Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಓಸಿ, ಮಟಗಾ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ತಾಲೂಕಿನ ನಾಲವಾಡ ಪಟ್ಟಣದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಂತು ರೂಪಾಯಿಗೆ ೮೦ ರೂ ನೀಡುವ ಕರಾರಿನ ಮೇಲೆ ಓಸಿ ಮಟಗಾ ಜೂಜಾಟದಲ್ಲಿ ತೊಡಗಿದ್ದ ಹಣಮಂತ ಬೇವಿನಕಟ್ಟಿ ಈತನ ಮೇಲೆ ಇಲ್ಲಿನ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ನೀಡಿದ ದೂರಿನ ಆಧಾರದ ಮೇಲೆ ಮತ್ತು ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಂತು ರೂಪಾಯಿಗೆ ೮೦ ರೂ ನೀಡುವ ಕರಾರಿನ ಮೇಲೆ ಓಸಿ ಮಟಗಾ ಜೂಜಾಟದಲ್ಲಿ ತೊಡಗಿದ್ದ ಶಕೀಲ ಸುಗಂಧಿ ಈತನ ಮೇಲೆ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಗಳು ದಾಖಲಾಗಿದೆ. ಆರೋಪಿ ಸ್ಥಾನದಲ್ಲಿರುವ ಹಣಮಂತ ಹಾಗೂ ಶಕೀಲ ಇವರಿಬ್ಬರಿಂದ ಓಸಿ ಚೀಟಿ, ಬಾಲ್ ಪೆನ್ನು ಮತ್ತು ಕೆಲ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರಳ ಸಜ್ಜನಿಕೆಯ ಮತ್ತು ಸದಾ ಸರ್ಕಾರಿ ನೌಕರರ ಹಿತಬಯಸುವ ಶಿಕ್ಷಕರಾದ ಶ್ರೀ. ಸುರೇಶ ಶೆಡಸ್ಯಾಳ. ಅವರು ಸತತವಾಗಿ ನಾಲ್ಕು ಅವಧಿಗೆ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಮರ್ಥ ಸಮಾಜ ಸೇವಕರೆಂಬುದನ್ನು ಸಾಬೀತು ಪಡಿಸಿ ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿ ನೌಕರರ ಸಂಘದ ಇತಿಹಾಸದ ಮೈಲುಗಲ್ಲಾಗಿದ್ದಾರೆ.ಈ ಸಂಭ್ರಮದಲ್ಲಿ, ಭೂ ಮಾಪನ ಇಲಾಖೆಯಿಂದ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶಿವಾನಂದ ಮಗ್ಗದ ಮತ್ತು ಭೂ ಮಾಪನ ಇಲಾಖೆಯ ಲಿಪಿಕ ವೃಂದದ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ. ಸತೀಶ ಹಿಮಕರವರು, ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಿದ ತೊಗರಿ ಬೀಜ ಕಳಪೆಯಾಗಿದ್ದು, ಇದರಿಂದ ರೈತರಿಗೆ ಅಪಾರ ಹಾನಿಯಾಗಿದೆ. ಕೂಡಲೇ ಇಲಾಖೆಯಿಂದ ಪರಿಹಾರ ಒದಗಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್. ಪಾಟೀಲ ಅವರಿಗೆ ತೊಗರಿ ಪೆಂಡಿಯನ್ನು ಪ್ರದರ್ಶಿಸುವ ಮೂಲಕ ಆಗ್ರಹಿಸಿದರು. ಬೆಂಗಳೂರಿನ ಕೃಷಿ ಆಯುಕ್ತಾಲಯ ಕಚೇರಿಗೆ ಬುಧವಾರ ತೆರಳಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷಿ ಇಲಾಖೆ ಮೂಲಕ ವಿತರಿಸಿದ ಜಿಆರ್ ಜಿ ೧೫೨ ಹಾಗೂ ಜಿಆರ್‌ಜಿ ೮೧೧ ತೊಗರಿ ಬೀಜ ಕಳೆಯಾಗಿರುವುದು ಕಂಡು ಬಂದಿದೆ. ಈ ಬೀಜ ಬಿತ್ತಿದ ಬೆಳೆಯಲ್ಲಿ ಕಾಯಿಯೇ ಇಲ್ಲ. ಹೀಗಾಗಿ ರೈತರು ಹಾನಿ ಅನುಭವಿಸುವಂತಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ತೊಗರಿ ಬೀಜದ ಬಗ್ಗೆ ಅಧಿಕಾರಿಗಳನ್ನು ಯಾವುದೇ ಮಾಹಿತಿ ನೀಡಿಲ್ಲ. ಬಿತ್ತನೆ ಮಾಡಬೇಕಾದರೆ ಎಷ್ಟೆಷ್ಟು ಅಂತರದಲ್ಲಿ ಬಿತ್ತನೆ ಮಾಡಬೇಕೆಂಬುದು ಮೊದಲೇ ಬೀಜದ ಕಂಪೆನಿಯವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಇದೇ ನವೆಂಬರ್ ೨೭ ರಿಂದ ೨೯ ರವರೆಗೆ ಮೂರು ದಿನಗಳ ಕಾಲ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಹಮ್ಮಿಕೊಳ್ಳಲಾಗಿದ್ದು ವಿವಿಯ ಆವರಣದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ವಿಜೃಂಭಣೆಯಿಂದ ನಡೆಯುತ್ತಿವೆ. ವಿಶ್ವವಿದ್ಯಾಲಯದ ಆವರಣವು ಕಲಾ, ಸಂಸ್ಕೃತಿ, ಮತ್ತು ಸೃಜನಾತ್ಮಕತೆಯ ಬಣ್ಣದಿಂದ ತುಂಬಿದ್ದು, ಒಂದು ವಿಶಿಷ್ಟವಾದ ಸಾಂಸ್ಕೃತಿಕ ಹಬ್ಬದ ಕಲರವ ವಾತಾವರಣ ನಿರ್ಮಾಣಗೊಂಡಿದೆ.ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದು, ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ಸಾಹದಿಂದ ಅತ್ತಿಂದತ್ತ-ಇತ್ತಿಂದತ್ತ ಚುರುಕಾಗಿ ಓಡಾಡುತ್ತಿದ್ದಾರೆ. ನಾಟಕ, ಏಕಪಾತ್ರಾಭಿನಯ, ಮೂಕಾಭಿನಯ, ಸಂಗೀತ, ನೃತ್ಯ, ಚಿತ್ರಕಲೆ, ಜನಪದ ಕಲೆ, ಸಾಹಿತ್ಯ, ಚರ್ಚೆ, ಭಾಷಣ, ಛಾಯಾಗ್ರಹಣ, ಜನಪದ ನೃತ್ಯ ಮತ್ತು ಕ್ವಿಜ್ ಮುಂತಾದ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದೆ.ಮೂರು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿನಿಯರಿಗೆ ಕೇವಲ ಸ್ಪರ್ಧೆಯ ವೇದಿಕೆಯಲ್ಲ, ಬದಲಿಗೆ ತಮ್ಮ ಕಲಾತ್ಮಕ ಕೌಶಲ್ಯ, ಮನೋಭಾವನೆ ಮತ್ತು ಸೃಜನಶೀಲತೆಯನ್ನು ಹೊರತಂದಿರುವ ಒಂದು ಸಾಂಸ್ಕೃತಿಕ ಸಂಭ್ರಮವಾಗಿದೆ.ನಾಟಕ ವಿಭಾಗದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಅತ್ಯಂತ ಉತ್ಸಾಹದಿಂದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ೨೦೨೫-೨೬ನೇ ಶೈಕ್ಷಣಿಕ ಸಾಲಿಗಾಗಿ ಸಂಯೋಜನಾ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. ಇದೇ ನವೆಂಬರ್ ೩೦ರ ಸಂಜೆ ೫ ಗಂಟೆಯ ಒಳಗಾಗಿ ದಂಡ ಸಹಿತ ಶುಲ್ಕದೊಂದಿಗೆ ಸಂಯೋಜನಾ ಅರ್ಜಿಯನ್ನು ಆನ್‌ಲೈನ್ ಮುಖಾಂತರ ಸಲ್ಲಿಸಬಹುದು.೨೦೨೫-೨೬ನೇ ಶೈಕ್ಷಣಿಕ ಸಾಲಿಗಾಗಿ ಸಂಯೋಜಿತ ಮಹಿಳಾ ಮಹಾವಿದ್ಯಾಲಯಗಳಿಂದ ಸ್ನಾತಕ/ ಸ್ನಾತಕೋತ್ತರ ಕೋರ್ಸುಗಳಿಗಾಗಿ, ವಿವಿಧ ಬಗೆಯ ಸಂಯೋಜನೆಗಾಗಿ ಹಾಗೂ ನೋಂದಾಯಿತ ಸಂಘ-ಸಂಸ್ಥೆಗಳು/ ಸಾರ್ವಜನಿಕ ಟ್ರಸ್ಟ್ಗಳಿಂದ ಹೊಸ ಮಹಿಳಾ ಮಹಾವಿದ್ಯಾಲಯ ಪ್ರಾರಂಭಕ್ಕಾಗಿ ಸಂಯೋಜನಾ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈಗ ಆ ದಿನಾಂಕಗಳನ್ನು ಮರುನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ತಿತಿತಿ.ಞsತಿu.ಚಿಛಿ.iಟಿ ಸಂಪರ್ಕಿಸಬಹುದು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ದಿ. ಎಂ.ಸಿ.ಮನಗೂಳಿ ದತ್ತಿ ಪ್ರಶಸ್ತಿಗೆ ಸಾಧನಾ ಪ್ರಕಾಶನ ಆಯ್ಕೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ೨೦೨೪ನೇ ಸಾಲಿನ ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ದಿ. ಎಂ.ಸಿ.ಮನಗೂಳಿ ದತ್ತಿ ಪ್ರಶಸ್ತಿಯನ್ನು ಬೆಂಗಳೂರಿನ ಸಾಧನಾ ಪ್ರಕಾಶನಕ್ಕೆ, ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರಿಗೆ ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ ಹಾಗೂ ಉತ್ತಮ ಮುಖಪುಟ ಕಲಾವಿದರಿಗೆ ನೀಡುವ ಬೆರಗು ಮುಖಪುಟ ವಿನ್ಯಾಸ ಪ್ರಶಸ್ತಿಗೆ ಗದಗದ ವಾಸುದೇವ ರಾವುತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದ್ದಾರೆ.ಅತ್ಯುತ್ತಮ ಪ್ರಕಾಶನಕ್ಕೆ ನೀಡುವ ದಿ. ಎಂ.ಸಿ.ಮನಗೂಳಿ ದತ್ತಿ ಪ್ರಶಸ್ತಿಯು ೨೫ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ, ಶಾಸಕ ಅಶೋಕ ಮನಗೂಳಿ ಅವರು ತಮ್ಮ ತಂದೆಯವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿಸಿದ್ದು ಮೊದಲ ವರ್ಷದ ಈ ಪ್ರಶಸ್ತಿಗೆ ಬೆಂಗಳೂರಿನ ಸಾಧನಾ ಪ್ರಕಾಶನವು ಕಳೆದ ನಾಲ್ಕು ದಶಕಗಳಿಂದ ನಿರಂತರ ಪುಸ್ತಕೊದ್ಯಮದಲ್ಲಿ ತೊಡಗಿಕೊಂಡಿದೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಹಕ್ಕುಗಳು ಹಾಗೂ ಕಾನೂನುಗಳನ್ನ ವಿವರಿಸುವ ಸಂವಿಧಾನವನ್ನು ತಯಾರಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಭಾರತ ಸಂವಿಧಾನವು ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ್ ನಲವಡೆ ಅವರು ಹೇಳಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ ೨೬ ರಂದು ಜಿಲ್ಲಾ ವಕೀಲರ ಸಮುದಾಯ ಭವನದಲ್ಲಿ ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕ ನಂತರ ದೇಶದ ಇತಿಹಾಸದಲ್ಲಿ ಘಟಿಸಿದ ಮಹತ್ವದ ಹಾಗೂ ಅದ್ಭುತ ಕ್ಷಣ ಸಂವಿಧಾನ ಸಮರ್ಪಣ ದಿನ. ಡಾ ಬಿ.ಆರ್ ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಅವಿರತ ಪ್ರಯತ್ನಗಳನ್ನು ಈ ದಿನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬುಧವಾರ ನಡೆಯಿತು.ಮಹಾವಿದ್ಯಾಲಯದ ವತಿಯಿಂದ ಸಂಘಟಿಸಲಾಗಿರುವ ಈ ಪಂದ್ಯಾವಳಿಯನ್ನು ಬಿ.ಎಲ್.ಡಿ.ಇ ಸಂಸ್ಥೆಯ ಹಿರಿಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೀಕ್ಷಕ ಮತ್ತು ದಾವಣಗೆರೆ ಅರ್ಜುನ ಜೆ. ಜೆ. ಎಂ ನರ್ಸಿಂಗ ಕಾಲೇಜಿನ ಡಾ. ಸುರೇಶ. ಎಸ್. ಎಂ., ವಿಜಯಪುರ ಬಿ.ಎನ್.ಎx ಆಯುರ್ವೇದ ಕಾಲೇಜಿನ ನಜೀರ ಮಮದಾಪುರ, ಎವಿಎಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಈ ಸಂದರ್ಭದಲ್ಲಿ ಡಾ. ಗಂಗಾಧರ ತಿಮ್ಮಾಪುರ, ಡಾ. ಜೋಸ್ನಾ ಬರಗಿ, ಹನುಮಂತ ಪವಾರ ಉಪಸ್ಥಿತರಿದ್ದರು.ಈ ಪಂದ್ಯಾವಳಿಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ವೈದ್ಯಕೀಯ, ದಂತ ಆಯುರ್ವೇದ, ಹೊಮಿಯೋಪತಿ, ಯುನಾನಿ, ಫಾರ್ಮಸಿ, ನರ್ಸಿಂಗ್ ಮುಂತಾದ ಆರೋಗ್ಯ ವಿಜ್ಞಾನ ವಿದ್ಯಾಲಯಗಳ ರಾಜ್ಯಾದ್ಯಂತ ಪುರುಷರ ಎಂಟು ಮತ್ತು ಮಹಿಳೆಯರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಭಾಗದಲ್ಲಿ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಕೆಲಸಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ಸಾರವಾಡ ಮತ್ತು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮಗಳಲ್ಲಿ ತಲಾ ರೂ. 100 ಲಕ್ಷ ವೆಚ್ಚದಲ್ಲಿ ಪಿ.ಆರ್.ಇ.ಡಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಸಾರವಾಡ- ದದಾಮಟ್ಟಿವರೆಗಿನ 6 ಕಿ. ಮೀ. ಮತ್ತು ಹೊನಗನಗಳ್ಳಿ- ದದಾಮಟ್ಟಿ ವರೆಗೆ 4 ಕಿ. ಮೀ. ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ದಿ. ಬಿ. ಎಂ. ಪಾಟೀಲ ಅವರ ಕಾಲದಿಂದಲೂ ನಾವು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಶಾಲೆಗಳಲ್ಲಿ ಡಿಜಿಟಲ್ ಬೋರ್ಡ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡುತ್ತಿದ್ದೇವೆ. ಇದರ ಮುಂದುವರೆದ ಭಾಗವಾಗಿ ಸಚಿವ ಎಂ. ಬಿ. ಪಾಟೀಲ ಅವರು ಈ ಬಾರಿ ಶಿಕ್ಷಣ ಕ್ರಾಂತಿಯ ಕನಸು ಹೊಂದಿದ್ದಾರೆ. ಹೀಗಾಗಿ ಮತಕ್ಷೇತ್ರದಲ್ಲಿನ ಎಲ್ಲ ಸರಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಮೂಲಭೂತ ಸೌಕರ್ಯಗಳ ಕುರಿತು…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಹಾಸನ ಜಿಲ್ಲೆಯ ಉದಯೋನ್ಮುಖ ಪ್ರತಿಭೆ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ದೇವು ಅವರು ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ಕೊಡುಮಾಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.ಬೆಂಗಳೂರಿನ ಕಲಾಗ್ರಾಮ ಸಂಸ್ಕೃತಿಕ ಭವನದಲ್ಲಿ ನವಂಬರ್ 29ರಂದು ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
