ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೦೨೪ನೆಯ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆ ವಿಮೆ ಪಾವತಿಸಿದ ರೈತರು ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಾದ ರೈತರು ಅರ್ಜಿ ಸಲ್ಲಿಬಹುದು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ತೊಗರಿ ಬೆಳೆ ಬೆಳೆದ ರೈತರ ಜಮೀನುಗಳಲ್ಲಿ ಹವಾಮಾನ ವೈಪರಿತ್ಯದಿಂದ ಹೂವು ಮತ್ತು ಕಾಯಿ ಉದುರುತ್ತಿರುವುದು ಕಂಡುಬಂದಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ಮನವಿ ಅರ್ಜಿಯೊಂದಿಗೆ ಬೆಳೆ ವಿಮೆ ಪಾವತಿಸಿದ ರಶೀದಿ, ಬೆಳೆಯ ಜಿಪಿಎಸ್ ಭಾವಚಿತ್ರ ಹಾಗೂ ಮೋಬೈಲ್ ನಂಬರ್‌ನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಗಳಾದ ಸಿಂದಗಿ ಭಾಗದ ರೈತರು ಪ್ರೀತಮ್ ಬಳಬಟ್ಟಿ, ದೇವರ ಹಿಪ್ಪರಗಿ ಭಾಗದ ರೈತರು ರಾಜೇಶ ಬ್ಯಾಲಾಳ ಹಾಗೂ ಆಲಮೇಲ ಭಾಗದ ರೈತರು ಮುತ್ತು ಬಳಬಟ್ಟಿ ಅವರನ್ನು ಸಂಪರ್ಕಿಸಬೇಕು. ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹಾಗೂ ವಿಮಾ ಸಂಸ್ಥೆಯ ಪ್ರತಿನಿಧಿಯ ೭೦೧೯೦೪೯೬೯೨/೮೧೫೦೦೭೬೧೧೫/೯೩೫೩೩೮೧೧೬೨ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರ ಎಚ್.ವೈ.ಸಿಂಗೆಗೋಳ ಪತ್ರಿಕಾ ಪ್ರಕಟಣೆಯ ಮೂಲಕ ತಿಳಸಿದ್ದಾರೆ.
