Author: editor.udayarashmi@gmail.com

ಕೇಂದ್ರ ಸಚಿವ ಕುಮಾರಸ್ವಾಮಿಗೆ ‘ಕರಿಯಾ’ ಎಂದಿದ್ದಕ್ಕೆ ಕ್ಷಮೆ | ಸಚಿವ ಜಮೀರ್ ವಜಾಗೆ ಜೆಡಿ(ಎಸ್) & ಬಿಜೆಪಿ ಒತ್ತಾಯ ಮೈಸೂರು: ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ‘ಕಾಲಿಯಾ’ ಎಂದು ಕರೆದಿದ್ದ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.ಜಮೀರ್ ಅಹ್ಮದ್ ಖಾನ್ ಅವರ ಕಾಲಿಯಾ ಹೇಳಿಕೆಯನ್ನು ಎನ್‌ಡಿಎ “ಜನಾಂಗೀಯ” ನಿಂದನೆ ಎಂದು ಟೀಕಿಸಿತ್ತು.ವಸತಿ ಮತ್ತು ವಕ್ಫ್ ಸಚಿವರು ಜಮೀರ್ ಅಹ್ಮದ್ ಖಾನ್ ಅವರು ಈ ಹಿಂದೆ JD(S)ನಲ್ಲಿದ್ದರು ಮತ್ತು ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಕುಮಾರಸ್ವಾಮಿಯವರಿಗೆ ಅತ್ಯಂತ ಆಪ್ತರಾಗಿದ್ದರು. ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಪ್ರೀತಿಯಿಂದ ಹಾಗೆ ಕರೆಯುತ್ತಿದ್ದೆ. ಅವರು ಕುಳ್ಳ ಎಂದು ಕರೆಯುತ್ತಿದ್ದರು. ನಾನು ಕರಿಯಣ್ಣ ಎಂದು ಕರೆಯುತ್ತಿದ್ದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಯೋಗ, ಭಜನೆ ಹಾಗೂ ಆಧ್ಯಾತ್ಮೀಕ ವಿಚಾರಗಳು ನಮ್ಮ ಆರೋಗ್ಯಪೂರ್ಣ, ಶಾಂತಿಯುತ ಜೀವನಕ್ಕೆ ಅತೀ ಅಗತ್ಯವಾಗಿವೆ ಎಂದು ಯೋಗ ಹಾಗೂ ಆಧ್ಯಾತ್ಮಗುರು ನಿರಂಜನ ಸ್ವಾಮೀಜಿ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಭಾನುವಾರ ಜರುಗಿದ ಹಿಮಾಲಯನ್ ಧ್ಯಾನಯೋಗ, ಸಾಮೂಹಿಕ ಭಜನೆ ಹಾಗೂ ಆದ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದಲ್ಲಿ ೧೭ ದಿನಗಳ ಯಶಸ್ವಿ ಕಾರ್ಯಕ್ರಮ ಸಂಪನ್ನಗೊಳಿಸಿ ಅವರು ಮಾತನಾಡಿದರು.ಯೋಗ ಕೇವಲ ರೋಗಿಗಳಿಗೆ ಮಾತ್ರ ಎಂಬ ಭಾವನೆ ತಪ್ಪು. ಯೋಗದಿಂದ ನಾವು ಯೋಗಿಗಳಾಗಬೇಕು ಜೊತೆಗೆ ದೈನಂದಿನ ಜೀವನ ಆನಂದಮಯವಾಗಬೇಕು ಅದಕ್ಕಾಗಿ ನಾವು ನಿತ್ಯ ಯೋಗ, ಭಜನೆ ಹಾಗೂ ಉತ್ತಮ ವಿಚಾರಗಳನ್ನು ರೂಢಿಸಿಕೊಂಡು ಅನುಸರಿಸಬೇಕು ಎಂದರು.ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿ, ಯಾವುದೇ ಆಡಂಬರಗಳಿಲ್ಲದ ಸರಳ, ಸುಂದರ ಯೋಗಪದ್ಧತಿ ಹಾಗೂ ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ವಿಷಯಗಳನ್ನು ಮನಮುಟ್ಟುವಂತೆ ತಿಳಿಸುವುದರ ಮೂಲಕ ಶ್ರೀಗಳು ೧೭ ದಿನಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಪಟ್ಟಣದ ಜನತೆಯ ಭಾಗ್ಯವಾಗಿದೆ ಎಂದರು.ಯೋಗ ಉತ್ಸವ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಜನತೆಗೆ ಒಳ್ಳೆಯದಾಗಲಿ, ಸರಕಾರದ ಯೋಜನೆಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಸಿಂದಗಿ ಕೃಷಿ ಇಲಾಖೆಯ ಸಹಯೋಗದಲ್ಲಿ ೨೦೨೪-೨೫ನೆಯ ಸಾಲಿನ ಜಲಾನಯನ ಅಭಿವೃದ್ಧಿ ಇಲಾಖೆಯ ಆರ್.ಡಿ.ಎ-ಆರ್.ಕೆ.ವಿ.ವಾಯ್-ಆರ್.ಎ.ಎಫ್.ಟಿ.ಎ.ಎ.ಆರ್ ಯೋಜನೆಯಡಿಯಲ್ಲಿ ಹಸು ವಿತರಣಾ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಹಮ್ಮಿಕೊಂಡ ಮಂಜೂರಾತಿ ಪತ್ರ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಮತ್ತು ಜೀವನದ ಉಪಯೋಗಕ್ಕಾಗಿ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಹಸು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಸಿಂದಗಿ ಮತಕ್ಷೇತ್ರದ ಗೋಲಗೇರಿ ಗ್ರಾಪಂಯನ್ನು ಗೋಲಗೇರಿ, ಡಂಬಳ, ಅಲ್ಲಾಪೂರ, ಸಾಸಾಬಾಳ ಗ್ರಾಮಗಳನ್ನು ಆಯ್ಕೆಮಾಡಲಾಗಿದೆ. ಮುಂಬರುವ ದಿನಮಾನಗಳಲ್ಲಿ ಹಂತ ಹಂತವಾಗಿ ಉಳಿದ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಆಯ್ಕೆಮಾಡಲಾಗುವುದು. ತಾಲೂಕು ಇಂದು ನೀರಾವರಿಯಿಂದ ಕೂಡಿದೆ. ಹೈನುಗಾರಿಕೆಯಿಂದ ಕೃಷಿಯಲ್ಲಿ ಸಾಧನೆ ಮಾಡಬಹುದು. ಹೈನುಗಾರಿಕೆಯಿಂದ ನಮ್ಮ ಜೀವನವನ್ನೇ ರೂಪಿಸಿಕೊಳ್ಳಬಹುದು.…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಪುರಸಭೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಂಗಳವಾರ ದಿಢೀರ ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಲ್ಲಿರುವ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿದ್ದೇನೆ. ಆಸ್ತಿ ತೆರಿಗೆ ಮತ್ತು ಇತರ ಸಂಪನ್ಮೂಲಗಳ ಬಗೆಗಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡುವಂತೆ ಸೂಚಿಸಿದ್ದೇನೆ. ಕುಡಿಯುವ ನೀರು, ಚರಂಡಿ ಸೇರಿದಂತೆ ಸಿವ್ಹಿಲ್ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ತ್ವರಿತವಾಗಿ ಮುಗಿಸುವಂತೆ, ನಗರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸರಿಯಾಗಿ ನಿಭಾಯಿಸುವಂತೆ, ರೈತರಿಗೆ ಸಾರ್ವಜನಿಕರಿಗೆ ಅವರ ಕೆಲಸಗಳಲ್ಲಿ ಸತಾಯಿಸದೇ ಬೇಗನೆ ಮಾಡಿಕೊಡುವಂತೆ, ತಾಲೂಕಿನ ಎಲ್ಲ ಸರ್ಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿರುವದಾಗಿ ತಿಳಿಸಿದರು.ಈ ವೇಳೆ ಜಿಲ್ಲಾ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಇಂಜೀನಿಯರ್ ಭೀಮನಗೌಡ ಬಗಲಿ, ಎಸ್.ಐಗಳಾದ ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು. ಪುರಸಭೆ ಕಾಯ್ದೆಗೆ ವಿರುದ್ಧ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಲ್ಲಿನ ಹುಡ್ಕೋ ಗೇಟ್ ಬಳಿ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಅವೈಜ್ಞಾನಿಕವಾದ ರೋಡ್ ಬ್ರೇಕರ್ ಅಳವಡಿಸಿದ ಪರಿಣಾಮ ವಾಹನಗಳ ವೇಗಕ್ಕೆ ಯಾವುದೇ ಕಡಿವಾಣ ಹಾಕಿದಂತಾಗಿರಲಿಲ್ಲ. ಅಪಘಾತಗಳು ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಇಲ್ಲಿನ ನಗರಾಭಿವೃದ್ಧಿ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನಂದಿಕೇಶ್ವರಮಠ ಹೋರಾಟಗಾರರಾದ ನಾಗೇಂದ್ರ ಶಿವಶಿಂಪಿ ಮತ್ತು ರಫೀಕ ಬೀಳಿಗಿ “ಉದಯರಶ್ಮಿ” ಪತ್ರಿಕೆಗೆ ದೂರಿದ್ದರು. ಈ ಬಗ್ಗೆ ಪತ್ರಿಕೆ “ಅವೈಜ್ಮಾನಿಕ ರೋಡ್ ಬ್ರೆಕರ್ ಸರಿಪಡಿಸಲು ನಾಗರಿಕರ ಆಗ್ರಹ” ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.ಸುದ್ದಿಗೆ ಎಚ್ಚೆತ್ತ ಅಧಿಕಾರಿಗಳು ಸೋಮವಾರ ರಾತ್ರಿ ಸರಿಯಾದ ಜಾಗೆಯಲ್ಲಿ ಹಂಪ್ ಅಳವಡಿಸಿದ್ದಾರೆ.ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹೋರಾಟಗಾರರು ’ಉದಯರಶ್ಮಿ’ ಪತ್ರಿಕೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read More

ಜಿಲ್ಲೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಂಡ ಭೇಟಿ | ಜಿಪಂ ಸಿಇಒ ಅವರ ನೇತೃತ್ವದಲ್ಲಿ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಎನ್‌ಲ್‌ಎಂ ( ನ್ಯಾಷನಲ್ ಲೆವೆಲ್ ಇನಸ್ಟಿಟ್ಯೂಷನಲ್ ಮಾನಿಟರ್) ಗಾಂಧಿ ಗ್ರಾಮ ರೂರಲ್ ಇನ್ಸ್ಟಿಟ್ಯೂಟ್ ತಮಿಳುನಾಡು ಅಧಿಕಾರಿಗಳಾದ ಡಾ.ಎ.ಆರ್.ಮಣಿ ಹಾಗೂ ಇ.ಆರ್.ಕೆ ರೋಸಿವ್ ಇವರೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತಿಯಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆ ಕೈಗೊಂಡ ಕ್ರೊಢೀಕೃತ ಸಂಪೂರ್ಣ ಮಾಹಿತಿಯ ಪ್ರಕಾರ ಕೇಂದ್ರ ಪ್ರಾಯೋಜಕತ್ವದ ಯೋಜನೆಗಳ ಅನುಷ್ಠಾನದ ಕುರಿತು ತಮ್ಮ ವರದಿಯಲ್ಲಿ ನಮೂದಿಸಿಕೊಂಡ ವಿಷಯದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಸರ್ಕಾರಿ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಬೋರ್‌ವೆಲ್ ಮರುಪೂರಣ ಘಟಕ, ಅಮೃತ ಸರೋವರ, ಎನ್.ಆರ್.ಎಲ್.ಎಮ್ ಯೋಜನೆ, ಪಿಂಚಣಿ ಯೋಜನೆಗಳು, ವಸತಿ ಯೋಜನೆ ಕಾಮಗಾರಿಗಳು, ಸಾಮಾಜಿಕ ಅರಣ್ಯೀಕರಣ ಕಾಮಗಾರಿಗಳು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಂಡಿವೆ ಎಂದರು.ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳಾದ ಸರ್ಕಾರಿ ಶಾಲಾ…

Read More

ಉದಯರಶ್ಮಿ ದಿನಪತ್ರಿಕೆ ಬಸವಕಲ್ಯಾಣ: ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಇದರ ಅಡಿಯಲ್ಲಿ ಬಸವಕಲ್ಯಾಣದಲ್ಲಿ ನಡೆದ ಎರಡು ದಿನದ ಕಾರ್ಯಾಗಾರದಲ್ಲಿ 12 ನೆಯ ಶತಮಾನದ ಶರಣರ ಜೀವನ ಪರಿಚಯ ಕುರಿತು ಕಥಾ ಲೇಖನ ಹಾಗೂ ಶರಣರ ವಚನಗಳ ಪರಿಷ್ಕೃತ ಆವೃತ್ತಿಗಳನ್ನು ಒಳಗೊಂಡ ಸಾಹಿತ್ಯವನ್ನು ಸಿದ್ಧಪಡಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಆ ಮೂಲಕ ಕಾರ್ಯನಿರ್ವಹಿಸುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.ಡಾ.ಬಾಬಾಸಾಹೇಬ ಗಡ್ಡೆ ಅವರು, ಹೊಸ ಅನುಭವ ಮಂಟಪದ ವೀಕ್ಷಣೆ ಮತ್ತು ವಿವರಣೆಯನ್ನು, ಶರಣರ ತತ್ವಸಿದ್ಧಾಂತದೊಂದಿಗೆ ಮತ್ತು ಹೊಸ ಕಾರ್ಯ ತಂತ್ರಜ್ಞತೆಯೊಂದಿಗೆ ಹೇಗೆ ರೂಪುಗೊಳ್ಳುತ್ತಿದೆ ಕುರಿತು ಹಾಗೂ ಶರಣರ ಸಂವಾದ ಮತ್ತು ಸಂಭಾಷಣೆ ಮತ್ತು ವಚನಕಾರರ ಚರಿತ್ರೆ ಪ್ರಾತ್ಯಕ್ಷಿಕೆಯ ಕುರಿತು ವಿವರಿಸಿದರು.ಪುಣೆಯ ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಶಶಿಕಾಂತ ಪಟ್ಟಣ ಅವರು, ಶರಣರ ಚರಿತ್ರೆ ರಚನೆ ಹಾಗೂ ವಚನಗಳ ಶುದ್ದೀಕರಣ ಮತ್ತು ಪ್ರಕ್ಷಿಪ್ತ ನಿವಾರಣೆಯ ಅಗತ್ಯತೆ ಕುರಿತು ಮಾತನಾಡಿದರು.ಶರಣೆ ಗೌರಮ್ಮ ನಾಶಿ,…

Read More

ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ರಾಜ್ಯೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾಷೆಗಳು ಕೇವಲ ಮಾತನಾಡುವ ಮಾಧ್ಯಮ ಮಾತ್ರವಲ್ಲ, ಬದಲಿಗೆ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತಿಬಿಂಬವಾಗಿರುತ್ತವೆ. ವಿಶ್ವದ ಲಿಪಿಗಳ ರಾಣಿಯಾಗಿ ಗುರುತಿಸಿಕೊಂಡಿರುವ ಕನ್ನಡ ಭಾಷೆ ಕೇವಲ ಭಾಷೆ ಮಾತ್ರವಾಗಿರದೆ ಅದು ನಮ್ಮ ಜೀವನಾಡಿಯಾಗಿದೆ. ಹೀಗಾಗಿ ಅದನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಕಾರಣ ಒಂದು ಭಾಷೆ ನಾಶವಾದರೆ ಒಂದು ಪರಂಪರೆಯೇ ನಾಶವಾಗುತ್ತದೆ. ಆದ ಕಾರಣ ಅದನ್ನು ಉಳಿಸುವ ಕೆಲಸ ನಮ್ಮಿಂದ ನಡೆಯಬೇಕು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ರಾಜ್ಯೋತ್ಸವದ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡದ ಉತ್ಸವ ನಿತ್ಯೋತ್ಸವವಾಗಬೇಕು ಎಂದರು.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಮಾತನಾಡಿ, ಕನ್ನಡಿಗರ ಗುಣದಷ್ಟೆ ಕನ್ನಡ ಸುಂದರವಾಗಿದ್ದು ಒಂದೊಂದು ಭಾಗಕ್ಕೆ…

Read More

ಬೆಳಗಾವಿ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿ | ಬೆಳಗಾವಿ ತಂಡ ರನ್ನರ್ ಅಪ್ | ಲವ ಮಾದರ ಗೆ ಆಲ್ ರೌಂಡರ್ ಪ್ರಶಸ್ತಿ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿನ ಡ್ಯಾಂಸೈಟ್ ನ ಸರ್ಕಾರಿ ಶಾಲಾ ಮೈದಾನದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿಜಯಪುರದ ಬಾಲಕ ಮತ್ತು ಬಾಲಕಿಯರ ತಂಡ (14 ವಯೋಮಾನದೊಳಗಿನ) ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು.ತೀವ್ರ ಕುತೂಹಲ ಕೆರಳಿಸಿದ್ದ ಬಾಲಕರ ಅಂತಿಮ ಪಂದ್ಯದಲ್ಲಿ ವಿಜಯಪುರ ತಂಡ 10 ಅಂಕ ಗಳಿಸಿತು. ಅದರ ಎದುರಾಳಿ ಬೆಳಗಾವಿ ತಂಡವು 7 ಅಂಕ ಗಳಿಸಿ, ಮೂರು ಅಂಕಗಳ ಅಂತರದಿಂದ ಸೋಲನ್ನಪ್ಪಿ ರನ್ನರ್ ಅಪ್ ಆಯಿತು.ವಿಜಯಪುರ ತಂಡದ ಲವ ಮಾದರ ಆಲ್ ರೌಂಡರ್ ಪ್ರಶಸ್ತಿಗೆ, ಇದೇ ತಂಡದ ರುದ್ರಗೌಡ ಬಿರಾದಾರ ಉತ್ತಮ ರನ್ನರ್ ಹಾಗೂ ಬೆಳಗಾವಿಯ ಹೊನ್ನಪ್ಪ ತರಾಟೆ ಬೆಸ್ಟ್ ಚೇಸರ್ ವೈಯಕ್ತಿಕ ಪ್ರಶಸ್ತಿ ಪಡೆದರು.ಬಾಲಕಿಯರ ಅಂತಿಮ ಸ್ಪರ್ಧೆ ಏಕಪಕ್ಷೀಯವಾಯಿತು. ವಿಜಯಪುರ ತಂಡ 16 ಅಂಕ, ಬೆಳಗಾವಿ ತಂಡ 8 ಅಂಕ…

Read More

ಉದ್ಘಾಟಿಸಿ ದಿನಪತ್ರಿಕೆ ವಿಜಯಪುರ: ನಗರದ ಕಂದಗಲ್ಲ ಹಣಮಂತ್ರಾಯ ರಂಗ ಮಂದಿರದಲ್ಲಿ ಶರಣು ಸಬರದರವರ ಜಿಲ್ಲಾ ಯುವಪರಿಷತ್, ಪ್ರೀತಿ ಮೋಹನ್ ಕಟ್ಟಿಮನಿಯವರ ಎಸ್.ಪಿ.ಎಂಟರ್ ಪ್ರೈಸಸ್, ಪ್ರಕಾಶ ಮಠ ಅವರ ಇವೆಂಟ್ರಾ ಇಂಟ್ರನ್ಯಾಷನಲ್ ರವರ ಆಯೋಜನೆಯಲ್ಲಿ, ಸ್ಪಂದನಾ ಬೆಂಗಳೂರ ರವರ ತಂಡದಿಂದ ಖ್ಯಾತ ರಂಗ ನಿರ್ದೇಶಕಿ ಬಿ.ಜಯಶ್ರೀ, ಚಿತ್ರ ನಟ ರಮೇಶ ಪಂಡಿತ್ ಮತ್ತು ಸಹಕಾಲಾವಿದರು ಅಭಿನಯಿಸಿದ ಚಂದ್ರಶೇಖರ ಕಂಬಾರವರ ಕಾದಂಬರಿ ಆಧಾರಿತ ನಾಟಕ ’ಕರಿಮಾಯಿ’ ನಾಟಕವನ್ನು ಬಿ.ಜಯಶ್ರೀ ಹಾಗೂ ನಾಟಕದ ಪ್ರಾಯೋಜಕರು ಉದ್ಘಾಟಿಸಿ, ಈ ತರಹದ ನಾಟಕಗಳನ್ನು ನಗರ ಪ್ರದೇಶದಲ್ಲಿ ಆಯೋಜಿಸುವುದರಿಂದ ನಮ್ಮ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವದರೊಂದಿಗೆ ರಂಗ ಕಲೆಯನ್ನು ಜೀವಂತವಾಗಿರಿಸಿದ ನಮ್ಮಂತಹ ಕಲಾವಿದರಿಗೆ ಪ್ರೋತ್ಸಾಹವಾಗುತ್ತದೆಂದು ಹೇಳಿದರು.ಈ ನಾಟಕ ಆಯೋಜನೆಯ ಪ್ರೇರಣಾಶಕ್ತಿಯಾದ ನಗರದ ಡಿ.ಎಸ್.ಪಿ ಬಸವರಾಜ ಯಲಿಗಾರ ಅವರು ಮಾತನಾಡಿ, ಈ ನಾಡಿನಲ್ಲಿ ನೈಜತೆಯ ಸಂಸ್ಕಾರ ಉಳಿಯಬೇಕಾದರೆ ಇಂತಹ ನಾಟಕಗಳ ಪ್ರದರ್ಶನ ಅವಶ್ಯವಿದೆ. ಇಂತಹ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆಂದು ಹೇಳಿದರಲ್ಲದೆ,ಮನೋಜ್ಞವಾಗಿ ನಾಟಕವನ್ನು ಅಭಿನಯಿಸುವ ಮೂಲಕ ಮೌಢ್ಯ ಮತ್ತು ರಾಜಕೀಯ ಎರಡೂ…

Read More