ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಗ್ರಾಮಸ್ಥರು ಮನೆ, ನಿವೇಶನ, ನೀರಿನ ಸೇರಿದಂತೆ ವಿವಿಧ ಆಸ್ತಿಗಳ ತೆರಿಗೆ ಪಾವತಿಗಳನ್ನು ಕಡ್ಡಾಯವಾಗಿ ನಿಗಧಿತ ಅವಧಿಯ ಒಳಗಾಗಿ ಪಾವತಿಸಿ ಇಲಾಖೆಗೆ ಸಹಕರಿಸುವಂತೆ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ವಿನಂತಿಸಿದರು.
ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಕ್ರಾಣಿ ಗ್ರಾಮದಲ್ಲಿ ಕರ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ಕರಗಳನ್ನು ಸರಿಯಾಗಿ ಪಾವತಿಸಿದೇ ಬಾಕಿ ಉಳಿಸಿದಲ್ಲಿ ಇಲಾಖೆಯಿಂದ ನೀರಿನ ಸಂಪರ್ಕ ಕಡಿತಗೊಳಿಸುವ ಮತ್ತು ದಂಡ ವಿಧಿಸಿ ಬಡ್ಡಿ ಸಮೇತ ವಸೂಲಿ ಮಾಡುವ ಅಧಿಕಾರ ಇಲಾಖೆಗೆ ಇದೆ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಎಸ್.ನಾಯ್ಕೋಡಿ ಅವರ ನೇತೃತ್ವದ ತಂಡ ಹೊಕ್ರಾಣಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಲಕ್ಷಕ್ಕೂ ಅಧಿಕ ಕರ ವಸೂಲಿ ಮಾಡಿಕೊಂಡರು.
ಈ ವೇಳೆ ಕಾರ್ಯದರ್ಶಿ ಗಿರೀಶ ಬಿರಾದಾರ, ಕರವಸೂಲಿಗಾರರಾದ ಬಿ.ಕೆ.ಜಗಲಿ ಮತ್ತು ಎನ್.ಡಿ.ಮಾದರ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಇದ್ದರು.

