ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸಾರ್ಥಕ ಬದುಕಿನ ಸಾಧಕಿ, ಕವಿ ಲೇಖಕಿ, ಸ್ತ್ರೀ ವಾದಿ, ಸಮಾಜ ಸುಧಾರಕಿ, ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳು, ಬದುಕು, ಬರಹಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಡಾ ಸಿದ್ದಲಿಂಗ ರಾಠೋಡ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 194 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಮನಿತ ಮಹಿಳೆಯರ ಧ್ವನಿಯಾಗಿ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡುವ ಮೂಲಕ, ವಿಧವೆಯರ, ಆರ್ಥಿಕ ದುರ್ಬಲ ಮಹಿಳೆಯರ ಬಲವರ್ಧನೆ ಅವಿರತ ಶ್ರಮಿಸಿ, ಅಕ್ಷರದ್ವನೆಂದು ಕೀರ್ತಿಗೆ ಭಾಜನಳಾದ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದವರು, ಮಹಿಳೆಯರು ಮುಖ್ಯವಾಹಿನಿಗೆ ಬರಲು, ಅವರ ಬದುಕಿನಲ್ಲಿ ಭರವಸೆ ತುಂಬಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ, ವಿಠ್ಠಲ ಎಸ್ ಭಜಂತ್ರಿ, ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಮಹಿಳೆಯರ ಏಳಿಗೆಗಾಗಿ ಹಲವು ಆಶ್ರಮಗಳನ್ನು ಸ್ಥಾಪಿಸಿ ಅವರ ಸ್ವಾವಲಂಬಿ ಬದುಕಿಗೆ ಸ್ಪೂರ್ತಿಯಾದ ಶ್ರೇಷ್ಠ ಸಮಾಜ ಸೇವಕಿ ಎಂದರು.
ಉಪನ್ಯಾಸಕರಾದ ಮಲ್ಲಿಕಾರ್ಜುನ ಮರಡ್ಡಿ, ನಸ್ರೀನ್ ತಾಜ್, ಸುಮಾ ಎಚ್ಚ್ ಮಾತನಾಡಿದರು ಡಾ ಬಸಮ್ಮ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಡಾ ಪೂಜಾ ಹೊನ್ನುಟಗಿ, ಶಶಿಕುಮಾರ್, ಡಾ ಯಂಕನಗೌಡ ಎಸ್ ಪಾಟೀಲ, ಡಾ ಮಲ್ಲಣ್ಣ ಬಿಳೇಬಾವಿ, ಡಾ ಶರಣಪ್ಪ ನಡಕೂರ, ಪವನ ಕುಲ್ಕರ್ಣಿ, ಶರಣಬಸವ ಅಂಗಡಿ, ಬಸವರಾಜ ಹೋಳಿಕಟ್ಟಿ, ಮಾಸುಮಲಿ ನಾಶಿ, ಸೋಮನಾಥ ಭಜಂತ್ರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

