Author: editor.udayarashmi@gmail.com

ಲೇಖನಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಶಕುಂತಲಾ ದೇವಿ ಅವರು ಮಾನವ ಕಂಪ್ಯೂಟರ್ ಎಂದೇ ಖ್ಯಾತಿಗಳಿಸಿದ್ದ ವಿಶ್ವ ವಿಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ. ಬಾಲ ಪ್ರತಿಭೆಯಾಗಿ ಬೆಳಕಿಗೆ ಬಂದ ಇವರು ಜ್ಯೋತಿಷ್ಯ ಶಾಸ್ತ್ರದಲ್ಲೂ ವಿದ್ವಾಂಸರಾಗಿದ್ದರು. ಶಕುಂತಲಾ ದೇವಿ ಕ್ರಿಸ್ತಶಕ 1929ರ ನವೆಂಬರ್ 4ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಸಿ.ವಿ.ಎಸ್ ರಾಜಾ ರಾವ್ ಹಾಗೂ ತಾಯಿ ಸುಂದರಮ್ಮ. ಅವರ ತಂದೆ ಪುರೋಹಿತರಾಗಿದ್ದರು. ಕೆಲವು ಸಮಯ ಅವರು ಸರ್ಕಸ್ ನಲ್ಲೂ ಕೆಲಸ ಮಾಡುತ್ತಿದ್ದರು. ಶಕುಂತಲಾದೇವಿಯವರು ಚಿಕ್ಕಪ್ರಾಯದಲ್ಲಿ ಗಣಿತದಲ್ಲಿ ಅತ್ಯಾಸಕ್ತರಾಗಿದ್ದರು ಮತ್ತು ಅತ್ಯಂತ ಪ್ರತಿಭಾನ್ವಿತರಾಗಿದ್ದರು. ಹಲವಾರು ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು. ಬಾಲ್ಯದಿಂದಲೇ ಶಕುಂತಲಾ ದೇವಿಯವರ ಪ್ರತಿಭೆ ಸಾಮಾನ್ಯ ಜನರಿಗೂ ಅರ್ಥವಾಗುವಷ್ಟು ಜನಜನಿತವಾಗಿತ್ತು.ಮನೆತನದ ಪೌರೋಹಿತ್ಯವೃತ್ತಿಯನ್ನು ಮಾಡಲು ಒಪ್ಪದೇ ಇವರ ತಂದೆ ದೇವಸ್ಥಾನದಲ್ಲಿ ಪೂಜಾರಿಯಾಗುವುದನ್ನು ವಿರೋಧಿಸಿ ಸರ್ಕಸ್ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿದರು. ಮಗಳಿಗೆ ಇಸ್ಪೀಟ್ ಎಲೆಗಳಲ್ಲಿ ಮಾಡುವ ಕೆಲವು ಕೈಚಳಕಗಳ ಬಗ್ಗೆ ತರಬೇತಿ ನೀಡಿದರು. ತಂದೆಯ ಈ ಪ್ರತಿಭೆ…

Read More

ಲೇಖನ- ಶ್ರೀಮತಿ ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ‘ನಮ್ಮ ವಚನದ ನೂರೆಂಟು ಅಧ್ಯಯನಕ್ಕೆ ಶತರುದ್ರೀಯ ಯಾಗ ಸಮ ಬಾರದಯ್ಯಾ’ಸನಾತನಿಗಳ ಶ್ರೇಷ್ಠವಾದ, ಭವ್ಯವಾದ ಯಜ್ಞ ಶತರುದ್ರೀಯ ಯಜ್ಞವಾಗಿದೆ. ಶರಣರ ವಚನಗಳು ಮೌಲ್ಯಕ್ಕೆ ಅದನ್ನು ಹೋಲಿಸಿದರೆ ಅದೂ ಕೂಡ ಕಡಿಮೆಯೇ ಆಗುತ್ತದೆ.‘ವಚನದ ಸಾವಿರ ಪಾರಾಯಣಕೆ ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ’ ಎಂದು ಹೇಳುತ್ತಾರೆ. ವೈದಿಕ ವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಶರಣ ಶಿವಯೋಗಿ ಸಿದ್ಧರಾಮರು ಶರಣರ ವಚನಗಳ ಹಿರಿಮೆ ಗರಿಮೆಯನ್ನು ಈ ವಚನದಲ್ಲಿ ಎತ್ತಿ ಹಿಡಿದಿದ್ದಾರೆ.ಸೊಲ್ಲಾಪುರದ ನೊಳಂಬ ರಾಣಿ ಚಾಮಲಾದೇವಿಯ ಅರಸೊತ್ತಿಗೆಯಲ್ಲಿ ರಾಜಗುರುಗಳಾಗಿ ಕೆರೆ, ಕಾಲುವೆ ನಿರ್ಮಾಣ ಮಾಡಿ, ಜನಸೇವೆ ಮಾಡಿ ಕರ್ಮಯೋಗಿಯಾದರು. ಈ ಎಲ್ಲ ಕಾರ್ಯದಲ್ಲಿ ಹಾವಿನಹಾಳ ಕಲ್ಲಯ್ಯನವರು ಜೊತೆಯಾಗಿದ್ದರು. ಸಿದ್ಧರಾಮ ವಚನ, ಸ್ವರ ವಚನ, ಬಸವ ಸ್ತೋತ್ರದ ತ್ರಿಪದಿ, ಅಷ್ಟಾವರಣ ಸ್ತೋತ್ರದ ತ್ರಿಪದಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ವಚನ ಮತ್ತು ಸ್ವರ ವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಗಳಲ್ಲಿ ‘ಯೋಗಿನಾಥ’ ಎಂಬ ಅಂಕಿತವಿದೆ.ಅಣ್ಣ ಬಸವಣ್ಣನವರ ಬಗ್ಗೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆಗೆ ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆ ಅನುಸಾರ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.ಸಚಿವ ಶಿವಾನಂದ ಪಾಟೀಲರು ಪುರಸಭೆಯ ೨೦೨೩-೨೪ ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರೂ. ೩.೯೬ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ ರಸ್ತೆ, ಚರಂಡಿ ಕಾಮಗಾರಿ, ಪುರಸಭೆಯ ೨೦೨೩-೨೪ ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರೂ. ೭೦ ವೆಚ್ಚದಲ್ಲಿ ಕೈಗೊಂಡಿರುವ ಪಟ್ಟಣದ ಅರಳಿಕಟ್ಟಿಯಿಂದ ಡಾ.ಅಂಬೇಡ್ಕರ ವೃತ್ತದವರೆಗೂ ವಿದ್ಯುತ್ ಕಂಬ ಮತ್ತು ವಿದ್ಯುತ್ ದೀಪಾಲಂಕಾರ ಅಳವಡಿಸುವ ಕಾಮಗಾರಿ, ಪುರಸಭೆಯ ೨೦೨೩-೨೪ ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರೂ. ೫೦ ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಪಟ್ಟಣದ ನಂದಿ ತರಕಾರಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ, ಪುರಸಭೆಯ ೨೦೨೩-೨೪ ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರೂ. ೪೧…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಾಜಿ ಸಚಿವ ದಿ.ಬಿ.ಎಸ್.ಪಾಟೀಲ ಮನಗೂಳಿ ಅವರ ಪ್ರತಿಮೆ ಆವರಣದಲ್ಲಿ ಗುರುವಾರ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನದಂಗವಾಗಿ ಗುರುವಾರ ನುಡಿ ನಮನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಈ ನಾಡಿಗೆ ಭಕ್ತರಿಗೆ ತಮ್ಮದೇಯಾದಂತಹ ಕೊಡುಗೆಯನ್ನು ನೀಡಿರುವ ಸಿದ್ದೇಶ್ವರ ಪೂಜ್ಯರ ತತ್ವಾದರ್ಶಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕಿದೆ. ಅವರು ಹೇಳಿರುವ ಪ್ರವಚನಗಳನ್ನು ಪ್ರತಿಯೊಬ್ಬ ಮಕ್ಕಳಿಗೆ ಕೇಳಿಸುವಂತಹ ಕಾರ್ಯ ಪಾಲಕರು ಮಾಡಬೇಕು. ಇಂತಹ ಪರಮಪೂಜ್ಯರನ್ನು ಪಡೆದ ನಾವೆಲ್ಲರೂ ಧನ್ಯ ಎಂದರು.ಇಡೀ ಜಗತ್ತಿಗೆ ಸಮಾನತೆ ಸಂದೇಶ ನೀಡಿದ ವಿಶ್ವಗುರು ಬಸವೇಶ್ವರರರು ಜನಿಸಿದ ಬಸವನಬಾಗೇವಾಡಿ, ಪೂಜ್ಯ ಸಿದ್ದೇಶ್ವರರು ಜನಿಸಿದ ಸ್ಥಳ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮವಾಗಿದೆ. ಇಂತಹ ಮಹಾನ್ ಪುರುಷರು ಜನಿಸಿದ ಈ ನಾಡು ಪುಣ್ಯದ ಬೀಡಾಗಿದೆ. ಇವರು ನೀಡಿರುವ ಸಂದೇಶಗಳು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು.ಮುಖಂಡರಾದ ಅಪ್ಪುಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶರಣಯ್ಯ ನಂದಿಕೋಲಮಠ,ಮಲ್ಲು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಧ್ಯಾತ್ಮ ಲೋಕದ ಸಿರಿಯಾಗಿದ್ದಾರೆ. ಇವರು ನೀಡಿರುವ ಸಂದೇಶಗಳು ಎಂದಿಗೂ ಸ್ಮರಣೀಯವಾಗಿವೆ. ಇವುಗಳನ್ನು ನಾವೆಲ್ಲರೂ ಅಂತರಂಗದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ನಡೆಯೋಣವೆಂದು ರೋಣಿಹಾಳ ಗ್ರಾಮದ ಪ್ರಗತಿಪರ ರೈತ ಶ್ರೀಶೈಲ ಬಿರಾದಾರ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಶಿವಲಿಂಗೇಶ್ವರ ವಿರಕ್ತಮಠದ ಶರಣ ಬಳಗ, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹಯೋಗದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮದಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಂತರಂಗದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಜ್ಞಾನನಿಧಿಯಾಗಿದ್ದರು. ಅವರು ತಮ್ಮ ಪ್ರವಚನದಲ್ಲಿ ಜೀವನ ಮೌಲ್ಯ,ಸಾವಯವ ಕೃಷಿ, ಶರಣರ ಸಂದೇಶ ಸೇರಿದಂತೆ ತತ್ವಶಾಸದಲ್ಲಿರುವ ಸಾರವನ್ನು ನಮಗೆ ಉಣಬಡಿಸಿದ್ದಾರೆ. ೧೨ ನೇ ಶತಮಾನದಲ್ಲಿ ಶರಣರ ಬಸವ ಕಲ್ಯಾಣ ಕೈಲಾಸವಾಗಿತ್ತು. ಇಂದು ೨೧ ನೇ ಶತಮಾನದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಇದ್ದ ವಿಜಯಪುರದ ಜ್ಞಾನಯೋಗಾಶ್ರಮವು ಕೈಲಾಸವಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಪೂಜ್ಯರನ್ನು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕಳೆದ 20 ವರ್ಷದ ಹಿಂದೆ ಅಭಿವೃದ್ದಿಯಿಂದ ವಂಚಿತವಾಗಿದ್ದ ಬಸವನಬಾಗೇವಾಡಿ ಮತಕ್ಷೇತ್ರವನ್ನು ನಾನು 2004 ಕ್ಕೆಈ ಮತಕ್ಷೇತ್ರಕ್ಕೆ ಬಂದ ನಂತರ ಸರ್ಕಾರದಿಂದ ಕೋಟಿ ಕೋಟಿ ಅನುದಾನವನ್ನು ತರುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕ ಪ್ರಯೋಗಾಲಯ ಕಟ್ಟಡ ಉದ್ಘಾಟಿಸಿದ ನಂತರ ಪುರಸಭೆಯ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ರೂ. 17 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರ ನೀಡಿದ ಅನುದಾನವನ್ನು ಎಲ್ಲಿಯೂ ದುರುಪಯೋಗ ಮಾಡಿಕೊಳ್ಳದೇ ಸದುಪಯೋಗ ಮಾಡಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜಿಲ್ಲಾ ಆಸ್ಪತ್ರೆಯ ಒತ್ತಡವನ್ನು ತಪ್ಪಸಿದ್ದು ಶ್ಲಾಘನೀಯ. ತಾಲೂಕು ಆಸ್ಪತ್ರೆ ಕಳೆದ ಮೂರು ವರ್ಷದಿಂದ ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬ್ಯಾಂಕಿನ ಚುನಾವಣೆ ಪರ್ವ ಮುಕ್ತಾಯವಾಗಿದೆ. ನಾವು ಇಂದಿನಿಂದ ಮೊದಲಿಗಿಂತ ಹೆಚ್ಚು ಅನೋನ್ಯವಾಗಿರೋಣ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಖಾಸಗಿ ಪಕ್ಷನ್ ಹಾಲ್ ನಲ್ಲಿ ಕಾಮರಾಜ ಬಿರಾದಾರ ಸ್ನೇಹಿತರ ಬಳಗ ಮತ್ತು ಅಸ್ಕಿ ಫೌಂಡೇಶನ್ ವತಿಯಿಂದ ಪಟ್ಟಣದ ದಿ ಕೋ ಅಪ್ ಬ್ಯಾಂಕ್ ನ ನೂತನ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬ್ಯಾಂಕಿನ ಹಳೆಯ ನಿರ್ದೇಶಕರು ನೂತನ ನಿರ್ದೇಶಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಎಲ್ಲರನ್ನು ಸಹಮತದಿಂದ ಒಟ್ಟಾಗಿ ಕರೆದುಕೊಂಡು ಹೋಗುವ ಮೂಲಕ ಬ್ಯಾಂಕನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಭರವಸೆ ನಮಗಿದೆ ಎಂದರು.ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಈ ಬ್ಯಾಂಕು ಸಾಕಷ್ಟು ಹೆಸರುವಾಸಿಯಾಗಿದೆ. ಹಲವು ಹಿರಿಯರು ಕಟ್ಟಿ ಬೆಳೆಸಿದ ಈ ಬ್ಯಾಂಕಿಗೆ ರಾಜ್ಯದ ತುಂಬೆಲ್ಲ ಬ್ರಾಂಚುಗಳಾಗಿ ರೈತರಿಗೆ, ವ್ಯಾಪಾರಸ್ಥರಿಗೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದರು.ಜ್ಞಾನಯೋಗಿ ಸಿದ್ದೇಶ್ವರರ ಸ್ಮರಣ ದಿನದ ಹಿನ್ನೆಲೆ ಶ್ರೀ ಸಿದ್ದೇಶ್ವರರ ಸರಳ ಜೀವನದ ಕುರಿತು ಪ್ರೊ.ಪರಶುರಾಮ ಚೌಡಕೇರ ಮಾತನಾಡಿದರು. ಎಪಿಎಂಸಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಗ್ರಾಮೀಣ ಕ್ರೀಡೆ ಖೋಖೋ ಕ್ರೀಡೆಯ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ನಿಡಗುಂದಿ ತಾಲ್ಲೂಕಿನ ಬೇನಾಳದ ಆರು ಜನ ಬಾಲಕಿಯರು ಹಾಗೂ ಮಣಗೂರಿನ ಇಬ್ಬರು ಬಾಲಕರು ಆಯ್ಕೆಯಾಗಿದ್ದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದು ನಿಡಗುಂದಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಹೇಳಿದರು.ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ೧೪ ವಯೋಮಾನದೊಳಗಿನ ಬಾಲಕಿಯರ ಕೊಕ್ಕೊ ಸ್ಪರ್ಧೆಗೆ ಆಯ್ಕೆಯಾಗಿರುವ ರಾಜ್ಯದ ಕೊಕ್ಕೊ ಕ್ರೀಡಾಪಟುಗಳಿಗೆ ಐದು ದಿನದ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಶಿಬಿರದ ಐದು ದಿನಗಳ ಕಾಲ ಎಲ್ಲಾ ತರಬೇತುದಾರರು ಹಾಗೂ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಬೇನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ ಮಾಡಿದ್ದಾರೆ.ಕರ್ನಾಟಕ ಖೋಖೋ ಸಂಸ್ಥೆಯ ಆಯ್ಕೆ ಸಮಿತಿಯ ಸದಸ್ಯ ಬೆಳಗಾವಿಯ ಈರಣ್ಣ ಹಳಿಗೌಡರ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಶಿಬಿರದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ವಿಜಯಪುರ ಜಿಲ್ಲೆಯ ಆರು ಜನ, ಬೆಳಗಾವಿ ಜಿಲ್ಲೆಯ ಮೂವರು, ಮೈಸೂರಿನ…

Read More

ಹೈಕಮಾಂಡ್’ಗೆ ದೂರು ನೀಡಲ್ಲ | ನಮ್ಮದು ನಿಷ್ಠರ ಬಣ | ಯಾರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ | ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಠನೆ ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗಿಲ್ಲ, ಅವರಾಗಿಯೇ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕರೆದರೆ ಮಾತ್ರ ದೆಹಲಿಗೆ ಹೋಗುತ್ತೇವೆ. ಮಾತನಾಡುತ್ತೇವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ವತಃ ಕರೆದರೂ ಮಾತುಕತೆ ಸಾಧ್ಯವಿಲ್ಲ. ನಮ್ಮದು ನಿಷ್ಠರ ಬಣ. ವಿಜಯೇಂದ್ರ ಪಕ್ಷದ ಅಧ್ಯಕ್ಷ ಅಷ್ಟೇ, ಅವರ ಜೊತೆ ಗುರುತಿಸಿಕೊಂಡವರೂ ಹೋರಾಟಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಹೇಳಿದರು.ಬಿಜೆಪಿಯಿಂದ ನನ್ನನ್ನು ಏಕೆ ಉಚ್ಚಾಟನೆ ಮಾಡುತ್ತಾರೆ. ಉಚ್ಚಾಟನೆ ಮಾಡಲು ನಾನು ಯಾರ ಜತೆಯೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್‌ ಅಹಮದ್‌ ಖಾನ್‌ ಜೊತೆಗೂ ನನಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೂಪಾಯಿಗೆ ೮೦ ರೂಪಾಯಿ ನೀಡುವ ಕರಾರಿನ ಮೇರೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಓಸಿ ಜೂಜಾಟವಾಡುತ್ತಿದ್ದ ವ್ಯಕ್ತಿಯ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣವನ್ನು ದಾಖಲಿಸಿದ್ದಾರೆ.ತಾಲೂಕಿನ ಬಸರಕೋಡ ಗ್ರಾಮದ ಗುರಣ್ಣ ಸಂಗನಗೌಡ ಮಂಕಣಿ ಈತನು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ನಂದಿನಿ ಮಿಲ್ಕ ಪಾರ್ಲರ್ ಬಳಿ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿದ್ದು ಈತನಿಂದ ಕೆಲ ಹಣ, ಓಸಿ ಚೀಟಿ ಮತ್ತು ಬಾಲ್ ಪೆನ್ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Read More