ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬ್ಯಾಂಕಿನ ಚುನಾವಣೆ ಪರ್ವ ಮುಕ್ತಾಯವಾಗಿದೆ. ನಾವು ಇಂದಿನಿಂದ ಮೊದಲಿಗಿಂತ ಹೆಚ್ಚು ಅನೋನ್ಯವಾಗಿರೋಣ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಖಾಸಗಿ ಪಕ್ಷನ್ ಹಾಲ್ ನಲ್ಲಿ ಕಾಮರಾಜ ಬಿರಾದಾರ ಸ್ನೇಹಿತರ ಬಳಗ ಮತ್ತು ಅಸ್ಕಿ ಫೌಂಡೇಶನ್ ವತಿಯಿಂದ ಪಟ್ಟಣದ ದಿ ಕೋ ಅಪ್ ಬ್ಯಾಂಕ್ ನ ನೂತನ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ಯಾಂಕಿನ ಹಳೆಯ ನಿರ್ದೇಶಕರು ನೂತನ ನಿರ್ದೇಶಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಎಲ್ಲರನ್ನು ಸಹಮತದಿಂದ ಒಟ್ಟಾಗಿ ಕರೆದುಕೊಂಡು ಹೋಗುವ ಮೂಲಕ ಬ್ಯಾಂಕನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಭರವಸೆ ನಮಗಿದೆ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಈ ಬ್ಯಾಂಕು ಸಾಕಷ್ಟು ಹೆಸರುವಾಸಿಯಾಗಿದೆ. ಹಲವು ಹಿರಿಯರು ಕಟ್ಟಿ ಬೆಳೆಸಿದ ಈ ಬ್ಯಾಂಕಿಗೆ ರಾಜ್ಯದ ತುಂಬೆಲ್ಲ ಬ್ರಾಂಚುಗಳಾಗಿ ರೈತರಿಗೆ, ವ್ಯಾಪಾರಸ್ಥರಿಗೆ ಇನ್ನಷ್ಟು ಸೇವೆ ನೀಡುವಂತಾಗಲಿ ಎಂದರು.
ಜ್ಞಾನಯೋಗಿ ಸಿದ್ದೇಶ್ವರರ ಸ್ಮರಣ ದಿನದ ಹಿನ್ನೆಲೆ ಶ್ರೀ ಸಿದ್ದೇಶ್ವರರ ಸರಳ ಜೀವನದ ಕುರಿತು ಪ್ರೊ.ಪರಶುರಾಮ ಚೌಡಕೇರ ಮಾತನಾಡಿದರು. ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸ್ನೇಹಿತರ ಬಳಗದ ಹುಸೇನ ಮುಲ್ಲಾ, ಸದಾಶಿವ ಮಠ, ಮುತ್ತಣ್ಣ ರಾಯಗೊಂಡ, ಅಶೋಕ ಚಟ್ಟೇರ, ಪಿಂಟು ಸಾಲಿಮನಿ, ಜಾವೇದ ಇನಾಮದಾರ, ಭಾಸ್ಕರ ಟಿ, ಹುಲಗೇಶ ಈಳಗೇರ, ಹರೀಶ ಬೆವೂರ, ಅಮರೇಶ ಗೂಳಿ, ಸಂಗಣ್ಣ ಮೇಲಿನಮನಿ, ರವಿ ಅಮರಣ್ಣನವರ, ಹುಸೇನ ಮುಲ್ಲಾ ಕಾಳಗಿ, ಸೋಮು ಸಜ್ಜನ, ಗೋಪಿ ಜಾನ್ವೇಕರ, ಬಬಲು ಹುಣಚಗಿ, ಸಂಗನಗೌಡ ಪಾಟೀಲ, ಬುಡ್ಡಾ ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು.

