ಉದ್ಘಾಟಿಸಿ ದಿನಪತ್ರಿಕೆ
ವಿಜಯಪುರ: ನಗರದ ಕಂದಗಲ್ಲ ಹಣಮಂತ್ರಾಯ ರಂಗ ಮಂದಿರದಲ್ಲಿ ಶರಣು ಸಬರದರವರ ಜಿಲ್ಲಾ ಯುವಪರಿಷತ್, ಪ್ರೀತಿ ಮೋಹನ್ ಕಟ್ಟಿಮನಿಯವರ ಎಸ್.ಪಿ.ಎಂಟರ್ ಪ್ರೈಸಸ್, ಪ್ರಕಾಶ ಮಠ ಅವರ ಇವೆಂಟ್ರಾ ಇಂಟ್ರನ್ಯಾಷನಲ್ ರವರ ಆಯೋಜನೆಯಲ್ಲಿ, ಸ್ಪಂದನಾ ಬೆಂಗಳೂರ ರವರ ತಂಡದಿಂದ ಖ್ಯಾತ ರಂಗ ನಿರ್ದೇಶಕಿ ಬಿ.ಜಯಶ್ರೀ, ಚಿತ್ರ ನಟ ರಮೇಶ ಪಂಡಿತ್ ಮತ್ತು ಸಹಕಾಲಾವಿದರು ಅಭಿನಯಿಸಿದ ಚಂದ್ರಶೇಖರ ಕಂಬಾರವರ ಕಾದಂಬರಿ ಆಧಾರಿತ ನಾಟಕ ’ಕರಿಮಾಯಿ’ ನಾಟಕವನ್ನು ಬಿ.ಜಯಶ್ರೀ ಹಾಗೂ ನಾಟಕದ ಪ್ರಾಯೋಜಕರು ಉದ್ಘಾಟಿಸಿ, ಈ ತರಹದ ನಾಟಕಗಳನ್ನು ನಗರ ಪ್ರದೇಶದಲ್ಲಿ ಆಯೋಜಿಸುವುದರಿಂದ ನಮ್ಮ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವದರೊಂದಿಗೆ ರಂಗ ಕಲೆಯನ್ನು ಜೀವಂತವಾಗಿರಿಸಿದ ನಮ್ಮಂತಹ ಕಲಾವಿದರಿಗೆ ಪ್ರೋತ್ಸಾಹವಾಗುತ್ತದೆಂದು ಹೇಳಿದರು.
ಈ ನಾಟಕ ಆಯೋಜನೆಯ ಪ್ರೇರಣಾಶಕ್ತಿಯಾದ ನಗರದ ಡಿ.ಎಸ್.ಪಿ ಬಸವರಾಜ ಯಲಿಗಾರ ಅವರು ಮಾತನಾಡಿ, ಈ ನಾಡಿನಲ್ಲಿ ನೈಜತೆಯ ಸಂಸ್ಕಾರ ಉಳಿಯಬೇಕಾದರೆ ಇಂತಹ ನಾಟಕಗಳ ಪ್ರದರ್ಶನ ಅವಶ್ಯವಿದೆ. ಇಂತಹ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆಂದು ಹೇಳಿದರಲ್ಲದೆ,
ಮನೋಜ್ಞವಾಗಿ ನಾಟಕವನ್ನು ಅಭಿನಯಿಸುವ ಮೂಲಕ ಮೌಢ್ಯ ಮತ್ತು ರಾಜಕೀಯ ಎರಡೂ ಬಹು ಅಪಾಯಕಾರಿಯಾದುದು ಎಂಬ ಸಂದೇಶ ಇದರಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಾರನಾಳದ ಸಂಗನಬಸವ ಶ್ರೀಗಳು, ವೇದ ಅಕಾಡಮಿಯ ಡಾ.ಶಿವಾನಂದ ಕೆಲೂರ, ರೀಶ್ವಿಕ್ ಅಫ್ಟಿಕಲ್ಸನ ಮಾಲೀಕರು, ರೂಡಗಿ ಡೆವಲಪರ್ಸ್ ಮಾಲೀಕರು, ಹುಂಡೈ ಶೋರೂಮ್ ಮಾಲೀಕರು, ಸಹ ಪ್ರಯೋಜಕರಾದ ಮಧುರ ತೈಲ ಕಂಬಾಗಿ, ಹೋಟಲ್ ರಾಮಕೃಷ್ಣ ಪ್ಯಾಲೇಸ್, ಶಿವಾನಂದ ಮಗ್ಗದ, ದೇವರಾಜ್ ಶಾಸ್ತ್ರೀ, ಸಂಗಮೇಶ ಹೊಸಮನಿ, ಶಾಂತು ದೊಡ್ಡಮನಿ, ನಿರೂಪಕಿ ಸಾನಿಯಾ, ಬಿ.ಎಸ್.ಬಿರಾದಾರ, ಸೀಮಾ ಟಕ್ಕಣ್ಣವರ, ವಿಶ್ವನಾಥ ಬಿರಾದಾರ್, ಡಾ.ಸುನಿಲ್ ರಾಠೋಡ, ನಗರದ ಸಾಹಿತಿಗಳು, ಸಮಸ್ತ ರಂಗಕಲೆಯ ಆಸಕ್ತರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

