ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಹಸೇನ್ ನಿಂಗರಾಜ ಭಜಂತ್ರಿ (೧೩ ತಿಂಗಳು) ಶವ ಬುಧವಾರ ಬೆಳಿಗ್ಗೆ ಘಟನೆ ನಡೆದ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.
ಒಟ್ಟಾರೇ ಈ ಘಟನೆಯಲ್ಲಿ ನಾಲ್ವರು ಮಕ್ಕಳು ದುರಂತ ಅಂತ್ಯ ಕಂಡಂತಾಗಿದೆ. ಜ.೧೩ ಸೋಮವಾರ ಇಬ್ಬರ ಶವ, ಮಂಗಳವಾರ ಒಬ್ಬನ ಶವ ಪತ್ತೆಯಾಗಿತ್ತು.
ಅಗ್ನಿಶಾಮಕ ದಳದ ಭೀಮಾಶಂಕರ ಹಾಗೂ ಪಿ.ಟಿ.ಜಾಲಗೇರಿ ನೇತೃತ್ವದಲ್ಲಿ ನಡೆದ ಶೋಧ ಕಾರ್ಯದಲ್ಲಿ ನಾಲ್ವರ ಶವವೂ ಪತ್ತೆಯಾದಂತಾಗಿದೆ.
ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮೂವರ ಹಾಗೂ ಬುಧವಾರ ಮತ್ತೊಬ್ಬ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.
