ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದ ಹಿರಿಯರು ಸುಮಾರು ಎರಡು ದಶಕಗಳ ಹಿಂದಿನಿಂದ ಇಂತಹ ಸಮಾವೇಶಗಳನ್ನು ಏರ್ಪಡಿಸುವ ಮುಖಾಂತರ ನೀಲಗಾರ ಸಮಾಜದ ಸಂಘಟನೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ, ಪ್ರಮುಖವಾಗಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದು ಪ್ರತಿಭಾವಂತರನ್ನ ಪುರಸ್ಕರಿಸುವುದು.
ಜ.5 ರವಿವಾರದಂದು ವಿಜಯಪುರ ಮತ್ತು ಅಥರ್ಗಾ ನೀಲಗಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜಗದಾರಾಧ್ಯ ಶ್ರೀ ಜಯಶಾಂತಲಿಂಗೇಶ್ವರ ಗುರುಭವನದಲ್ಲಿ ನೆರವೇರುವ ಸಮಾವೇಶವು ನಮ್ಮ ಸಮಾಜದ ರಾಜ್ಯಮಟ್ಟದ 9ನೇಯ ಸಮಾವೇಶವಾಗಿದೆ.
ಈ ಸಮಾವೇಶದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ, ಪ್ರಮುಖವಾಗಿ ಪ್ರತಿಭಾ ಪುರಸ್ಕಾರ, 80 ವಯಸ್ಸು ದಾಟಿದ ಹಿರಿಯರಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನ ಜೊತೆಗೆ ವರಕನ್ಯಾ ಸಮಸ್ಯೆ ಕುರಿತು ಚರ್ಚೆ ಕೈಗೊಳ್ಳಲಾಗುತ್ತದೆ.
ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿಗಾಗಿ ನಮ್ಮ ಸಮಾಜವನ್ನು ಸರ್ಕಾರದ ಮುಖಾಂತರ ವಿಶೇಷ ಪ್ರಾಧಿಕಾರದ ಸ್ಥಾನಮಾನ ಪಡೆಯಲು ಪ್ರಯತ್ನಿಸುವುದು, ಸಹಕಾರಿ ಬ್ಯಾಂಕನ್ನು ಸ್ಥಾಪಿಸುವುದು ,ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ವಿಚಾರವಾಗಿ ಚರ್ಚಿಸಲಾಗುವುದು ಎಂದು ವಿಜಯಪುರದ ನೀಲಗಾರ ಸಮಾಜದ ರಾಜ್ಯ ಮಟ್ಟದ ಪದಾಧಿಕಾರಿಯಾದ ಶಿವಶಂಕರ ತಾಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಚಿಕ್ಕಾಲಗುಂಡಿಯ ಮಲ್ಲಿಕಾರ್ಜುನ ಮಠದ ಶಿವಶರಣಾನಂದ ಮಹಾಸ್ವಾಮಿಗಳು, ಪಾವನ ಸಾನಿಧ್ಯವನ್ನು ಕಕಮರಿಯ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನಮಠದ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾಸ್ವಾಮೀಜಿಗಳು ಸಾನಿಧ್ಯವನ್ನು ಶ್ರೀ ಗುರುದೇವ ಆಶ್ರಮ ಅಥರ್ಗಾದ ಈಶಪ್ರಸಾದ ಮಹಾಸ್ವಾಮಿಗಳು,
ಉದ್ಘಾಟಕರಾಗಿ ಮಾಜಿ ಕೇಂದ್ರ ಸಚಿವರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ (ಯತ್ನಾಳ) ಮತ್ತು ವಿಜಯಪುರದ ಮಹಾನಗರ ಪಾಲಿಕೆಯ ಉಪಮಹಾಪೌರರಾದ ದಿನೇಶ ಹಳ್ಳಿ , ಈ ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಲಿಂಗಾಯತ ನೀಲಗಾರ ಸಮಾಜದ ಅಧ್ಯಕ್ಷ ಅಶೋಕ ಸಿ. ವಿಜಾಪುರ, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಲಿಂಗಾಯತ ನೀಲಗಾರ ಸಮಾಜದ ಗೌರವಾಧ್ಯಕ್ಷ ಶಿವಾನಂದ ಶಂ. ಶಿರೋಳ , ಕಾರ್ಯಾಧ್ಯಕ್ಷ ವಿಶ್ವನಾಥ ಶೇ. ಸೋರಗಾಂವಿ, ಓಂ ಗಣೇಶ ಸೋಶಿಯಲ್ ಎಜ್ಯುಕೇಶನಲ್ ಟ್ರಸ್ಟ್, ಬೆಂಗಳೂರಿನ ಶಾಖೆಯ ಪ್ರಧಾನ ಕಾರ್ಯದರ್ಶಿ, ಗಣೇಶ ಜಿ. ಜಯರಾಮ, ವಿಜಯಪುರ ಜಿಲ್ಲಾ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ವಿನಿಕುಮಾರ ಕೋಷ್ಟಿ, ಅತಿಥಿಗಳಾಗಿ ವಿಜಯಪುರದ ಲಿಂಗಾಯತ ನೀಲಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಸಂಗಪ್ಪ ತಿ. ಸೋರಗಾಂವಿ, ಮಾಜಿ ಅಧ್ಯಕ್ಷರಾದ ಶ್ರೀ ಸದಾಶಿವ ಸಿ. ಶಿರೋಳ, ಹಾಲಿ ಅಧ್ಯಕ್ಷರಾದ ಶ್ರೀ ಸದಾನಂದ ಗು. ಗಣಿ,
ಅಥರ್ಗಾ ಘಟಕದ ಗೌರವಾಧ್ಯಕ್ಷರಾದ ಕುಲಪ್ಪ ಗು. ನಿವರಗಿ, ಇವರೆಲ್ಲರೂ ಈ ಸಮಾವೇಶಕ್ಕೆ ಆಗಮಿಸಲಿದ್ದಾರೆ ಆದ ಕಾರಣ ಕನಾ೯ಟಕ ಮತ್ತು ಮಾಹರಾಷ್ಟ ರಾಜ್ಯದ ಲಿಂಗಾಯತ ನೀಲಗಾರ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾವೇಶಕ್ಕೆ ಹೆಚ್ಚು ಮೆರಗು ತರಬೇಕು ಎಂದು ಆಯೋಜಕರು ಪ್ರಕಟಿನೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಗೋಷ್ಠಿಯಲ್ಲಿ ವಿಜಯಪುರ ನಗರ ಘಟಕ ಅಧ್ಯಕ್ಷರು ಸದಾನಂದ ಗಣಿ , ಅಥರ್ಗ ರಾಜ್ಯ ಪದಾಧಿಕಾರಿ ಶ್ರೀಕಾಂತ ನೀವರಗಿ ,ವಿಜಯಪುರ ಘಟಕದ ಮಾಜಿ ಅಧ್ಯಕ್ಷರು ಬಸವರಾಜ ಗೊಳಸಂಗಿ, ರಾಜೇಂದ್ರ ಗೋಸಂಗಿ, ಪ್ರಭು ನೀಲವಾನಿ, ಅಶೋಕ ಗೊಳಸಂಗಿ , ರಾಜಕುಮಾರ ಗೊಳಸಂಗಿ ಮತ್ತಿತರರು ಹಾಜರಿದ್ದರು

