Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಅಂಚೆ ಇಲಾಖೆಯು ಮಿನಿ ಬ್ಯಾಂಕ್ ಆಗಿ ಪರಿವರ್ತನೆಗೊಂಡು ಗ್ರಾಹಕರ ಸೇವೆಯನ್ನು ಮಾಡುತ್ತಿದೆ ಅಂಚೆ ಇಲಾಖೆಯ ಇತರ ಸೇವೆಗಳನ್ನು ಪಡೆದುಕೊಳ್ಳಬೇಕೆಂದು ಹಿರಿಯ ಮುಖಂಡ ಶ್ರೀಮಂತಗೌಡ ನಾಗೂರ ಹೇಳಿದರು.ಅವರು ತಾಲೂಕಿನ ದೇವಣಗಾಂವ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನೂರಾರು ವರ್ಷಗಳ ಇತಿಹಾಸ ಇರುವ ಅಂಚೆ ಇಲಾಖೆಯು ಕೇವಲ ಪತ್ರಗಳ ಬಟವಡೆ ಮಾಡುವುದನ್ನ ಅಷ್ಟೇ ಅಲ್ಲ ಅದರ ಜೊತೆಗೆ ಗ್ರಾಹಕರಿಗೆ ಅನುಕೂಲವಾಗುವ ಬ್ಯಾಂಕ್ ಸೇವೆಯನ್ನು, ಜೀವ ವಿಮೆ, ಪಿಂಚಣಿ, ಸೇರಿದಂತೆ ಅನೇಕ ಸವಲತ್ತುಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ ಆದ್ದರಿಂದ ಎಲ್ಲರೂ ಅಂಚೆ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೇ. ಈರಯ್ಯ ಮಠ ಮಾತನಾಡಿ ಹಿಂದಿನ ಕಾಲದಲ್ಲಿ ಅಂಚೆ ಇಲಾಖೆ ಜನರ ಜೀವನದ ಜೀವನ ಅಡಿಯಾಗಿತ್ತು ಕಾಲಕ್ರಮೇಣ ಸ್ವಲ್ಪ ತೆರೆಮರೆಗೆ ಸರಿದಿದ್ದರೂ ಕೂಡ ಇಂದು ಹೊಸ ಹೊಸ ಸೇವೆಗಳನ್ನು ನೀಡುವ ಮೂಲಕ ಮತ್ತಷ್ಟು ಗ್ರಾಹಕರಿಗೆ ಹತ್ತಿರವಾಗುವಂತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದ ಹಿರಿಯರು ಸುಮಾರು ಎರಡು ದಶಕಗಳ ಹಿಂದಿನಿಂದ ಇಂತಹ ಸಮಾವೇಶಗಳನ್ನು ಏರ್ಪಡಿಸುವ ಮುಖಾಂತರ ನೀಲಗಾರ ಸಮಾಜದ ಸಂಘಟನೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ, ಪ್ರಮುಖವಾಗಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದು ಪ್ರತಿಭಾವಂತರನ್ನ ಪುರಸ್ಕರಿಸುವುದು.ಜ.5 ರವಿವಾರದಂದು ವಿಜಯಪುರ ಮತ್ತು ಅಥರ್ಗಾ ನೀಲಗಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜಗದಾರಾಧ್ಯ ಶ್ರೀ ಜಯಶಾಂತಲಿಂಗೇಶ್ವರ ಗುರುಭವನದಲ್ಲಿ ನೆರವೇರುವ ಸಮಾವೇಶವು ನಮ್ಮ ಸಮಾಜದ ರಾಜ್ಯಮಟ್ಟದ 9ನೇಯ ಸಮಾವೇಶವಾಗಿದೆ.ಈ ಸಮಾವೇಶದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ, ಪ್ರಮುಖವಾಗಿ ಪ್ರತಿಭಾ ಪುರಸ್ಕಾರ, 80 ವಯಸ್ಸು ದಾಟಿದ ಹಿರಿಯರಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನ ಜೊತೆಗೆ ವರಕನ್ಯಾ ಸಮಸ್ಯೆ ಕುರಿತು ಚರ್ಚೆ ಕೈಗೊಳ್ಳಲಾಗುತ್ತದೆ.ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿಗಾಗಿ ನಮ್ಮ ಸಮಾಜವನ್ನು ಸರ್ಕಾರದ ಮುಖಾಂತರ ವಿಶೇಷ ಪ್ರಾಧಿಕಾರದ ಸ್ಥಾನಮಾನ ಪಡೆಯಲು ಪ್ರಯತ್ನಿಸುವುದು, ಸಹಕಾರಿ ಬ್ಯಾಂಕನ್ನು ಸ್ಥಾಪಿಸುವುದು ,ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ವಿಚಾರವಾಗಿ ಚರ್ಚಿಸಲಾಗುವುದು ಎಂದು ವಿಜಯಪುರದ ನೀಲಗಾರ ಸಮಾಜದ ರಾಜ್ಯ ಮಟ್ಟದ ಪದಾಧಿಕಾರಿಯಾದ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸಾರ್ಥಕ ಬದುಕಿನ ಸಾಧಕಿ, ಕವಿ ಲೇಖಕಿ, ಸ್ತ್ರೀ ವಾದಿ, ಸಮಾಜ ಸುಧಾರಕಿ, ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳು, ಬದುಕು, ಬರಹಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಡಾ ಸಿದ್ದಲಿಂಗ ರಾಠೋಡ್ ಹೇಳಿದರು.ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 194 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಮನಿತ ಮಹಿಳೆಯರ ಧ್ವನಿಯಾಗಿ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡುವ ಮೂಲಕ, ವಿಧವೆಯರ, ಆರ್ಥಿಕ ದುರ್ಬಲ ಮಹಿಳೆಯರ ಬಲವರ್ಧನೆ ಅವಿರತ ಶ್ರಮಿಸಿ, ಅಕ್ಷರದ್ವನೆಂದು ಕೀರ್ತಿಗೆ ಭಾಜನಳಾದ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದವರು, ಮಹಿಳೆಯರು ಮುಖ್ಯವಾಹಿನಿಗೆ ಬರಲು, ಅವರ ಬದುಕಿನಲ್ಲಿ ಭರವಸೆ ತುಂಬಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ, ವಿಠ್ಠಲ ಎಸ್ ಭಜಂತ್ರಿ, ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಮಹಿಳೆಯರ…
ರಚನೆ- ಮಮತಾ ಶೃಂಗೇರಿ ಉದಯರಶ್ಮಿ ದಿನಪತ್ರಿಕೆ ದೂರ ದಿಗಂತದಲಲ್ಲಿ,ನೇಸರನು ಉದಯಿಸಿರಲುಭುವಿಯೆಲ್ಲಾ ಬೆಳಕಾಗಿ,ಎಲ್ಲೆಡೆ ಸೊಬಗು ಸುರಿದಿರಲು. ಹಕ್ಕಿಗಳ ಚಿಲಿಪಿಲಿ ಉಲಿಗೆ,ಮನದಿ ಉಲ್ಲಾಸ ಮೂಡಿರಲು,ಬಿದ್ದ ಇಬ್ಬನಿಯ ಹನಿಯೊಳು,ಸಪ್ತವರ್ಣಗಳು ಪ್ರತಿಫಲಿಸಿರಲು. ಎಳೆ ಬಿಸಿಲ ಹೊಂಗಿರಣ,ಸುಳಿಯೆಲೆಯ ಮೇಲೆ ಬಿದ್ದಿರಲು,ಚಳಿಗೆ ಮುದುಡಿದ ಮೊಗ್ಗು,ಅರೆಬಿರಿದು ಅರಳಿ ನಗುತಿರಲು. ಸುಂದರವು ಈ ಧರೆಯುಪದಗಳಲಿ ವರ್ಣಿಸಲು ಅಸದಳವುಬರೆಯ ಹೊರಟರೆ ಇಲ್ಲಿವರ್ಣಮಾಲೆಯೇ ಸೋಲುವುವು.
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಬೆಳಗಿನ ಜಾವ ಹಿತ್ತಲ ಬಾಗಿಲಿನಲ್ಲಿ ಗೊಣಗುತ್ತಾ ಬಂದ ಕೆಲಸದಾಕೆಯನ್ನು ಏನೆಂದು ಪ್ರಶ್ನಿಸಿದಾಗ ಆಕೆ ಹೇಳಿದ್ದು.. ಮನೆ ಕೆಲಸ ನಾನೇ ಮಾಡಬೇಕು, ಮಕ್ಕಳನ್ನು ನಾನೇ ಜೋಪಾನ ಮಾಡಬೇಕು, ಹಣಕಾಸಿನ ಎಲ್ಲಾ ವ್ಯವಸ್ಥೆಗಳನ್ನು ನಾನೇ ಮಾಡಿಕೊಳ್ಳಬೇಕು, ಗಂಡ ಏನನ್ನು ಮಾಡದ, ನೆವ ಹೇಳಿ ಕೆಲಸ ತಪ್ಪಿಸಿಕೊಳ್ಳುವನು ಎಂದು. ನಕ್ಕು ಆಕೆಗೆ ಸಮಾಧಾನಿಸಿದ ನಾನು ನನ್ನ ಕೆಲಸದಲ್ಲಿ ತೊಡಗಿಕೊಂಡೆನಾದರೂ ಮನಸ್ಸು ಹೆಣ್ಣಿನ ಅಸ್ತಿತ್ವದ ಕುರಿತು ಪ್ರಶ್ನಿಸತೊಡಗಿತು.ಹೆಣ್ಣು ಯಾರು..? ಹುಟ್ಟಿದ ಮನೆಯಲ್ಲಿ ತನ್ನ ಜೀವಿತದ ಐದನೇ ಒಂದು ಭಾಗವನ್ನು ತಂದೆ ತಾಯಿಯ ಜೊತೆ ಕಳೆಯುವ, ವಿದ್ಯಾಭ್ಯಾಸ ಪಡೆಯುವ ಹೆಣ್ಣನ್ನು ತಂದೆ ತಾಯಿ ಮತ್ತೊಬ್ಬರ ಮನೆಗೆ ಹೋಗುವವಳು ಪರಕೀಯಳು ಎಂಬಂತೆಯೇ ಬೆಳೆಸುತ್ತಾರೆ. ಯಾವುದೇ ಸಾಮಾಜಿಕ ಹಿನ್ನೆಲೆಯಲ್ಲಿದ್ದರೂ ಕೂಡ ಪ್ರತಿಯೊಂದು ಮನೆಯಲ್ಲಿಯೂ ಕೊಟ್ಟ ಮನೆಗೆ ಹೋಗುವ, ಹೋದ ಮೇಲೆ ಅಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಬೋಧಿಸುವ ಸಮಾಜದ ಬಹು ದೊಡ್ಡ ವರ್ಗವೇ ಇದೆ. ಇದರ ಅರ್ಥ ಇಷ್ಟೇ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೀದರ್ ಜಿಲ್ಲೆಯ ಪ್ರಥಮ ದರ್ಜೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ನೇತೃತ್ವದಲ್ಲಿ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಆತ್ಮಹತ್ಯೆಗೂ ಮುನ್ನ ಸಚಿನ್ ಪಾಂಚಾಲ್ ಅವರು ಬರೆದ ಏಳು ಪುಟಗಳ ಡೆತ್ ನೋಟವೂ ಕೂಡ ಲಭ್ಯವಾಗಿದೆ. ಆ ಡೆತ್ ನೋಟಲ್ಲಿ ಟೆಂಡರ್ ಕೊಡಿಸುವದಾಗಿ ಆರ್.ಡಿ.ಪಿ.ಆರ್ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಕಲಬುರ್ಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಹಾಗೂ ಇತರ 8 ಜನರು ಹಣಕ್ಕಾಗಿ ಪೀಡುಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ ಎಂದು ಭೋಗೇಶ್ ಸೋಲಾಪುರ್ ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಸಚಿನ್ ಅವರಿಗೆ ಟೆಂಡರ್ ಕೊಡಿಸುವದಾಗಿ ಹಣ ಕೂಡ ಪಡೆದಿದ್ದಾರೆ ಎನ್ನಲಾಗಿದೆ. ಟೆಂಡರ್ ಕೂಡ ಕೊಡಿಸಲಿಲ್ಲ ಹಾಗೂ ಹಣವೂ ವಾಪಸ್ ಕೊಡಲಿಲ್ಲ ಎಂದು ಗಂಭೀರ ಆರೋಪವಿದೆ. ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂದಿಸಿದಂತೆ ರಾಜು ಕಪನೂರ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಾತಃಸ್ಮರಣೀಯ ಶ್ರೀ ಯತಿಕುಲಚಕ್ರವರ್ತಿ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಮಹಾಸಮಾರಾಧನಾ ಪೇಜಾವರಮಠ ಇವರ ಆರಾಧನೋತ್ಸವ ಅಂಗವಾಗಿ ಗುರುವಾರ ನಗರದ ಕೃಷ್ಣ – ವಾದಿರಾಜ ಮಠದಲ್ಲಿ ವಿಜೃಂಭಣೆಯ ರಥೋತ್ಸವ ಜರುಗಿತು.ಪಂಡಿತ ವಾಸುದೇವಚಾರ್ಯ ಮತ್ತು ಶ್ರೀಮಠದ ಗೌರವಧ್ಯಕ್ಷ ಗೋಪಾಲ ನಾಯಕ ಮಂಗಳಾರತಿ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಪಂಡಿತ ಭಾರತೀಯ ರಮಾಣಾಚಾರ್ಯ ಅವರು ಶ್ರೀಗಳ ಕುರಿತು ಪ್ರವಚನ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಮಠದ ಅಧ್ಯಕ್ಷರು ಹಾಗೂ ವೈದ್ಯರಾದ ಕಿರಣ್ ಚುಳಕಿ, ಸಮೀರ ಆಚಾರ್ಯ, ಶ್ರೀ ಮಠದ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ, ಸದಸ್ಯರಾದ ವಿಕಾಸ ಪದಕಿ, ಗೋವಿಂದ ಜೋಶಿ, ವಿಜಯ ಜೋಶಿ, ರಾಕೇಶ್ ಕುಲಕರ್ಣಿ, ಪವನ ಜೋಶಿ, ಅಶೋಕ ರಾವ್, ಕೃಷ್ಣ ಪಾಡಗಾನೂರ, ಅಶೋಕ್ ಪದಕಿ, ವಿ.ಸಿ.ಕುಲಕರ್ಣಿ, ಉಮೇಶ ಕಾರಜೋಳ, ಹರೀಶಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ಮಹಾನಗರ ಪಾಲಿಕೆಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಪಾಟೀಲ, ಮಹೇಂದ್ರ ನಾಯಕ, ವಿಷ್ಣು ಜಾಧವ, ಬಿ.ಆರ್.ಕುಲಕರ್ಣಿ, ವಿ.ಬಿ.ಕುಲಕರ್ಣಿ, ವೆಂಕಟೇಶ ಗುಡಿ, ಗೋವಿಂದರಾವ ದೇಶಪಾಂಡೆ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕ್ಯಾಂಪಸ್ ಗುರುವಾರ ಸಂಪೂರ್ಣ ರಂಗು ರಂಗಾಗಿತ್ತು.ಹೊಸ ವರ್ಷವನ್ನು ಅನೇಕರು ಸಿಳ್ಳೆ ಚಪ್ಪಾಳೆ ಹೊಡೆದು, ಕೇಕ್ ಕಟ್ ಮಾಡಿ ಆಚರಿಸುತ್ತಾರೆ,ಆದರೆ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾತಾವರಣ ಸಂಪೂರ್ಣ ಇದಕ್ಕೆ ತದ್ವಿರುದ್ದವಾಗಿತ್ತು. ಎಲ್ಲಿ ನೋಡಿದರಲ್ಲಿ ಇಲಕಲ್ ಸೀರೆ, ಹಸಿರು ಬಳೆ, ಮುಡಿತುಂಬ ಮಲ್ಲಿಗೆ ಹೂ, ಕೈತುಂಬ ಹಸಿರು ಬಳೆ ಧರಿಸಿದ ವಿದ್ಯಾರ್ಥಿನಿಯರು ಮತ್ತು ಧೋತಿ, ಪಂಚೆ, ಶೆಲ್ಲೆ ಧರಿಸಿದ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.ಹೌದು, ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂಸ್ಕೃತಿ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತೀಯ ಉಡಿಗೆ-ತೊಡಿಗೆ, ನಮ್ಮ ಆಹಾರ ಪದ್ದತಿ ಮತ್ತು ನಮ್ಮ ಸಂಸ್ಕೃತಿಯ ಭಾಗವಾದ ಬೈಲಾಟ, ಕೋಲಾಟ, ಡೊಳ್ಳು ಕುಣಿತ, ತತ್ವಪದ, ಭರತನಾಟ್ಯ, ಬಿಸು ಕಲ್ಲಿನ ಹಾಡು, ಕುಟ್ಟು ವಾಗಿನ ಹಾಡು, ಜೋಕುಮಾರನ ಹಾಡು, ಸೀಮಂತದ ಹಾಡು, ಅರಿಸಿಣ ಹಚ್ಚುವಾಗಿನ ಹಾಡು, ಮೈನೆರೆದಾಗ ಹಾಡುವ ಹಾಡು ಸೇರಿದಂತೆ ಎಲ ರೀತಿಯಲ್ಲಿ ಹಳ್ಳಿಯ ಸಂಸ್ಕೃತಿಯನ್ನು ಬಿಂಬಿಸಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ತತ್ವ,ಆದಶ೯ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಭಾರತ ಸೇವಾದಳ ಶಿಸ್ತಿನ ಸಂಸ್ಥೆಯಾಗಿದ್ದು, ಇಲ್ಲಿ ಭಾಗವಹಿಸುವ ಎಲ್ಲ ಶಿಕ್ಷಕರು, ಮಕ್ಕಳು ಶಿಸ್ತಿಗೆ ಬದ್ದರಾಗಿರಬೇಕು. ಹಾಗೂ ಇಲ್ಲಿ ಶಿಸ್ತು, ಸಮಯಪ್ರಜ್ಞೆ, ಸೇವಾ ಮನೋಭಾವನೆ, ಶಾರೀರಿಕ ಚಟುವಟಿಕೆಗಳನ್ನು ಉತ್ತಮವಾಗಿ ಕಲಿತು ತಮ್ಮ ಶಾಲಾ ಮಕ್ಕಳಿಗೆ ಕಲಿಸಬೇಕು. ಮಕ್ಕಳಲ್ಲಿ ದೇಶಾಭಿಮಾನವನ್ನು ಬೆಳೆಸಬೇಕೆಂದು ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಭಾರತ ಸೇವಾದಳ ಎಲ್ಲಾ ತಾಲೂಕು ಸಮಿತಿ ಹಾಗೂ ಸರ್ಕಾರಿ ಪ್ರೌಢಶಾಲೆ ಇಂಡಿ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ಸೇವಾದಳ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಭಾರತ ಸೇವಾದಳ ಕಾರ್ಯಚಟುವಟಿಕೆಗಳು, ರಾಷ್ಟ್ರಧ್ವಜ ಆರೋಹಣ, ಅವರೋಹಣ ಮತ್ತು ಶಾರೀರಿಕ, ನೈತಿಕ ಯೋಗ ಮತ್ತು ಮೌಲ್ಯ ಶಿಕ್ಷಣವನ್ನು ನೀಡುವುದರ ಜೊತೆಗೆ ದೇಶಪ್ರೇಮ,…
ಉದಯರಶ್ಮಿ ದಿನಪತ್ರಿಕೆ ಚಡಚಣ: ಅಮರಶಿಲ್ಪಿ ಜಕಣಾಚಾರಿ ಕಟ್ಟಿಗೆ,ಕಲ್ಲು ಬಂಡೆಗಳಿಂದ ತಾವು ತಯಾರಿಸಿದ ಶಿಲ್ಪ ಕಲೆಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಉದ್ದೇಶಿಸಿ ಮಾತನಾಡುತ್ತಿದ್ದರು.ಅಮರಶಿಲ್ಪಿ ಜಕಣಾಚಾರ್ಯರು ಉತ್ತಮ ಕಲಾಕೃತಿಗಳನ್ನು ನಿರ್ಮಿಸಿ ನಾಡಿನ ಅಲಂಕಾರ ಹೆಚ್ಚಿಸಿದ್ದಾರೆ.ಅವರ ಪರಿಶ್ರಮದ ಫಲವಾಗಿ ನಾಡಿನಾದ್ಯಂತ ಇರುವ ಕಲಾಕೃತಿಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಯಾತ್ರಿಕರು ಆಗಮಿಸುವಂತೆ ಮಾಡಿದ್ದಾರೆ ಎಂದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಅವರಂತಹ ಶಿಲ್ಪಿ ಇನ್ನೂ ಯಾರೂ ಜನಿಸಿಲ್ಲ.ಕಲ್ಲಿನಲ್ಲಿ ಕಸೂತಿಮಾಡಿ ಕಲ್ಲರಳಿಸಿ ಹೂ ಮಾಡಿದ ಮಹಾನ್ ವ್ಯಕ್ತಿ.ಬೇಲೂರು, ಹಳೇಬೀಡು, ಹಂಪಿ,ಐಹೊಳೆ, ಪಟ್ಟದಕಲ್ಲು ಮುಂತಾದ ಅನೇಕ ಯಾತ್ರಾ ಸ್ಥಳಗಳಲ್ಲಿ ಅವರು ಶಿಲೆಯಲ್ಲಿ ಜೀವಂತಕಲೆ ನಿರ್ಮಿಸಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಹೊಸ ವರ್ಷವು ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ತರಲಿ.ವಿದ್ಯಾಮಾತೆ ವಿದ್ಯಾ-ಬುದ್ಧಿ ಕರುಣಿಸಲಿ ಎಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಡಾ: ರಾಜಕುಮಾರ್…
