ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜಕ್ಕೆ ೧೫ ಸ್ಥಾನಗಳಿಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಎಲ್ಲ ೧೫ ಸ್ಥಾನಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಘೋಷಿಸಿದರು.
ತಾಲೂಕು ಕೃಷಿಕ ಸಮಾಜಕ್ಕೆ ಕಾರ್ಯಕಾರಿ ಸಮಿತಿಗೆ ಶಿವನಗೌಡ(ಶಿವಣ್ಣ) ಬಿರಾದಾರ, ಮಲ್ಲಪ್ಪ(ಮಲ್ಲಣ್ಣ) ಅಣ್ಣೆಪ್ಪನವರ, ಬಸವರಾಜ ಬ್ಯಾಕೋಡ, ಗೊಲ್ಲಾಳಪ್ಪ ಉಪ್ಪಿನ, ಶಿವಲಿಂಗಪ್ಪ ಮಂಗಾನವರ, ಬಸವರಾಜ ಸೋಮಪುರ, ಅರವಿಂದ ಸಜ್ಜನ, ರವೀಂದ್ರ ಬಾವಿಕಟ್ಟಿ, ಶಂಕರಗೌಡ ಪಾಟೀಲ, ಗುರುಸಂಗಪ್ಪ ಸಜ್ಜನ, ಗುರುನಗೌಡ ಪಾಟೀಲ, ಬಸವರಾಜ ಅವಟಿ, ಶಿವರಾಯ ಕಲಬುರ್ಕಿ, ಎನ್.ಜಿ.ಚಿಕ್ಕೊಂಡ, ಅಶೋಕ ಕಲ್ಲೂರ ಅವರು ಅವಿರೋಧವಾಗಿ ಆಯ್ಕೆಯಾದರು.
ನಂತರ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಚಾಂಚಿ, ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವನಗೌಡ ಬಿರಾದಾರ, ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಮಂಗಾನವರ, ಪ್ರಧಾನ ಕಾರ್ಯದರ್ಶಿಯಾಗಿ ಗೋಲಾಳಪ್ಪ ಉಪ್ಪಿನ, ಖಜಾಂಚಿಯಾಗಿ ಅರವಿಂದ ಸಜ್ಜನ, ಜಿಲ್ಲಾ ಪ್ರತಿನಿಧಿಯಾಗಿ ಬಸವರಾಜ ಸೋಮಪುರ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಘೋಷಿಸಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಕೃಷಿಕ ಸಮಾಜಕ್ಕೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಪ್ರಧಾನ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ,ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾದ, ಉಳಿದ ಕಾರ್ಯಕಾರಿ ಸದಸ್ಯರನ್ನು ರಾಷ್ಟ್ರೀಯ ಬಸವಸೈನ್ಯದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ತಾಲೂಕು ಅಧ್ಯಕ್ಷ ಸಂಜೀವ ಬಿರಾದಾರ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಮನ್ನಾನ ಶಾಬಾದಿ, ಶಂಕರಗುರು ರಜಪೂತ, ಜಟ್ಟಿಂಗರಾಯ ಮಾಲಗಾರ, ಸಂಗಮೇಶ ಜಾಲಗೇರಿ, ರಾಜು ಮೋದಿ ಇತರರು ಇದ್ದರು.

