ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ-ಯಾದಗೀರ ಹಾಗೂ ಆಲಮಟ್ಟಿ-ಚಿತ್ರದುರ್ಗ ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿ ಆಲಮಟ್ಟಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಸದಸ್ಯರು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮಂಗಳವಾರ ವಿಜಯಪುರದಲ್ಲಿ ಮನವಿ ಸಲ್ಲಿಸಿದರು.
ಆಲಮಟ್ಟಿಯಿಂದ ಯಾದಗೀರ ಮಾರ್ಗ ಹಾಗೂ ಆಲಮಟ್ಟಿಯಿಂದ ಚಿತ್ರದುರ್ಗ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಅಂಡರಪಾಸ್ ನಿರ್ಮಿಸುವುದು, ಹುಬ್ಬಳ್ಳಿ-ನಿಜಾಮುದ್ದಿನ್ ರೈಲನ್ನು ಆಲಮಟ್ಟಿ ಸ್ಟೇಷನ್ ಗೆ ನಿಲುಗಡೆ ಕಲ್ಪಿಸುವುದು, ಆಲಮಟ್ಟಿ ರೈಲ್ವೆ ನಿಲ್ದಾಣಗಳಲ್ಲಿ ಹೊಸದಾಗಿ ಸುಸಜ್ಜಿತವಾಗಿ ಕೋಣೆಗಳನ್ನು ನಿರ್ಮಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಹೋರಾಟ ಸಮಿತಿಯ ಅಧ್ಯಕ್ಷ ಭರತರಾಜ ದೇಸಾಯಿ , ರಮೇಶ ರೇಶ್ಮಿ, ಎನ್.ಎ. ಪಾಟೀಲ, ರಮೇಶ ಆಲಮಟ್ಟಿ, ಭೀಮಾಶಂಕರ ಉದಂಡಿ, ಮಹಾಂತೇಶ ಹಿರೇಮಠ, ಮುರಳಿ ಬಡಿಗೇರ, ಬಿ.ಕೆ. ಬಾಗವಾನ, ಸಿದ್ದು ಗೊಳಸಂಗಿ, ಮಲ್ಲು ರಾಠೋಡ, ಎಸ್.ಎಂ. ಜಲ್ಲಿ, ಪರಶುರಾಮ ಮಾದರ, ಎಂ.ಡಿ. ಬಾಗಲಕೋಟೆ ಮತ್ತೀತರರು ಇದ್ದರು.
ಸಚಿವರ ಪಾಟೀಲ ಮನವಿ ಸ್ವೀಕರಿಸಿ ಈ ಬಗ್ಗೆ ರಾಜ್ಯ ರೈಲ್ವೆ ಸಚಿವರಿಗೆ ಭೇಟಿಯಾಗಿ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಭರವಸೆ ನೀಡಿದರು.
