲೂಕು ಕಾರ್ಯಕ್ಷೇತ್ರವನ್ನು ಹೊಂದಿರುವ ಭೂಮಾಪಕ ಸದಾನಂದ ಹೆಗಡ್ಯಾಳರವರ ಮೇಲೆ ಹಲ್ಲೆಯಾಗಿದ್ದನ್ನು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡು ಮನವಿ ಪತ್ರ ನೀಡಲಾಯಿತು.ಈ ವೇಳೆ ರಾಜ್ಯ ಸಂಘದ ಉಪಾಧ್ಯಕ್ಷ ಎಸ್ ಕೆ. ಗಂಗಾಧರ ಮಾತನಾಡಿ, ಅತೀ ಸೂಕ್ಷ್ಮಪ್ರಕರಣಗಳಾದಂತ ಹದ್ದುಬಸ್ತು, ಕೋರ್ಟಕೇಸ್, ಪೋಡಿ ಮತ್ತು ತಕರಾರು ಪ್ರಕರಣಗಳನ್ನು ಯಾವುದೇ ಸೇವಾಭದ್ರತೆ, ಜೀವಭದ್ರತೆ, ಸಹಾಯಕರು (ಬಾಂದಜವಾನರು) ಹಾಗೂ ಕನಿಷ್ಟವೇತನ ಇಲ್ಲದೇ ಪ್ರಕರಣಗಳನ್ನು ಹಂಚಿಕೆ ಮಾಡುತ್ತಿರುವುದು ಖಂಡನೀಯ. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.ಜಿಲ್ಲಾ ಅಧ್ಯಕ್ಷ ಲಾಲಸಾಬ ಹುಸೇನಸಾಬ ಮುಲ್ಲಾ ಮಾತನಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ನಿರ್ದೇಶಕರಾದ ಷಣ್ಮುಕ ಪಿ…

Read More

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಿವಿಧ ಬಡಾವಣೆ, ಕಾಲೊನಿಗಳಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್ ಮಾಡಿದ್ದರಿಂದ ಸಾರ್ವಜನಿಕರ ಆರೋಗ್ಯ ವೃದ್ಧಿಗೆ ಸಹಕಾರಿ ಆಗಿದೆ ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರಾಭಿವೃದ್ದಿ ಪ್ರಾಧಿಕಾರದಿಂದ ಸನ್ 2023ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಹಿಂದೇಯೇ ಮಂಜೂರಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ನಗರದ ವಿವಿಧೆಡೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು, ವೃದ್ಧರ ವಾಯು ವಿಹಾರಕ್ಕೆ ತುಂಬಾ ಅನುಕೂಲವಾಗಿದೆ ಎಂದರು.ಈ ಹಿಂದೆ ಗಾರ್ಡನ್ ಗಳಲ್ಲಿ ಬೇರೆ ಏನನ್ನು ನಿರ್ಮಾಣ ಮಾಡಲು ಬರುತ್ತಿರಲಿಲ್ಲ. ಅದಕ್ಕೆ ತಿದ್ದುಪಡಿ ಮಾಡಿಸಿ ಉದ್ಯಾನದ ಶೇ 10 ರಷ್ಟು ಜಾಗ ಬಳಸಿಕೊಂಡು, ಯೋಗಾ ಪ್ಲಾಟ್ ಫಾರ್ಮ್, ಸಾಂಸ್ಕೃತಿಕ ಭವನ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಶಾಸಕರ ನಿಧಿಯಲ್ಲಿ ಅನುದಾನ ಮಂಜೂರಿಸಿ ಹಂತ ಹಂತವಾಗಿ ನಗರದ ಎಲ್ಲ ಉದ್ಯಾನಗಳಲ್ಲಿಯೂ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.ದೇಸಾಯಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭವಿಷ್ಯದ ಭಾರತದ ಭದ್ರಬುನಾದಿಗೆ ಭ್ರಷ್ಟಾಚಾರವು ಒಂದು ಮಾರಕ ಪಿಡುಗಾಗಿದ್ದು ಅದನ್ನು ಎಲ್ಲರೂ ಸೇರಿ ಬೇರುಮಟ್ಟದಿಂದ ನಿರ್ಮೂಲನೆ ಮಾಡಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ .ಆರ್ .ಎಚ್. ರಮೇಶ ಕರೆ ನೀಡಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ “ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹʼ ಕಾರ್ಯಕ್ರಮ ಉದ್ಘಾಟಿಸಿಪ್ರತಿಜ್ಞಾವಿಧಿ ಬೋಧನೆ ಮಾಡಿ ಮಾತನಾಡಿದರು.ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ .ಆರ್ .ಎಚ್. ರಮೇಶ ಮಾತನಾಡಿ ʼ ಭವಿಷ್ಯದ ಭಾರತದ ಭದ್ರಬುನಾದಿಗೆ ಭ್ರಷ್ಟಾಚಾರವು ಒಂದು ಮಾರಕ ಪಿಡುಗಾಗಿದ್ದು ಅದನ್ನು ಎಲ್ಲರೂ ಸೇರಿ ಬೇರುಮಟ್ಟದಿಂದ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.ಎನ್. ಎಸ್.‌ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಪಿ.ಎಸ್.ದೇವರ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೂ.ಕಿರಣ ರೇವಣಕರ , ಪ್ರೊ.ಜಗದೀಶ ಮಡಿಕ್ಯಾಳ, ಡಾ.ಸುರೇಖಾ ವಾರದ, ಪ್ರೊ.ಸುನಂದಾ ಪೂಜಾರಿ, ಡಾ.ರಮೇಶ ಕತ್ತಿ, ಪ್ರೊ. ಸಿದ್ದಪ್ಪ ಓಲೇಕಾರ, ಪ್ರೊ.ಭಾರತಿ ಕನ್ನೋಳ್ಳಿ, ಸತೀಶಕುಮಾರ ಚುಂಚೂರ ಮತ್ತು ಕಾಲೇಜಿನ ಎಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿನ ೧೫,೦೦೦ ಎಕರೆ, ಕರ್ನಾಟಕ ರಾಜ್ಯದ ೧,೧೨,೦೦೦ ಎಕರೆ ಹಾಗೂ ಭಾರತ ದೇಶದಲ್ಲಿನ ೯,೪೬,೦೦೦ ಎಕರೆ ಜಮೀನನ್ನು ಯಾವ ಮುಸಲ್ಮಾನರು,“ವಕ್ಫ” ಬೋರ್ಡ್ಗೆ ದಾನ ನೀಡಿದರು ಯಾವಾಗ ನೀಡಿದರು? ಎಂಬುದನ್ನು ಬಹಿರಂಗಪಡಿಸಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಬಹಿರಂಗ ಸವಾಲು ಹಾಕಿದೆ.ಈ ಕುರಿತು ಮಂಗಳವಾರ ಪ್ರಕಟಣೆಯಲ್ಲಿ ಸವಾಲು ಹಾಕಿದ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಅವರು, ಕಾಂಗ್ರೆಸ್ ನಾಯಕರಿಗೆ ಹಲವುಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.೨೦೦೯ರಲ್ಲಿ ೪,೦೦,೦೦೦ ಎಕರೆ ಇದ್ದಂತಹ ವಕ್ಫ್ ಆಸ್ತಿ ಇಂದು ೯,೪೬,೦೦೦ ಎಕರೆ ಹೇಗಾಯಿತು ? ೨೦೧೩ ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ, ಭಾರತ ಸರ್ಕಾರದ ೧೨೩ ಪ್ರಮುಖ ಆಸ್ತಿಗಳನ್ನು ವಕ್ಫ್ ಬೋರ್ಡಿಗೆ ಏಕೆ ನೀಡಿತು ? ಎಂಬುದನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಿ… ಬಹಿರಂಗಪಡಿಸಿದರೆ, ವಕ್ಫ್ ಬೋರ್ಡ್ಗೆ ದಾನ ನೀಡಿದ ಮಹಾ ದಾನಿಗಳನ್ನು, ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಗುವುದು ಎಂದಿದ್ದಾರೆ.೧೯೭೪, ೧೯೭೭ ಹಾಗೂ ೨೦೧೬ ರಲ್ಲಿ ಯಾವ ಆಧಾರದ ಮೇಲೆ ಕಾಂಗ್ರೆಸ್…

Read More

ರೈತರ ಜಮೀನು ವಕ್ಫ್ ಮಂಡಳಿ ಹೆಸರಿಗೆ ಅಕ್ರಮ ವರ್ಗಾವಣೆ ಪ್ರಕರಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಕೃಷಿ ಭೂಮಿಯನ್ನು ರಾಜಕೀಯ ದುರುದ್ದೇಶದಿಂದ ಅಕ್ರಮವಾಗಿ ಕರ್ನಾಟಕ ವಕ್ಫ್ ಮಂಡಳಿಗೆ ವರ್ಗಾವಣೆ ಮಾಡಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಕ್ರಮಕ್ಕೆ ಮುಂದಾಗಿದೆ. ಇದನ್ನು ಖಂಡಿಸಿ ಬಾಧಿತರ ಪರ ಧ್ವನಿಯಾಗಲು ರೈತ ಭಾರತ ಪಕ್ಷ ದಿಂದ ನವೆಂಬರ್ ಎರಡನೇ ವಾರ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ರಾಜಕೀಯ ದುರುದ್ದೇಶದಿಂದ ಜಾತಿ, ಮತ, ಪಂಥಗಳ ಹೆಸರಿನಲ್ಲಿ ಸಮಾಜವನ್ನು ಒಡೆದಾಳುವ ಕೆಲಸ ಮಾಡಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತ ಬಂದಿವೆ. ಇದೀಗ ಕಾಂಗ್ರೆಸ್ ಸರ್ಕಾರ ರೈತರ ಹೆಸರಿನಲ್ಲಿ ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸಲು ಮುಂದಾಗಿ. ಇದನ್ನು ಬಳಸಿಕೊಂಡು ರಾಜ್ಯದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ವಕ್ಫ ಸಚಿವ…

Read More