ತಿಕೋಟಾ ತಾಲೂಕನ್ನು ಬರಗಾಲವೆಂದು ಘೋಷಣೆ ಮಾಡಿ | ರೈತರ ಸಾಲ ಮನ್ನಾ ಮಾಡಬೇಕು | ರೈತ ಸಂಘ ತಾಲೂಕಾದ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮುಂಗಾರು ಹಂಗಾಮು ಮಳೆ ಕೈಕೋಟ್ಟಿದ್ದರಿಂದ ಹಿಂಗಾರಿ ಮಳೆಯ ಲಕ್ಷಣ ಕೂಡ ಇರದೆ ಇರುವದರಿಂದ ಅನ್ನದಾತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾದ್ಯಕ್ಷ ಸಾತಲಿಂಗಯ್ಯಾ ಶಂ ಸಾಲಿಮಠ ಅವರು ಗ್ರೇಡ೨ ತಹಸೀಲ್ದಾರ ಎಚ್ ಎನ್ ಬಡಿಗೇರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ತಾಲೂಕನ್ನು ೨೦೨೬ ಮತ್ತು ೨೦೨೭ಸಾಲಿನ ಮಳೆಯ ಅಭಾವದಿಂದ ರೈತರು ಕಣ್ಣಿರು ಹಾಕುವ ಪರಿಸ್ತಿತಿ ಎದುರಾಗಿದ್ದು ಸರಕಾರ ಕೂಡಲೆ ಬರಗಾಲವೆಂದು ಘೋಷಣೆಯೊಂದಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಅಗ್ರಹಿಸಿದರು.
ನಂತರ ಜಿಲ್ಲಾದ್ಯಕ್ಷ ಸಂಗಮೆಶ ಸಗರ ಮಾತನಾಡಿ, ತಾಲೂಕಾದ್ಯಂತ ಕೆರೆ, ಹಳ್ಳಕೋಳ್ಳಗಳಲ್ಲಿ ಒಂದೆ ಒಂದು ಹನಿ ನೀರಿಲ್ಲ ಇನ್ನು ಎಂಟು ದಿನ ಕಳೆದರೆ ಜಾನುವಾರಗಳಿಗೆ, ಜನರಿಗೆ, ಪಶುಪಕ್ಷಿಗಳಿಗೆ ನೀರು ಸಿಗೋದಿಲ್ಲ ಇಗಾಗಲೆ ಬೋರವೆಲ್ಲಗಳು ಬತ್ತಿವೆ ಅರ್ದ ಗಂಟೆಯು ಕೂಡಾ ನೀರು ಬರುತ್ತಿಲ್ಲ ಸುಮಾರು ಹತ್ತಾರು ಗ್ರಾಮಗಳ ಕೆರೆಗಳಲ್ಲಿ ನೀರಿಲ್ಲ ಮುಂದಿನ ದಿನಗಳನ್ನು ಕಳೆಯುವದು ಕಷ್ಟದ ಮಾತು ಸರಕಾರ ಕೂಡಲೆ ತಾಲೂಕಿನಾದ್ಯಂತ ನೀರು ಹರಿಸಬೇಕು, ಸಾಲ ಮನ್ನಾ ಮಾಡಬೇಕು, ತಿಕೋಟಾ ತಾಲೂಕ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತೆವೆ. ಒಂದು ವೇಳೆ ಸರಕಾರ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಹೇಳಿದರು.
ರೈತ ಮಹಿಳಾ ಅದ್ಯಕ್ಷೆ ಸಂಗೀತಾ ರಾಠೋಡ, ಶ್ರೀಶೈಲ ಶಿ ಬಿರಾದಾರ, ಶಾನೂರ ನಂದರಗಿ, ದರೆಪ್ಪ ಅನಂತಪೂರ, ಶಿವಪ್ಪ ಪಟ್ಟಣಶೇಟ್ಟಿ, ನಜೀರ ನಂದರಗಿ, ಗುರುಪಾದ ಹಿಪ್ಪರಗಿ, ಸುರೇಶ ಇಟಿ, ಮೋಶಿನ ಮುಜಾವರ, ಸುರೇಶ ಕೋಣ್ಣುರ, ರವಿಕುಮಾರ ಹೋಸುರ, ಶಿವಾನಂದ ಮುಂಜಾನವರ, ರಾಮಗೊಂಡ ಕೊಂಡಿ, ಬುಳ್ಳಪ್ಪ ಪೂಜಾರಿ, ಪರಗೊಂಡ ಬಡಿಗೇರ, ಸುಭಾಷ ಚಡಚಣ, ರಾಮಗೊಂಡ ಬಿರಾದಾರ, ಮತ್ತು ನೂರಾರು ರೈತರು ಉಪಸ್ಥಿತರಿದ್ದರು.

