ಉದಯರಶ್ಮಿ ದಿನಪತ್ರಿಕೆ
ರಂಗೇರಿದ ಹಾಗಿದೆ ತಂಗಾಳಿ ನೋಡು
ಹೂಗಳ ಕಂಪ ಸೂಸಿ ಹಾಡಿದೆ ಹಾಡು
ಹಿತವಾಗಿ ನುಡಿಸಿದೆ ಸುಮಧುರ ಧಾಟಿ
ನಿನ್ನೊಲವ ಭಾವದ ವೀಣೆಯ ಮೀಟಿ
ಚೆಲುವೇರಿದೆ ತಾಣ ನಿನ್ನೆಡೆಗೆ ಬರುವಾಗ
ಹಿತವಾಗಿದೆ ದಿನ ಮೊಗದಿ ನಗು ಕಂಡಾಗ
ಅರಿಯದ ತವಕ ಹೃದಯವ ತುಂಬಿದಾಗ
ಅದೇನೋ ಹುರುಪು ಹೆಜ್ಜೆಗಳಿಗೆ ಈಗೀಗ
ಮನಸಾಗಿದೆ ಮರುಳಂತೆ ಕನಸ ಕೂಡಿಸಿ
ಸೊಗಸಾದ ಹೂಗಳ ಹೃದಯದಿ ಅರಳಿಸಿ
ಬಯಲಾಗಿದೆ ಒಲವು ಮನಸನು ಸೇರಿಸಿ
ಜೊತೆ ಸೇರಿ ನಡೆವ ಕನಸನು ನನಸಾಗಿಸಿ
– ಪುಷ್ಪ ಹೆಚ್.ಎಸ್
ಶಿವಮೊಗ್ಗ