ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇ.ಪಿ.ಎಸ್-೯೫ ಪಿಂಚಣೀದಾರರು ಸುಮಾರು ೧೦-೧೨ ವರ್ಷಗಳಿಂಧ ಹೋರಾಟ ಮಾಡುತ್ತಿದ್ದು, ಇದರಲ್ಲಿ ದೇಶದ ಸುಮಾರು ೭೮ ಲಕ್ಷ ಇಪಿ.ಎಸ್. -೯೫ ಪಿಂಚಣಿದಾರರು ಇದ್ದು, ಪಿಂಚಣಿದಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಂದು ಎನ್.ಎ.ಸಿ. ವಿಜಯಪುರ ಘಟಕದ ವತಿಯಿಂದ ವೀರಕುಮಾರ ಗಡಾದ ಇವರ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ದ ಹೋರಾಟ ಕೈಗೊಂಡು ಇ.ಪಿ.ಎಪ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಎನ್.ಎ.ಸಿ. ಸಂಘಟನೆ ರಾಷ್ಟ್ರಾದ್ಯಂತ ೨೭ ಜಿಲ್ಲೆಗಳಲ್ಲಿ ಹಾಗೂ ೪ ಟೇರಿಟೇರಿಗಳಲ್ಲಿ ಸ್ಥಾಪನೆಯಾಗಿದ್ದು ರಾಷ್ಟ್ರಾದ್ಯಂತ ಈಗಲೂ ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಲು ಸಿದ್ಧವಿದೆ ಎಂದು ಎನ್.ಎ.ಸಿ. ರಾಷ್ಟ್ರೀಯ ಸಂಚಾಲಕ ರಮಾಕಾಂತ ನರಗುಂದ ಅವರು ತಿಳಿಸಿದ್ದಾರೆ.
ಪ್ರಸ್ತುತ ಡಿಸೆಂಬರ್-೧ ರಂದು ದೇಶದ ಎಲ್ಲ ಸಂಸತ್ ಸದಸ್ಯರ ಮನೆ/ಕಛೇರಿ ಮುಂದೆ ಶಾಂತಿಯುತ ಮೌನ ಧರಣಿ ಸತ್ಯಾಗ್ರಹ ಕೈಕೊಳ್ಳಲಾಗುತ್ತಿದೆ ನಂತರ ಡಿಸೆಂಬರ್-೧೦, ೧೧ರಂದು ದೆಹಲಿ ಜಂತರ್ ಮಂತರದಲ್ಲಿ ಉಪವಾಸ ಕೈಕೊಳ್ಳಲಾಗುವದು ಎಂದರು.
ಈ ಧರಣಿಯಲ್ಲಿ ಎನ್.ಎ.ಸಿ. ಉಪಾಧ್ಯಕ್ಷರಾದ ವೀರಕುಮಾರ ಗಡಾದ, ಎನ್.ಎ.ಸಿ. ಸಂಚಾಲಕರಾದ ಜಿ.ಎಸ್. ದೇಗಿನಾಳ, ಎನ್.ಎ.ಸಿ. ಜಂಟಿ ಕಾರ್ಯದರ್ಶಿ ಗುರುಭಟ್ಟ, ಎನ್.ಎ.ಸಿ. ಸಂಘಟಕ ಸಾತಿಪುಲೆ, ತೇರದಾಳ ಸುಮಾರು ೧೦೦ಕ್ಕೂ ಹೆಚ್ಚು ಪಿಂಚಣೀದಾರರು ಉಪಸ್ಥಿತರಿದ್ದರು.

