Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಕ್ಷಣ..
ವಿಶೇಷ ಲೇಖನ

ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಕ್ಷಣ..

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ. ರಾಜಶೇಖರ ನಾಗೂರ
ಸಂಚಾಲಕರು
’ನಮ್ಮ ಕಥಾ ಅರಮನೆ’

ಉದಯರಶ್ಮಿ ದಿನಪತ್ರಿಕೆ

ಮನುಷ್ಯನ ಜೀವನವನ್ನು ರೂಪಿಸುವುದು ಘಟನೆಗಳಲ್ಲ. ಅವುಗಳಿಗೆ ಅವನು ನೀಡುವ ಪ್ರತಿಕ್ರಿಯೆಗಳು.
ಯಾವುದೇ ಘಟನೆ ನಡೆದ ಕ್ಷಣ ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ಕ್ಷಣದ ನಡುವೆ ಒಂದು ಸೂಕ್ಷ್ಮ ವಿರಾಮವಿರುತ್ತದೆ. ಅದು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರಬಹುದು. ಆದರೆ ಬದುಕಿನ ಅತಿ ದೊಡ್ಡ ರಹಸ್ಯ ಅಡಗಿರುವುದು ಅಲ್ಲಿಯೇ.
ಮಳೆ ಬೀಳುವುದು ನಮ್ಮ ಕೈಯಲ್ಲಿಲ್ಲ. ಆದರೆ ಛತ್ರಿ ಹಿಡಿಯಬೇಕೋ, ಮಳೆಯನ್ನು ಆಸ್ವಾದಿಸಬೇಕೋ, ಅಥವಾ ಮಳೆಯನ್ನು ದೂಷಿಸುತ್ತಾ ನಿಲ್ಲಬೇಕೋ ಎಂಬುದು ನಮ್ಮ ಆಯ್ಕೆ. ಇದೇ ರೀತಿ ಜೀವನದಲ್ಲಿಯೂ ಅನೇಕ ಘಟನೆಗಳು ನಮ್ಮ ಅನುಮತಿಯಿಲ್ಲದೆ ಸಂಭವಿಸುತ್ತವೆ. ಆದರೆ ಅವುಗಳ ಮುಂದೆ ನಾವು ಹೇಗೆ ನಿಲ್ಲುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.
ಆ ಒಂದು ಕ್ಷಣ ಕೋಪವನ್ನು ತಾಳ್ಮೆಯಾಗಿ ಪರಿವರ್ತಿಸಬಹುದು. ದ್ವೇಷವನ್ನು ಕರುಣೆಯಾಗಿ ಬದಲಿಸಬಹುದು. ಪ್ರತೀಕಾರವನ್ನು ಕ್ಷಮೆಯಾಗಿ ರೂಪಿಸಬಹುದು. ಭಯವನ್ನು ಧೈರ್ಯವಾಗಿ ಪರಿವರ್ತಿಸಬಹುದು. ಆತುರವನ್ನು ವಿವೇಕವನ್ನಾಗಿ ಮಾಡಬಹುದು.
ಆ ಕ್ಷಣವನ್ನು ಕಳೆದುಕೊಂಡರೆ ಭಾವನೆಗಳು ನಮ್ಮನ್ನು ಮೀರುತ್ತವೆ ಎಂಬುದು ನನ್ನ ಅಭಿಪ್ರಾಯ. ಆದರೆ ಆ ಕ್ಷಣವನ್ನು ಅರಿತು ಬಳಸಿದರೆ ವಿವೇಕ ನಮ್ಮನ್ನು ಮುನ್ನಡೆಸುತ್ತದೆ. ಇದೇ ಆತ್ಮನಿಗ್ರಹ. ಇದೇ ಪ್ರಬುದ್ಧತೆ.
ಜೀವನದ ಅನೇಕ ವಿಷಾದಗಳಿಗೆ ಕಾರಣ ಘಟನೆಗಳಲ್ಲ. ಯೋಚನೆ ಇಲ್ಲದೆ ನೀಡಿದ ಪ್ರತಿಕ್ರಿಯೆಗಳು. ಒಂದು ಮಾತು ಸಂಬಂಧವನ್ನು ಮುರಿಯಬಹುದು. ಅದೇ ಒಂದು ಕ್ಷಣದ ಮೌನ ಸಂಬಂಧವನ್ನು ಉಳಿಸಬಹುದು. ಒಂದು ಆತುರದ ನಿರ್ಧಾರ ವರ್ಷಗಳ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಅದೇ ಒಂದು ಕ್ಷಣದ ತಾಳ್ಮೆ ಬದುಕಿನ ದಿಕ್ಕನ್ನೇ ಬದಲಿಸಬಹುದು.
ಅಂದು ಸಿಯಾ ಒಂದು ಕ್ಷಣ ಆತುರ ಪಡದಿದ್ದರೆ ಇಂದು ಕೇತನ್ ಬದುಕಿರುತ್ತಿದ್ದ. ಸಿಯಾಳ ಬದುಕು ಜೈಲಿನ ಭಯದ ನೆರಳಲ್ಲಿ ಇರುತ್ತಿರಲಿಲ್ಲ.


ಆ ಹದಿಮೂರು ವರ್ಷದ ಹೆಣ್ಣು ಮಗುವಲ್ಲಿ ತನ್ನ ಮಗುವನ್ನು ಆ ಆಟೋ ಡ್ರೈವರ್ ಕಂಡಿದ್ದರೆ ಆ ಮಗುವಿನ ಭವಿಷ್ಯ ಉಳಿಯುತ್ತಿತ್ತು ಮತ್ತೂ ಈ ದುರುಳನ ಜೀವನವೂ ಕೂಡಾ ಕ್ಷೇಮವಾಗಿರುತ್ತಿತ್ತು.
ಆದ್ದರಿಂದ ಪ್ರತಿಯೊಂದು ಸಂದರ್ಭದಲ್ಲೂ ನಮ್ಮನ್ನು ನಾವು ಕೇಳಿಕೊಳ್ಳಬೇಕು “ಈ ನನ್ನ ಪ್ರತಿಕ್ರಿಯೆ ನನ್ನ ಜೀವನದ ದಿಕ್ಕನ್ನು ಬದಲಿಸುತ್ತಿದೆಯೇ ಅಥವಾ ನನ್ನ ವಿವೇಕವನ್ನು ಮುಚ್ಚಿಡುತ್ತಿದೆಯೇ” ಎಂದು.
ಆ ಪ್ರಶ್ನೆಗೆ ಸಿಗುವ ಉತ್ತರವೇ ನಮ್ಮ ಭವಿಷ್ಯವನ್ನು ರೂಪಿಸುತ್ತದೆ.
ಜೀವನದ ನಿಜವಾದ ಸ್ವಾತಂತ್ರ್ಯ ಯಾವುದೇ ಪರಿಸ್ಥಿತಿಯಲ್ಲೂ ಘಟನೆ ಘಟಿಸಿದ ನಂತರ ನಮ್ಮ ಪ್ರತಿಕ್ರಿಯೆಯನ್ನು ಆಯ್ಕೆ ಮಾಡುವ ಸಾಮರ್ಥ್ಯ.
ಹೀಗಾಗಿ ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಸಣ್ಣ ವಿರಾಮವನ್ನು ಗೌರವಿಸಿ. ಏಕೆಂದರೆ ಅದೇ ವಿರಾಮದಲ್ಲಿ ನಿಮ್ಮ ವ್ಯಕ್ತಿತ್ವ ಹುಟ್ಟುತ್ತದೆ. ನಿಮ್ಮ ಸಂಬಂಧಗಳು ಉಳಿಯುತ್ತವೆ. ನಿಮ್ಮ ಭವಿಷ್ಯ ರೂಪುಗೊಳ್ಳುತ್ತದೆ ಮತ್ತು ನಿಮ್ಮ ಜೀವನದ ನಿಜವಾದ ರಹಸ್ಯ ಅನಾವರಣಗೊಳ್ಳುತ್ತದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026
    In ದಿನಪತ್ರಿಕೆ
  • ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ
    In (ರಾಜ್ಯ ) ಜಿಲ್ಲೆ
  • ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಸಮ್ಮುಖದಲ್ಲಿ ಶಿಫಾ ಜಮಾದಾರ ವಿಚಾರ ಮಂಡನೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ ನಾಯಕತ್ವ, ಆತ್ಮವಿಶ್ವಾಸ ಬೆಳೆಸುವ ಸಾಧನ :ಡಾ.ಕಾಗವಾಡೆ
    In (ರಾಜ್ಯ ) ಜಿಲ್ಲೆ
  • ಬೇಕಾಬಿಟ್ಟಿಯಾಗಿ ಬರಗಾಲ ಪರಿಸ್ಥಿತಿ ನಿಭಾಯಿಸುತ್ತಿರುವ ಸರ್ಕಾರ
    In (ರಾಜ್ಯ ) ಜಿಲ್ಲೆ
  • ತಂತ್ರಜ್ಞಾನ ಮಿತವಾಗಿ ಬಳಸಿ, ನೈಜ ಸಂಬಂಧಗಳಿಗೆ ಒತ್ತು ನೀಡಿ
    In (ರಾಜ್ಯ ) ಜಿಲ್ಲೆ
  • ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.