Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಕಡಲಬಾಳು, ಹಗರಿಬೊಮ್ಮನಹಳ್ಳಿ ತಾಲೂಕು, ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ ಇಂದು ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನ, ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿ, ನೆಲ-ಜಲ, ಸಾಹಿತ್ಯ-ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮವಾದ ಸೇವೆ ಸಲ್ಲಿಸಿದ ಪ್ರಯುಕ್ತ ವಿಜಯಪುರ ಬಾಲಿಕೆಯರ ಸರಕಾರಿ ಪದವಿ-ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಡಾ. ಸಿದ್ದು ಸಾವಳಸಂಗ ಇವರಿಗೆ ರಾಜ್ಯ ಮಟ್ಟದ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ ಮಾಡಲಾಯಿತು.ಡಾ.ಅವಧೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ, ಚನ್ನಾಪೂರ ಧಾರವಾಡ ಜಿಲ್ಲೆ ಇವರು ದಿವ್ಯ ಸಾನಿಧ್ಯ ವಹಿಸಿದ್ದು, ವೇದಿಕೆಯ ಮೇಲೆ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ.ಮಡ್ಡೀಕೆರೆ ಗೋಪಾಲ, ಡಾ.ನಾಗರಾಜ ತಂಬ್ರಹಳ್ಳಿ, ಡಾ.ಟಿ.ತ್ಯಾಗರಾಜು, ಡಾ.ಪ್ರವೀಣರಾಜ್, ಡಾ.ಎ.ಡಿ.ಕೊಟ್ನಾಳ್ ಹಾಗೂ ಸುಮಾ ಬಸವರಾಜ ಹಡಪದ ಉಪಸ್ಥಿತರಿದ್ದು,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರತಿಯೊಂದು ಸೋಲು ಗೆಲುವಿಗೂ ಕನ್ನಡ ಮಾಧ್ಯಮ. ದೇಹದಲ್ಲಿ ಹೃದಯ, ರಕ್ತ ಎಷ್ಟು ಮುಖ್ಯವೋ ಮಾತನಾಡಲು ಕನ್ನಡವೂ ಅಷ್ಟೇ ಮುಖ್ಯ ಎಂದು ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಹೇಳಿದರು.ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದ ಅವರು, ನಮ್ಮ ರಾಜ್ಯದ ನಕಾಶೆ ಬೇರೆ ರಾಜ್ಯಗಳ ನಕಾಶೆಗಿಂತ ಸುಂದರ. ಇವತ್ತು ಕಾಡು, ಗುಡ್ಡ, ಪ್ರಕೃತಿಯನ್ನು ತುಂಬ ಬಿಂಬಿಸುತ್ತದೆ. ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ. ಕನ್ನಡ ನಮ್ಮ ಭಾಷೆ. ಈ ಭಾಷೆಯ ಕಾಗುಣಿತ, ಅಮ್ಮ ಅನ್ನುವ ಪದ ಎಲ್ಲವೂ ಸೊಗಸು. ಕನ್ನಡವನ್ನು ನಾವು ತುಂಬಾ ಪ್ರೀತಿಸುತ್ತೇವೆ. ಬದುಕು ಸಾಗಿಸಲು ದಿನನಿತ್ಯದ ಆಗುಹೋಗುಗಳಿಗೆ ಎಲ್ಲದಕ್ಕೂ ಕನ್ನಡ ಮುಖ್ಯ ಎಂದರು.ಇದೇ ಸಂದರ್ಭದಲ್ಲಿ ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಬಿ.ಬಿ.ಜಮಾದಾರ, ಶಿವಶರಣ ಬೂದಿಹಾಳ, ಎಸ್.ಎಚ್.ಜಾಧವ, ಎಸ್.ಸಿ.ಜೋಗೂರ, ವ್ಹಿ.ಕೆ.ಹಿರೇಮಠ, ವಿಜಯಲಕ್ಷಿö್ಮÃ ಕನ್ನೊಳ್ಳಿ, ಗವಿಸಿದ್ದಪ್ಪ ಆನೆಗುಂದಿ, ವಿಶ್ವನಾಥ ನಂದಿಕೋಲ, ರಾಜಶ್ರೀ ಗಾಣಗೇರ್,…

Read More

ತಂಪ್ಹೊತ್ತಿನಲ್ಲಿ ಸ್ಮರಣಿಯರು ದಿ. ಎಂ.ಸಿ.ಮನಗೂಳಿ | ಆಧುನಿಕ ಭಗೀರಥನ ಮೂರ್ತಿ ಅನಾವರಣ | ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎಸ್ಟಿತ್ತೆಂದರೆ ಇಲ್ಲಿನ ಹುಡುಗರಿಗೆ ಮದುವೆಯಾಗಲು ಕನ್ಯಾ ಕೊಡದಂತಹ ಸ್ಥಿತಿಯೊಂದಿತ್ತು. ಇಂತಹ ಹಣೆ ಪಟ್ಟಿಯನ್ನು ಕಾಯಂ ಆಗಿ ಹೋಗಲಾಡಿಸಿ ಶಾಶ್ವತ ಕುಡಿವ ನೀರಿನ ಬವಣೆಯನ್ನು ನೀಗಿಸಿ ಆಧುನಿಕ ಭಗೀರಥ ಎಂಬ ಕೀರ್ತಿಗೆ ಭಾಜನರಾದ ತಂಪ್ಹೊತ್ತಿನಲ್ಲಿ ಸದಾ ಸ್ಮರಿಸುವ ಮಹಾನುಭಾವರೆಂದರೆ ಅದು ಎಂ.ಸಿ.ಮನಗೂಳಿಯವರು ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಮನಗೂಳಿ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಗರವನ್ನೊಮ್ಮೆ ಸುತ್ತಿಕೊಂಡು ಬಂದರೆ ಮನಗೂಳಿ ಅವರ ಅಭಿವೃದ್ದಿ ಕಾರ್ಯಗಳು ಮಾತನಾಡುತ್ತವೆ ಎಂದರು.ಈ ವೇಳೆ ತಾಶಿಪ್ರ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿ, ಶಕ್ತಿ ಇದ್ದಾಗ ದುಡಿಬೇಕು, ಧನ ಸಂಪತ್ತಿದ್ದಾಗ ದಾನ-ಧರ್ಮ ಮಾಡಬೇಕು, ಅಧಿಕಾರವಿದ್ದಾಗ ಪ್ರಾಮಾಣಿಕವಾಗಿ ಜನ ಸೇವೆ, ಅಭಿವೃದ್ಧಿ ಕಾರ್ಯ ಮಾಡಬೇಕು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದ ಜಾತ್ರೆಗಳು ವಿಶೇಷತೆಯಿಂದ ಕೂಡಿರುತ್ತವೆ. ಅದರಲ್ಲಿ ದೀಪಾವಳಿ ಹಬ್ಬದ ನಿಮಿತ್ತ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಭೀರದೇವರ ಹಾಗೂ ಶ್ರೀ ಪರಮಾನಂದ ದೇವರ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿಭಾವದಲ್ಲಿ ಮಿಂದೇಳುವ ದೃಶ್ಯ ಮನಮೋಹಕವಾಗಿತ್ತು. ಇದು ಭಂಡಾರದೊಡೆಯನ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ.ದೀಪಾವಳಿ ಅಮವಾಸ್ಯೆ ದಿನ ಭೀರದೇವರ ಹಾಗೂ ಪಾಡ್ಯ ದಿನ ಪರಮಾನಂದ ದೇವರ ಶೃಂಗಾರ ಚೌಕಿಯೊಂದಿಗೆ ಸಾರವಾಡ ಗೊಂಬೆ ಕುಣಿತ,ಕರಡಿ ಮಜಲು, ಡೊಳ್ಳು ವಾದ್ಯದೊಂದಿಗೆ ಭಕ್ತರ ಮನೆಗೆ ದರ್ಶನ ಕೊಡುತ್ತಾ, ಗಂಗೆ ಸೀತಾಳದಲ್ಲಿ ಪೂಜೆ ಮುಗಿಸಿ, ಬಜಾರಕ್ಕೆ ಆಗಮನವಾಗಿ, ಅಲ್ಲಿ ಭಕ್ತರಿಗೆ ದರ್ಶನ ಕೊಟ್ಟು ನಂತರ ಗುಡಿಗೆ ಬರುವ ಸಂದರ್ಭದಲ್ಲಿ ಭಕ್ತರು ಚೌಕಿ ಮತ್ತು ಪಲ್ಲಕ್ಕಿಗಳ ಮೇಲೆ ರಾಶಿ ರಾಶಿಗಟ್ಟಲೆ ಭಂಡಾರ, ಖಾರಿಕ, ಕುರಿ ಉಣ್ಣೆಯನ್ನು ಹಾರಿಸುವುದು ವಾಡಿಕೆ ಎನ್ನುತ್ತಾರೆ ಜಾತ್ರಾ ಕಮೀಟಿಯ ಅಧ್ಯಕ್ಷ ಪ್ರಭುಲಿಂಗ ಹಂಡಿ.ಈ ಜಾತ್ರೆಯಲ್ಲಿ ಡೊಳ್ಳಿನ ಹಾಡಿಕೆ, ಭಾರ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದ ಒಟ್ಟು ೧೩ ಜನರ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.ಚಾಂದಸಾಬ ಕುಂಟೋಜಿ, ನಜೀರ ಕರಡಿ, ಹುಸೇನಭಾಷಾ ಮಾಗಿ, ಉಮ್ಮಿದ ನಾಯ್ಕೋಡಿ, ಹಾಜಿಸಾಬ ಜಾತಗಾರ, ಸಿದ್ರಾಮಯ್ಯ ಹಿರೇಮಠ, ಬಸವರಾಜ ಢವಳಗಿ, ಸೋಮಪ್ಪ ಚಲವಾದಿ, ಹುಸೇನಬಾಷಾ ಸಂಕನಾಳ, ಮಹ್ಮದ ಇಸ್ಮಾಯಿಲ್ ಮಾಮನಿ, ಇಬ್ರಾಹಿಂ ಮಸರಕಲ್, ಅಬ್ದುಲರಜಾಕ್ ನಾಡಿ, ಶಂಕರ ನಾಟಕಾರ ಇವರ ಮೇಲೆ ಪ್ರಕರಣ ದಾಖಲಾಗಿದ್ದು, ಪಟ್ಟಣದ ಬನಶಂಕರಿ ವೃತ್ತದ ಬಳಿ ೬ ಜನರ ಗುಂಪು ಮತ್ತು ೭ ಜನರ ಒಂದು ಗುಂಪು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಆಟವಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಈ ಪೈಕಿ ೬ ಜನರ ತಂಡದ ಮೇಲೆ ಸಿಎಚ್‌ಸಿ ಎಂ.ಚಿ.ಅಂಗಡಗೇರಿ ಮತ್ತು ೭ ಜನರ ತಂಡದ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಗಳು ದಾಖಲಾಗಿವೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ನಾಲವಾಡ ಬಳಿಯ ಅಮರೇಶ್ವರ ದೇವಸ್ಥಾನದ ಹತ್ತಿರ ನಿಂತಿರುವ ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುವಂತೆ ಈ ಹಿಂದೆ ಹೋರಾಟ ನಡೆಸಿದ್ದ ಹೋರಾಟಗಾರ ಶಿವಾನಂದ ವಾಲಿ ಶೀಘ್ರವಾಗಿ ಕಾಮಗಾರಿ ಆರಂಭಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಜೂನ್ ನಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಲವು ರೈತರ ಬೆಂಬಲದೊಂದಿಗೆ ಉಗ್ರ ಹೋರಾಟ ನಡೆಸಲಾಗಿತ್ತು. ಹೋರಾಟದ ವೇಳೆ ಲಿಖಿತ ಭರವಸೆ ನೀಡಿದ ಅಧಿಕಾರಿಗಳು ಇತ್ತ ಮೂಸಲು ಬಂದಿಲ್ಲ. ರೈತರ ಸಮಸ್ಯೆ ಈ ಬೇಜವಾಬ್ದಾರಿಯುತ ಅಧಿಕಾರಿಗಳಿಗೆ ಅರ್ಥವಾಗಲ್ಲ. ಹಾಗಾಗಿ ಈ ಬಾರಿ ಕಾಮಗಾರಿ ಚಾಲನೆಯಾಗುವವರೆಗೂ ಸಮಸ್ಯೆ ಎದುರಿಸುತ್ತಿರುವ ರೈತರ ಸಮೇತ ನ೧೮ ರಿಂದ ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವದಾಗಿ ತಿಳಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮುರಾಳ ಗ್ರಾ.ಪಂ ಅಧ್ಯಕ್ಷ ದೇವೆಂದ್ರಪ್ಪ ಬೆಳ್ಳಿಕಟ್ಟಿ ಭಾಜಪಾ ಮುಖಂಡ ಗಿರೀಶಗೌಡ ಪಾಟೀಲ ಪ್ರಮುಖರಾದ ಬಸವಂತರಾಯ ನಾಗರತ್ತಿ, ಯಮನಪಪ್ ಚಲವಾದಿ, ಯಲ್ಲಪ್ಪ ಚಲವಾದಿ, ನಿಂಗಪ್ಪ ಜಾಲವಾದಗಿ, ಬಸವರಾಜ ಸರೂರ, ಪೀರಸಾಬ ಮುಲ್ಲಾ, ಶಿವಾನಂದ ವಾಲಿ, ಮಲ್ಲಣ್ಣ ಬಿಜ್ಜೂರ, ಅಪ್ಪು ಚಲವಾದಿ, ಶರಣು ಚಲವಾದಿ, ಪ್ರಕಾಶ ಸರೂರ, ರೇವಣಸಿದ್ದಪ್ಪ ಮುರಾಳ, ಅಲಿಸಾಬ ಸುರಪೂರ ಸೇರಿದಂತೆ ಮತ್ತೀತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಎರಡು ದಿನಗಳ ಹಿಂದೆ ಕಾಣೆಯಾದ ಯುವತಿಯೊಬ್ಬಳು ಅರೆ ನಗ್ನಾವಸ್ಥೆಯಲ್ಲಿ ಶವವಾಗಿ ತಾಲೂಕಿನ ಮುದ್ನಾಳ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿದ್ದಾಳೆ.ಮೃತ ದುರ್ದೈವಿಯನ್ನು ಶೋಭಾ ಲಮಾಣಿ(೨೮) ಎಂದು ಗುರುತಿಸಲಾಗಿದೆ. ಮೃತ ದೇಹದ ಮೂಗಿನಲ್ಲ್ಲಿ ಬಂದ ನೊರೆ, ಅರೆನಗ್ನಾವಸ್ಥೆಯ ಸ್ಥಿತಿ ಸೇರಿದಂತೆ ಶೋಭಾಳ ಮೃತ ದೇಹ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.ಘಟನಾ ಸ್ಥಳಕ್ಕೆ ಡಿವಾಯ್‌ಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಘಟನೆಯ ಬಗ್ಗೆ ಶೋಬಾಳ ತಾಯಿ ಶಾಂತವ್ವ ಮಾಧ್ಯಮದೊಂದಿಗೆ ಮಾತನಾಡಿ ಶೋಭಾ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಬುಧವಾರ ಶೋಭಾ ತನ್ನನ್ನು ಸಾಯಿಸ್ತಾರೆ. ಇಂದಿಗೆ ಈ ಭೂಮಿಯ ಮೇಲಿನ ನನ್ನ ಋಣ ಮುಗೀತು. ನಾನು ಸತ್ತರೆ ಪೊಲೀಸರಿಗೆ ಭಾಷಾ ನ ಹೆಸರನ್ನು ಬರೆಸು ಎಂದಿದ್ದಳು. ನಾನು ಸಮಾಧಾನ ಮಾಡಿದ್ದೆ. ರಾತ್ರಿ ಸೈಫ್ಯಾ ಎನ್ನುವ ವ್ಯಕ್ತಿ ಜಗಳಾ ತೆಗೆದಿದ್ದ. ಅದಾದ ನಂತರ ನನ್ನ ಮಗಳು ಕಾಣೆಯಾಗಿದ್ದಳು. ಈ ಕುರಿತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸಂಭ್ರಮ 50 ರ ಸವಿನೆನಪಿನಲ್ಲಿ ಕರ್ನಾಟಕ ಸರ್ಕಾರ ಆಲಮೇಲ ತಾಲೂಕಾಡಳಿತದಿಂದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರನ್ನು”ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಪತ್ರ ನೀಡಿ ತಹಶೀಲ್ದಾರ ಕೆ.ವಿಜಯಕುಮಾರ ಸನ್ಮಾನಿಸಿದರು.ಆಲಮೇಲ ತಹಶೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರರಂಗದ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ಪತ್ರ ನೀಡಿ ಸಾಧಕರೆಂದು ಗುರುತಿಸಿ ಗೌರವಿಸಿದರು‌.ಈ ಸಂದರ್ಭದಲ್ಲಿ ಪಿಎಸ್ಐ ಅರವಿಂದ ಅಂಗಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ, ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ ಪಠಾಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ ನಾಯಕ, ತಾಲೂಕು ನೌಕರರ ಸಂಘದ ತಾಲೂಕಾಧ್ಯಕ್ಷ ರವಿ ಬಿರಾದಾರ, ಕಸಾಪ ತಾಲೂಕಾಧ್ಯಕ್ಷ ಶಿವಶರಣ ಗುಂದಗಿ, ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಭೀಮಾಶಂಕರ ಕೋಟಾರಗಸ್ತಿ ವೇದಿಕೆ ಮೇಲಿದ್ದರು.ಕಾರ್ಯಕ್ರಮದಲ್ಲಿ ಶಿರಸ್ತೇದಾರ ಪಿ ಎಸ್ ಮೂಕಿಹಾಳ, ಪ್ರದಸ ಎನ್ ಪಿ ದಶವಂತ, ಕಂದಾಯ ನಿರೀಕ್ಷಕ ಎಮ್ ಎ ಅತ್ತಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಎಮ್ ಕೆ…

Read More