ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಲಯ ಕನ್ನಡ ಸಾಹಿತ್ಯ ಪರಿಷತ್ತು ನೂತನವಾಗಿ ಆರಂಭಿಸಿದ “ವರ್ಷದ ವ್ಯಕ್ತಿ ಪ್ರಶಸ್ತಿ” ಯನ್ನು ಹಿರಿಯರಾದ ಬಸಣ್ಣ ಬೂದೂರು ನಗನೂರವರಿಗೆ ಪಟ್ಟಣದಲ್ಲಿ ರವಿವಾರ ಸಂಜೆ ಗೃಹ ಸನ್ಮಾನದ ಜೊತೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸಣ್ಣ ಬೂದೂರು, ಪ್ರಸಕ್ತ ಸಾಲಿನಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಮೂಲಕ ಅಳಿಲು ಸೇವೆ ಪರಿಗಣಿಸಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಕೊಡಮಾಡಿದ ವಲಯ ಕಸಾಪ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಇದೇ ವೇಳೆ ಸಾಹಿತಿ ನಿಂಗನಗೌಡ ದೇಸಾಯಿ ಸುರಪುರ ತಾಲ್ಲೂಕಿನ ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ, ಪದಾಧಿಕಾರಿಗಳಾದ ಹೆಚ್ಚ್ ರಾಠೋಡ್, ದೇವು ಹೆಬ್ಬಾಳ, ವೆಂಕಟೇಶ, ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಹೆಗ್ಗನದೊಡ್ಡಿ, ಗುಂಡಭಟ್ ಜೋಶಿ, ಮಹಿಪಾಲರಡ್ಡಿ ಡಿಗ್ಗಾವಿ, ಶಿವರಾಜು ಬೂದೂರು, ಪಾರ್ವತಿ ಬೂದೂರು, ಜ್ಯೋತಿ ದೇವಣಗಾವ್, ಡಿ ಸಿ ಪಾಟೀಲ್, ಪರುಶುರಾಮ ಬಳಬಟ್ಟಿ, ನಂದಪ್ಪ ಕವಲ್ದಾರ, ಬಂದೇನವಾಜ್ ನಾಲತವಾಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದು ಶುಭ ಹಾರೈಸಿ ಅಭಿನಂದಿಸಿದರು.

