Author: editor.udayarashmi@gmail.com

ಸಾರ್ವಜನಿಕರಲ್ಲಿ ತೀವ್ರ ಕುತೂಹಲ | ಹಲವು ಸದಸ್ಯರಿಗೆ ಪ್ರವಾಸ ಭಾಗ್ಯ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುಧ್ಧ ಅವಿಶ್ವಾಸ ವ್ಯಕ್ತಪಡಿಸಿ ಹಲವು ಸದಸ್ಯರಿಂದ ಜಮಖಂಡಿ ಉಪ ವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಸೂಚನೆ ಪರ್ಯಾಲೋಚಿಸಲು ಶನಿವಾರ (ನ.೩೦) ಚಿಮ್ಮಡ ಗ್ರಾ.ಪಂ. ಕಾರ್ಯಾಲಯದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದೆ.ಇಪ್ಪತ್ತೆಂಟು ಸದಸ್ಯಬಲದ ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ ಹದಿನೈದು ತಿಂಗಳ ಹಿಂದೆ ಬಿಜೆಪಿ ಬೆಂಬಲಿತ ೧೯ ಸದಸ್ಯರ ಬೆಂಬಲದೊಂದಿಗೆ ಶ್ರೀಮತಿ ಮಾಲಾ ಅಶೋಕ ಮೋಟಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.ನಂತರ ನಡೆದ ಆಂತರಿಕ ಬೆಳವಣಿಗೆಯಲ್ಲಿ ಮಾಲಾ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು, ೧೯/೯ ಪರ ವಿರೋಧ ಬಲವಿರುವ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ೧೯ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಮೋಹನ ಬಿರಡಿಕರರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ವಿಶ್ವಾಸ ಮತಯಾಚನೆಗಾಗಿ ಶನಿವಾರ (ನ.೩೦) ಚಿಮ್ಮಡ ಗ್ರಾ.ಪಂ. ಕಾರ್ಯಾಲಯದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದ್ದು ಈ ಸಂಬಂದ ನೋಟಿಸ್ ಜಾರಿ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಅನೇಕರು ಆಳ್ವಿಕೆ ನಡೆಸಿದ ರಾಜ ಮನೆತನಗಳ ಸಾಂಸ್ಕೃತಿಕ ಇತಿಹಾಸವನ್ನು ಕುರಿತು ಮತ್ತು ಇಲ್ಲಿನ ಮೂಲ ಇತಿಹಾಸದ ಕುರಿತು ಅಧ್ಯಯನ ಅವಶ್ಯಕವಾಗಿದೆ ಎಂದು ವಿಭಾಗೀಯ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಇತಿಹಾಸ ವಿಭಾಗ ಮತ್ತು ಪತ್ರಗಾರ ಇಲಾಖೆ ವಿಭಾಗೀಯ ಕಚೇರಿಯ ಸಹಯೋಗದಲ್ಲಿ ನಡೆದ ಪತ್ರಗಾರ ಪರಿಚಯ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ ಮೊಘಲರ ಆಳ್ವಿಕೆಯ ಕಾಲದ ಇತಿಹಾಸದ ದಾಖಲೆಗಳು ಪುಣೆ, ಮುಂಬೈನಲ್ಲಿವೆ, ನಿಜಾಮರ ಆಳ್ವಿಕೆಯ ಕಾಲದ ಇತಿಹಾದ ದಾಖಲೆಗಳು ಹೈದ್ರಾಬಾದ್‌ನಲ್ಲಿವೆ. ಕೆಲವು ದಾಖಲಾತಿಗಳು ಚೆನ್ನೈನಲ್ಲಿವೆ. ಇಷ್ಟಾಗಿಯೂ ೩೯ ವಿಭಾಗಗಳಿಗೆ ಸಂಬಂಧ ಪಟ್ಟ ೧೬ ಲಕ್ಷ ಕಡತಗಳೂ ಕಲಬುರಗಿಯಲ್ಲಿ ಲಭ್ಯವಿವೆ. ಇವುಗಳನ್ನು ವಿದ್ಯಾರ್ಥಿಗಳು ಸಂಶೋಧನೆಗಾಗಿ ಸಹಾಯ ಪಡೆದುಕೊಳ್ಳಬಹುದು. ಇನ್ನೂ ಹೆಚ್ಚಿನ ಇತಿಹಾಸ ಅರಿಯುವ ಸಲುವಾಗಿ ಸಂಶೋಧನೆಗಳು ಜಾರಿಯಲ್ಲಿವೆ ಎಂದು ಮಾಹಿತಿ ನೀಡಿದರು.ವಿರೇಂದ್ರ ಪಾಟೀಲ್ ಕಾಲೇಜು ಪ್ರಾಚಾರ್ಯ ಕೆ. ನಾರಾಯಣ ಮಾತನಾಡುತ್ತಾ…

Read More

ರಾಷ್ಟ್ರೀಯ ಫ್ಲೋರೋಸಿಸ್ ತಡೆ ಜಾಗೃತಿ ಕಾರ್ಯಕ್ರಮ | ಶಾಲಾ ಮಕ್ಕಳಿಗೆ ಫ್ಲೋರೈಡ್ ಕುರಿತು ಅರಿವು ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸೇವಿಸುವ ಆಹಾರ ಹಾಗೂ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಫ್ಲೋರೈಡ್ ಯುತ ಅಂಶ ಇದ್ದರೆ ಫ್ಲೋರೋಸಿಸ್ ವ್ಯಾಧಿ ಬಾಧಿಸಿ ದೇಹದ ಶರೀರಕ್ಕೆ ಆವರಿಸುತ್ತದೆ. ಇದರಿಂದ ಭಾಗಶಃ ದೇಹದ ಹಲವಾರು ಭಾಗಗಳಲ್ಲಿ ಗಂಭೀರ ಸ್ವರೂಪದ ದುಷ್ಪರಿಣಾಮಗಳು ತಲೆದೋರುತ್ತವೆ. ಬಗೆಬಗೆಯ ಸಮಸ್ಯೆಗಳು ಉಲ್ಬಣಗೊಂಡು ನರಳಾಟದ ಯಾತನೆಯಲ್ಲಿ ಬದುಕು ಕಳೆಯುವಂತೆ ಮಾಡುತ್ತದೆ. ಕಾರಣ ಫ್ಲೋರೈಡ್ ಅಂಶವನ್ನು ಹೊಂದಿರುವ ನೀರು, ಆಹಾರ ಸೇವನೆ ಬಗ್ಗೆ ಯುವಜನತೆ ಬಹು ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಮಾಲೋಚಕ ಡಾ.ಬಾಬುರಡ್ಡಿ ಕೆಂಗಲಗುತ್ತಿ ಹೇಳಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜಿಲ್ಲಾ ಆಸ್ಪತ್ರೆ ಬಾಗಲಕೋಟೆ ಫ್ಲೋರೋಸಿಸ್ ಪ್ರಯೋಗಾಲಯ ಜಿಲ್ಲಾ ಸಮೀಕ್ಷಾ ಘಟಕದ ವತಿಯಿಂದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಇವರ ಆಶ್ರಯದಲ್ಲಿ…

Read More

ಬಿಜೆಪಿ ಬಣ ಸಂಘರ್ಷಕ್ಕೆ ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಬೇಸರ | ಯತ್ನಾಳ್ & ಜಾರಕಿಹೊಳಿ ವಿರುದ್ಧ ಕಿಡಿ ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತನಗೆ ಅವಕಾಶ ನೀಡಿದ ಬಿಜೆಪಿ ಪಕ್ಷಕ್ಕೆ ಇವತ್ತು ಒದಗಿಬಂದಿರುವ ಸ್ಥಿತಿ ಒಂದು ದುರಂತ ಹಾಗೂ ನೋವಿನ ಸಂಗತಿ ಎಂದು ರಾಜ್ಯದ ಬಿಜೆಪಿಯ‌ ಬಣ ಸಂಘರ್ಷಕ್ಕೆ ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರ ಒಂದು ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.ತಮ್ಮ ಪತ್ರಗಳ ಹೊರತಾಗಿಯೂ ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಇನ್ನು ಮುಂದಾದರೂ ಪಕ್ಷದೊಳಗಿನ ಗುಂಪುಗಾರಿಕೆ ಬಗ್ಗೆ ಹೈಕಮಾಂಡ್‌ನ ಮೌನ ಮುರಿಯಬೇಕು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೨೦೨೪ನೆಯ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆ ವಿಮೆ ಪಾವತಿಸಿದ ರೈತರು ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಾದ ರೈತರು ಅರ್ಜಿ ಸಲ್ಲಿಬಹುದು.ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ತೊಗರಿ ಬೆಳೆ ಬೆಳೆದ ರೈತರ ಜಮೀನುಗಳಲ್ಲಿ ಹವಾಮಾನ ವೈಪರಿತ್ಯದಿಂದ ಹೂವು ಮತ್ತು ಕಾಯಿ ಉದುರುತ್ತಿರುವುದು ಕಂಡುಬಂದಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ಮನವಿ ಅರ್ಜಿಯೊಂದಿಗೆ ಬೆಳೆ ವಿಮೆ ಪಾವತಿಸಿದ ರಶೀದಿ, ಬೆಳೆಯ ಜಿಪಿಎಸ್ ಭಾವಚಿತ್ರ ಹಾಗೂ ಮೋಬೈಲ್ ನಂಬರ್‌ನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಗಳಾದ ಸಿಂದಗಿ ಭಾಗದ ರೈತರು ಪ್ರೀತಮ್ ಬಳಬಟ್ಟಿ, ದೇವರ ಹಿಪ್ಪರಗಿ ಭಾಗದ ರೈತರು ರಾಜೇಶ ಬ್ಯಾಲಾಳ ಹಾಗೂ ಆಲಮೇಲ ಭಾಗದ ರೈತರು ಮುತ್ತು ಬಳಬಟ್ಟಿ ಅವರನ್ನು ಸಂಪರ್ಕಿಸಬೇಕು. ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹಾಗೂ ವಿಮಾ ಸಂಸ್ಥೆಯ ಪ್ರತಿನಿಧಿಯ ೭೦೧೯೦೪೯೬೯೨/೮೧೫೦೦೭೬೧೧೫/೯೩೫೩೩೮೧೧೬೨ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರ ಎಚ್.ವೈ.ಸಿಂಗೆಗೋಳ ಪತ್ರಿಕಾ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಳೆ ಬಂದರೆ ಸಿಂದಗಿ ನಗರದ ಸಂಗಮ್ ಬಾರ್ ಬಳಿಯ ಮುಖ್ಯ ರಸ್ತೆಯಲ್ಲಿನ ಅಂಗಡಿ ಮತ್ತು ಮನೆಗಳಲ್ಲಿ ನೀರು ಒಳಗಡೆ ತುಂಬಿದ್ದನ್ನು ಕಣ್ಣಾರೆ ಕಂಡಿದ್ದು ಇದೆ. ಹೀಗಾಗಿ ನಗರದ ಜನತೆಯ ಬಹುದಿನಗಳ ಬೇಡಿಕೆಯಾದ ಈ ಮುಖ್ಯ ರಸ್ತೆಯ ಕಾಮಗಾರಿ ಸಂತೋಷದಿಂದ ನೇರವೇರಿಸಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸೋಂಪುರ ರಸ್ತೆಯ ಬಸವ ಮಂಟಪದ ಹತ್ತಿರ ಲೋಕೋಪಯೋಗಿ ಇಲಾಖೆ ಸಿಂದಗಿ ಉಪವಿಭಾಗ, ೨೦೨೪-೨೫ನೆಯ ಸಾಲಿನ ೫೦೫೪-೦೪-೩೩೭-೦-೦೧-೧೫೪ ಅಪೆಂಡಿಕ್ಸ್ ಯೋಜನೆಯ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಬಾ-ಸಿಂದಗಿ ವಾಯಾ ಬಂಥನಾಳ-ಚಾಂದಕವಟೆ-ಸೋಂಪುರ ಜಿಲ್ಲಾ ಮುಖ್ಯ ರಸ್ತೆ(ಸಿಂದಗಿ ಪಟ್ಟಣದ ಪರಿಮಿತಿ) ೧ಕೋಟಿ ೫೦ಲಕ್ಷ ರೂ. ಅನುದಾನದ ಸಿಸಿ ರಸ್ತೆ ಹಾಗೂ ಸಿಸಿ ಡ್ರೇನ್ ನಿರ್ಮಿಸುವ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.ಇಲ್ಲಿನ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ರಸ್ತೆ ಮಾಡಿಕೊಡಬೇಕು ಎನ್ನುವ ದೃಷ್ಟಿಯಿಂದ ಈ ಕಾಮಗಾರಿಯ ಭೂಮಿ ಪೂಜೆಯನ್ನು ನೇರವೇರಿಸಲಾಗಿದೆ. ಪುರಸಭೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಈ ೧ಕೋಟಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಲವು ವರ್ಷಗಳಿಂದ ಅಂಚೆ ಇಲಾಖೆ ಕೇವಲ ಸಂವಹನ ಹಾಗೂ ಪತ್ರ ವ್ಯವಹಾರಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಅಂಚೆ ಇಲಾಖೆ ಬ್ಯಾಂಕ್‌ಗಳಂತೆ ಭ್ರಷ್ಟಾಚಾರ ರಹಿತ, ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ, ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಂದಗಿ ಅಂಚೆ ವಿಭಾಗದ ಮೇಲ್ವಿಚಾರಕ ಮನೋಹರ ಪೋಳ ಹೇಳಿದರು.ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡ ಅಂಚೆ ಇಲಾಖೆ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಅಂಚೆ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡದುಕೊಳ್ಳಬೇಕು. ಇಲಾಖೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ಅನೇಕ ಉಪಯುಕ್ತ ಯೋಜನೆಗಳಿವೆ. ಇಲಾಖೆ ಒಂದೇ ಸೂರಿನಡಿ ಗ್ರಾಹಕರಿಗೆ ಹಲವು ಸೇವೆಗಳನ್ನು ಒದಗಿಸುತ್ತವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ಸಿದ್ದರಾಮಸಾಹು ದೇವರಮನಿ ಸಾನಿಧ್ಯ ವಹಿಸಿದ್ದರು. ಗೋಲಗೇರಿ ಗ್ರಾಮದ ಮುಖಂಡ ಬಸವರಾಜ ಮಾರಲಭಾವಿ, ಓಂಪ್ರಕಾಶ ಬಿರಾದಾರ, ಬಸನಗೌಡ ಮೇಲಿನಮನಿ, ಗೌಡಣ್ಣ ಬಜಂತ್ರಿ, ಮಡಿವಾಳ ನಾಯ್ಕೋಡಿ, ಕಲ್ಯಾಣಿ ಯಂಕಂಚಿ, ಪತ್ರಕರ್ತ ಮಲ್ಲು ಕೆಂಭಾವಿ, ಗೋಲ್ಲಾಳಪ್ಪ ಕರ್ನಾಳ, ಚನ್ನಬಸು ಪಟ್ಟಣಶೆಟ್ಟಿ, ಹುಸೇನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇ.ಪಿ.ಎಸ್-೯೫ ಪಿಂಚಣೀದಾರರು ಸುಮಾರು ೧೦-೧೨ ವರ್ಷಗಳಿಂಧ ಹೋರಾಟ ಮಾಡುತ್ತಿದ್ದು, ಇದರಲ್ಲಿ ದೇಶದ ಸುಮಾರು ೭೮ ಲಕ್ಷ ಇಪಿ.ಎಸ್. -೯೫ ಪಿಂಚಣಿದಾರರು ಇದ್ದು, ಪಿಂಚಣಿದಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಂದು ಎನ್.ಎ.ಸಿ. ವಿಜಯಪುರ ಘಟಕದ ವತಿಯಿಂದ ವೀರಕುಮಾರ ಗಡಾದ ಇವರ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ದ ಹೋರಾಟ ಕೈಗೊಂಡು ಇ.ಪಿ.ಎಪ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಎನ್.ಎ.ಸಿ. ಸಂಘಟನೆ ರಾಷ್ಟ್ರಾದ್ಯಂತ ೨೭ ಜಿಲ್ಲೆಗಳಲ್ಲಿ ಹಾಗೂ ೪ ಟೇರಿಟೇರಿಗಳಲ್ಲಿ ಸ್ಥಾಪನೆಯಾಗಿದ್ದು ರಾಷ್ಟ್ರಾದ್ಯಂತ ಈಗಲೂ ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಲು ಸಿದ್ಧವಿದೆ ಎಂದು ಎನ್.ಎ.ಸಿ. ರಾಷ್ಟ್ರೀಯ ಸಂಚಾಲಕ ರಮಾಕಾಂತ ನರಗುಂದ ಅವರು ತಿಳಿಸಿದ್ದಾರೆ.ಪ್ರಸ್ತುತ ಡಿಸೆಂಬರ್-೧ ರಂದು ದೇಶದ ಎಲ್ಲ ಸಂಸತ್ ಸದಸ್ಯರ ಮನೆ/ಕಛೇರಿ ಮುಂದೆ ಶಾಂತಿಯುತ ಮೌನ ಧರಣಿ ಸತ್ಯಾಗ್ರಹ ಕೈಕೊಳ್ಳಲಾಗುತ್ತಿದೆ‌ ನಂತರ ಡಿಸೆಂಬರ್-೧೦, ೧೧ರಂದು ದೆಹಲಿ ಜಂತರ್ ಮಂತರದಲ್ಲಿ ಉಪವಾಸ ಕೈಕೊಳ್ಳಲಾಗುವದು ಎಂದರು.ಈ ಧರಣಿಯಲ್ಲಿ ಎನ್.ಎ.ಸಿ. ಉಪಾಧ್ಯಕ್ಷರಾದ ವೀರಕುಮಾರ ಗಡಾದ, ಎನ್.ಎ.ಸಿ. ಸಂಚಾಲಕರಾದ ಜಿ.ಎಸ್. ದೇಗಿನಾಳ, ಎನ್.ಎ.ಸಿ. ಜಂಟಿ ಕಾರ್ಯದರ್ಶಿ…

Read More

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸವನಬಾಗೇವಾಡಿಯಿಂದ ಬ್ಯಾಲ್ಯಾಳದವರೆಗೂ ಬಸ್ ಸೌಕರ್ಯಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಿಂದ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದವರೆಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಸ್ಥಳೀಯ ಬಸ್ ಡಿಪೋ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಪಟ್ಟಣದಿಂದ ತಾಲೂಕಿನ ಇವಣಗಿ, ಹಂಚಿನಾಳ, ನರಸಲಗಿ, ನರಸಲಗಿ ತಾಂಡಾ, ಅಂಬಳನೂರ, ಅಂಬಳನೂರ ತಾಂಡಾ, ಕಣಕಾಲ ಮಾರ್ಗವಾಗಿ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದವರೆಗೂ ಸರಿಯಾದ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಈ ಗ್ರಾಮಗಳಿಂದ ಬಸವನಬಾಗೇವಾಡಿಯ ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಬಾರದಂತಾಗಿದೆ. ಇದರಿಂದಾಗಿ ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಇದೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್ ಘಟಕ ವ್ಯವಸ್ಥಾಪಕರು ಈ ಮಾರ್ಗವಾಗಿ ಬೆಳಗ್ಗೆ ಎಂಟು ಗಂಟೆಗೆ, ಮಧ್ಯಾನ್ಹ ಎರಡು ಗಂಟೆಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಗ್ರಾಮಸ್ಥರು ಮನೆ, ನಿವೇಶನ, ನೀರಿನ ಸೇರಿದಂತೆ ವಿವಿಧ ಆಸ್ತಿಗಳ ತೆರಿಗೆ ಪಾವತಿಗಳನ್ನು ಕಡ್ಡಾಯವಾಗಿ ನಿಗಧಿತ ಅವಧಿಯ ಒಳಗಾಗಿ ಪಾವತಿಸಿ ಇಲಾಖೆಗೆ ಸಹಕರಿಸುವಂತೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ವಿನಂತಿಸಿದರು.ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಕ್ರಾಣಿ ಗ್ರಾಮದಲ್ಲಿ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಎಲ್ಲ ಕರಗಳನ್ನು ಸರಿಯಾಗಿ ಪಾವತಿಸಿದೇ ಬಾಕಿ ಉಳಿಸಿದಲ್ಲಿ ಇಲಾಖೆಯಿಂದ ನೀರಿನ ಸಂಪರ್ಕ ಕಡಿತಗೊಳಿಸುವ ಮತ್ತು ದಂಡ ವಿಧಿಸಿ ಬಡ್ಡಿ ಸಮೇತ ವಸೂಲಿ ಮಾಡುವ ಅಧಿಕಾರ ಇಲಾಖೆಗೆ ಇದೆ ಎಂದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಎಸ್.ನಾಯ್ಕೋಡಿ ಅವರ ನೇತೃತ್ವದ ತಂಡ ಹೊಕ್ರಾಣಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಲಕ್ಷಕ್ಕೂ ಅಧಿಕ ಕರ ವಸೂಲಿ ಮಾಡಿಕೊಂಡರು.ಈ ವೇಳೆ ಕಾರ್ಯದರ್ಶಿ ಗಿರೀಶ ಬಿರಾದಾರ, ಕರವಸೂಲಿಗಾರರಾದ ಬಿ.ಕೆ.ಜಗಲಿ ಮತ್ತು ಎನ್.ಡಿ.ಮಾದರ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಇದ್ದರು.

Read More