ಆಲಮೇಲದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ಹಿಂದುಗಳ ಪವಿತ್ರ ದೇವತೆ ಎಂದು ಪೂಜೆ ಮಾಡಿತ್ತಿರುವ ಗೋ ಮಾತೆಯ ಕೆಚ್ಚಲವನ್ನು ಕತ್ತರಿಸುವ ಜಿಹಾದಿಗಳ ಅಟ್ಟಹಾಸವನ್ನು ಬಲವಾಗಿ ಖಂಡಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಮಂತ ದುದ್ದಗಿ ಹೇಳಿದರು
ಆಲಮೇಲದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಾಮಧೇನು ಕೆಚ್ಚಲು ಕೊಯ್ದ ನೀಚನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬೃಹತ್ ಪ್ರತಿಭಟನೆ ಮಾಡಲಾಯಿತು.
ವೀರಭದ್ರ ಚೌಕದಿಂದ ಬಸವೇಶ್ವರ ಸರ್ಕಲ್ ದವರಗೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಹಿಂದುಗಳ ಸಂಕ್ರಾಂತಿಯ ಹಬ್ಬದ ಸಮಯದಲ್ಲಿ ಆರಾಧನೆ ಮಾಡುತ್ತಿರುವ ಗೋ ಕೆಚ್ಚಲನ್ನು ಕತ್ತರಿಸಿದ ವ್ಯಕ್ತಿಗಳಿಗೆ ಇಲ್ಲಿಯವರೆಗೆ ಬಂಧಿಸಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲದ ಸರ್ಕಾರ ಜಿಯಾದಿಗಳಿಗೆ ರಕ್ಷಣೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆ ಬರಬೇಕೆಂದು ಹೇಳಿದರು
ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಹಣಮಂತ ಸಿಂಗ್ ರಜಪೂತ ಮಾತನಾಡಿ, ಚಾಮರಾಜ ಪೇಟೆಯಲ್ಲಿ ನಡೆದ ಘಟನೆ ನಮಗೆ ನೋವು ಉಂಟುಮಾಡಿದೆ. ಇಂತಹ ಜಿಹಾದಿಗಳಿಗೆ ಜಿವಾವಧಿ ಶಿಕ್ಷೆ ವಿಧಿಸಿ ಗೋವುಗಳ ರಕ್ಷಣಗೆ ಸರಕಾರ ಬದ್ದವಾಗಬೇಕು ಎಂದು ಹೇಳಿದರು
ಮುಖಂಡ ಸಂಗಮೇಶ್ ಗುಂಡದ ಮಾತನಾಡಿದರು.
ಮುಖಂಡರಾದ ನಾಗರಾಜ್ ಸುಲ್ತಾನ್ ಪೂರ ಸುನಿಲ್, ತಲ್ಲೂರು ಶಿವಾನಂದ ರಜಪೂತ್ ಅಜಯ್ ರಜಪೂತ್ ಅಭಯ ಅಲೋನಿ ಸಾಯಿ ಕುಮಾರ್ ಕಟಕಟೆ ರತನ್ ಒಣಕುದರಿ ನಾಗರಾಜ್ ಆಲೂರು ಬಂಡು ಸಾರಂಗಮಠ ಅನೇಕ ಕಾರ್ಯಕರ್ತರು ಇದ್ದರು.

