ಉದಯರಶ್ಮಿ ದಿನಪತ್ರಿಕೆ
ಇಂಡಿ: ಭವಿಷ್ಯದ ಭಾರತದ ಭದ್ರಬುನಾದಿಗೆ ಭ್ರಷ್ಟಾಚಾರವು ಒಂದು ಮಾರಕ ಪಿಡುಗಾಗಿದ್ದು ಅದನ್ನು ಎಲ್ಲರೂ ಸೇರಿ ಬೇರುಮಟ್ಟದಿಂದ ನಿರ್ಮೂಲನೆ ಮಾಡಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ .ಆರ್ .ಎಚ್. ರಮೇಶ ಕರೆ ನೀಡಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ “ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹʼ ಕಾರ್ಯಕ್ರಮ ಉದ್ಘಾಟಿಸಿ
ಪ್ರತಿಜ್ಞಾವಿಧಿ ಬೋಧನೆ ಮಾಡಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ .ಆರ್ .ಎಚ್. ರಮೇಶ ಮಾತನಾಡಿ ʼ ಭವಿಷ್ಯದ ಭಾರತದ ಭದ್ರಬುನಾದಿಗೆ ಭ್ರಷ್ಟಾಚಾರವು ಒಂದು ಮಾರಕ ಪಿಡುಗಾಗಿದ್ದು ಅದನ್ನು ಎಲ್ಲರೂ ಸೇರಿ ಬೇರುಮಟ್ಟದಿಂದ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.
ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಪಿ.ಎಸ್.ದೇವರ ಪ್ರಾಸ್ತಾವಿಕ ಮಾತುಗಳನ್ನಾಡಿದರು,
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೂ.ಕಿರಣ ರೇವಣಕರ , ಪ್ರೊ.ಜಗದೀಶ ಮಡಿಕ್ಯಾಳ, ಡಾ.ಸುರೇಖಾ ವಾರದ, ಪ್ರೊ.ಸುನಂದಾ ಪೂಜಾರಿ, ಡಾ.ರಮೇಶ ಕತ್ತಿ, ಪ್ರೊ. ಸಿದ್ದಪ್ಪ ಓಲೇಕಾರ, ಪ್ರೊ.ಭಾರತಿ ಕನ್ನೋಳ್ಳಿ, ಸತೀಶಕುಮಾರ ಚುಂಚೂರ ಮತ್ತು ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ಪ್ರೊ.ಕವೀಂದ್ರಕುಮಾರ ಚಾಬುಕಸ್ವಾರ ನಿರೂಪಿಸಿದರು ಡಾ.ವಿಜಯಮಹಾಂತೇಶ ದೇವರ ವಂದಿಸಿದರು,

