ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಸತತ ೨೧ ವರ್ಷಗಳಿಂದ ಪಾದಯಾತ್ರೆಯ ಮೂಲಕ ಯಾತ್ರೆ ಕೈಗೊಂಡಿರುವ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಏಳಬೆಂಚಿ ಗ್ರಾಮದ ಭಕ್ತಾಧಿಗಳು ಪಟ್ಟಣದ ಭಕ್ತರ ಊಟೋಪಚಾರದ ಸೇವೆಯ ನಂತರ ಪಂಢರಾಪುರಕ್ಕೆ ಪಾದಯಾತ್ರೆ ಬೆಳೆಸಿದರು.
ಸೋಮವಾರ ಪಟ್ಟಣಕ್ಕೆ ಆಗಮಿಸಿದ ಅರವತ್ತಕ್ಕೂ ಹೆಚ್ಚು ಯಾತ್ರಾರ್ಥಿಗಳು ಆದಿಗುರು ಜಿ.ಪಾಂಡುರಂಗಸ್ವಾಮಿ, ಪಂಪಣ್ಣಸ್ವಾಮಿ ನೇತೃತ್ವದಲ್ಲಿ ಕೀರ್ತನೆ, ಭಜನೆಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಮಡಿವಾಳಪ್ಪ ಕುಂಬಾರ ಯಾತ್ರಾರ್ಥಿಗಳಿಗೆ ಮಧ್ಯಾನ್ಹದ ಊಟದ ವ್ಯವಸ್ಥೆ ಕಲ್ಪಿಸಿದರು.
ಪ್ರತಿ ವರ್ಷದ ಪಾದಯಾತ್ರೆ ಸಮಯಕ್ಕೆ ಪಟ್ಟಣದ ಜನತೆ ನೀಡುತ್ತಿರುವ ಸಹಕಾರ ಕುರಿತು ಪಾದಯಾತ್ರೆ ಸಮಿತಿಯ ಮುಖ್ಯಸ್ಥ ಕೆ.ಬ್ಯಾಳಿಪಂಪಣ್ಣ ಮಾತನಾಡಿ, ಇದೇ ಜುಲೈ ೫ ಭಾನುವಾರದಿಂದ ಬಳ್ಳಾರಿ ಜಿಲ್ಲೆಯ ಏಳಬೆಂಚಿ ಆರಂಭಗೊಂಡ ಈ ಯಾತ್ರೆಯಲ್ಲಿ ಮಹಿಳೆಯರು ಸೇರಿ ಅರವತ್ತಕ್ಕೂ ಹೆಚ್ಚು ಜನರಿದ್ದು, ಸತತವಾಗಿ ೧೩ ದಿನಗಳ ಕಾಲುನಡಿಗೆಯಲ್ಲಿ ಸಾಗಿ ದಿ:೧೮ ಶನಿವಾರದಂದು ಆಷಾಢ ಏಕಾದಶಿಯಂದು ಪಂಢರಾಪುರ ತಲುಪುತ್ತದೆ. ನಂತರ ಎಲ್ಲ ಪಾದಯಾತ್ರಿಗಳು ತಮ್ಮ ತಮ್ಮ ಗ್ರಾಮಕ್ಕೆ ತೆರಳಲಿದ್ದಾರೆ ಎಂದರು.
ಯಾತ್ರೆಯ ನೇತೃತ್ವವನ್ನು ಷಡಕ್ಷರಿ, ಕೆ.ಪಂಪಣ್ಣ, ಎ.ತುಕಾರಾಮಪ್ಪ, ರ‍್ರಿಸ್ವಾಮಿ, ಸಣ್ಣಜಂಬುನಾಥ, ಶ್ರೀನಿವಾಸ, ಸಾಹುಕಾರ ಚಂದ್ರಶೇಖರ, ಹೊಟ್ಟೆ ಶರಣಬಸವ ಡಿ.ಸುರೇಶ, ನೀಲಮ್ಮ, ಹಣಮಂತಮ್ಮ, ಕರೆಮ್ಮ, ಯಲ್ಲಮ್ಮ, ತುಳಸಿ ಗಂಗಮ್ಮ, ವೀಣಾಕಾರ ಕೆ.ಹೊನ್ನೂರಸ್ವಾಮಿ, ರಾಮಪ್ಪ, ಶರಣಪ್ಪ, ಈ.ತಿಮ್ಮಪ್ಪ ವಹಿಸಿದ್ದರು.

