Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬ್ಯಾಂಕಿನ ಗ್ರಾಹಕರು ಮತ್ತು ಸಣ್ಣ ಸಣ್ಣ ವ್ಯಾಪಾರಿಗಳು ತಾವು ಅಲ್ಲಿಯೇ ಕುಳಿತುಕೊಂಡು ಕ್ಯೂಆರ್ ಕೋಡ್ ಮೂಲಕ ತಮ್ಮ ಖಾತೆಗೆ ಹಣವನ್ನು ಜಮಾ ಮಾಡಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ಹಮ್ಮಿಕೊಂಡ ಬ್ಯಾಂಕಿನ ಸಣ್ಣ ಸಣ್ಣ ವ್ಯಾಪಾರಸ್ಥ ಗ್ರಾಹಕರಿಗೆ ಕ್ಯೂಆರ್ ಕೋಡ್ ವಿತರಿಸಿ ಮಾತನಾಡಿದ ಅವರು, ಉತ್ತಮ ಗ್ರಾಹಕ ಸೇವೆಯನ್ನು ವಿಸ್ತರಿಸಲು ಮತ್ತು ಹೆಚ್ಚಿನ ಮಟ್ಟದ ಗ್ರಾಹಕರ ತೃಪ್ತಿಯನ್ನು ಸಾಧಿಸಲು ನಾವು ಉನ್ನತ ಗುಣಮಟ್ಟದ ಬ್ಯಾಂಕಿಂಗ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಸಾಲದ ಯೋಜನೆ, ಠೇವಣಿ ಸೇರಿದಂತೆ ಅನೇಕ ಬ್ಯಾಂಕಿನ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬ್ಯಾಂಕಿನ ಗ್ರಾಹಕರು ಬ್ಯಾಂಕಿನ ಅಭಿವೃದ್ಧಿಗಾಗಿ ಸದಾ ನಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.ಈ ವೇಳೆ ಸಹಕಾರಿ ಅಭಿವೃದ್ಧಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಧಿಕಾರ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ. ಬಟ್ಟೆ ಮುಳ್ಳಿನ ಮೇಲೆ ಬಿದ್ದರು ಹರಿಯುತ್ತದೆ ಬಟ್ಟೆಯ ಮೇಲೆ ಮುಳ್ಳು ಬಿದ್ದರು ಕೂಡಾ ಹರಿಯುತ್ತದೆ. ಅದಕ್ಕೆ ಅಧಿಕಾರವಿದ್ದಾಗ ಪರೋಪಕಾರಿ ಕಾರ್ಯ ಮಾಡಿದಾಗ ಮಾತ್ರ ಹುದ್ದೆ ಅಲಂಕರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ಬ.ಬಾಗೇವಾಡಿಯ ಪಿಕಾರ್ಡ ಬ್ಯಾಂಕಿನ್ ಉಪಾದ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರಣ ನಿಮ್ಮ ಆಯ್ಕೆಗೆ ಸಹಕರಿಸಿದ ಶಾಸಕರಿಗೆ ಯಾವುದೇ ರೀತಿಯ ಚ್ಯೂತಿ ಬರದ ಹಾಗೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸಿಂದಗಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕ, ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ ಬಹುದಿನಗಳಿಂದ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಹಿನ್ನಲೆಯಲ್ಲಿ ಇಂದು ಪಿಕಾರ್ಡ ಬ್ಯಾಂಕಿನ್ ಉಪಾದ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಬೈರೊಡಗಿಯ ಸಾಹೇಬಗೌಡ ಉತ್ನಾಳ ಅವರಿಗೆ ಇನ್ನೂ ಹೆಚ್ಚಿನ ಹುದ್ದೆಗಳು ಲಭಿಸಲಿ ಹಾರೈಸಿದರು.ಈ ವೇಳೆ ಸನ್ಮಾನ ಸ್ವೀಕರಿಸಿದ ಪಿಕಾರ್ಡ ಬ್ಯಾಂಕಿನ್ ನೂತನ ಉಪಾದ್ಯಕ್ಷ ಸಾಹೇಬಗೌಡ ಉತ್ನಾಳ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಡೋಹರ, ಸಮಗಾರ, ಮಚಿಗಾರ ಸಮುದಾಯ ಸಾಕಷ್ಟು ವರ್ಷಗಳಿಂದ ಚರ್ಮವನ್ನು ಹದ ಮಾಡುವ ಚರ್ಮದಿಂದ ತಯಾರಾಗುವ ಉತ್ಪನ್ನಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಡೋಹರ ಸಮಾಜವನ್ನು ಅಲೇಮಾರಿ ಗುಂಪಿಗೆ ಸೇರಿಸಿ ಈ ಸಮುದಾಯಕ್ಕೆ ಅನ್ಯಾಯವೆಸಗಲಾಗಿದೆ. ಹಾಗಾಗಿ ಮತ್ತೇ ಈ ಸಮುದಾಯವನ್ನು ಚರ್ಮಕಾರರ ಗುಂಪಿಗೆ ಸೇರಿಸಬೇಕೆಂದು ವೀರಶೈವ ಡೋಹರ ಕಕ್ಕಯ್ಯ ಸಮಾಜದ ಗೌರವಾಧ್ಯಕ್ಷ ಕಿರಣ ಪರಶುರಾಮ ಕಟಕೆ ಹೇಳಿದರು.ಸಿಂದಗಿಯ ಡೋಹರ, ಸಮಗಾರ, ಮಚಿಗಾರ ಸಮಾಜದ ಮುಖಂಡರಿಂದ ತಹಶೀಲ್ದಾರರ ಅವರ ಮೂಲಕ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್, ಬೆಂಗಳೂರಿನ ಏಕ ಸದಸ್ಯ ವಿಚಾರಣಾ ಆಯೋಗ ಇವರಿಗೆ ಡೋಹರ ಸಮಾಜವನ್ನು ಅಲೇಮಾರಿ ಗುಂಪಿಗೆ ಸೇರಿಸಿ ಈ ಸಮುದಾಯಕ್ಕೆ ಅನ್ಯಾಯವೆಸಗಲಾಗಿದ್ದು, ಈ ಜಾತಿಯನ್ನು ಚರ್ಮಕಾರರ ಗುಂಪಿಗೆ ಸೇರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಡೋಹರ, ಮಚಿಗಾರ, ಸಮಗಾರ ಎಂಬ ೩ಹೆಸರುಗಳಿಂದ ಕರೆಯಲ್ಪಡುವ ತ್ರಿಮತಸ್ಥ ಚರ್ಮಕಾರ ವ್ಯಾಪ್ತಿಯಲ್ಲಿ ಬರುವ ೧೮ಜಾತಿಗಳ ಗುಂಪು ಮಾಡಬೇಕು. ಮಾದಿಗ ಸಮಾಜದಿಂದ ಬೇರ್ಪಡಿಸುವ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಒಳ ಮೀಸಲಾತಿಗೆ ಅನುಗುಣವಾಗಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸರ್ಕಾರದಿಂದ ನೀಡುತ್ತಿರುವ ಪಡಿತರ ಆಹಾರದಲ್ಲಿ ನುಸಿ ಹುಳುಗಳು, ಗೊಂಡೆಗಳು ಬಂದಿದ್ದು ಫಲಾನುಭವಿಗಳು ಸರಕಾರದ ಹಾಗೂ ಅಧಿಕಾರಿಗಳ ವಿರುಧ್ಧ ಹರಿಹಾಯುತ್ತಿದ್ದಾರೆ.ಕಳೆದ ಎರಡು ತಿಂಗಳುಗಳಿಂದ ಕಳಪೆ ಆಹಾರ ಪದಾರ್ಥಗಳು ಸರಬರಾಜು ಆಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಉತ್ತರ ಕರ್ನಾಟಕದಲ್ಲಿ ಬೇಡಿಕೆ ಇರುವ ಜೋಳವನ್ನು ಪಡಿತರದಾರರಿಗೆ ನೀಡಲು ಸರ್ಕಾರ ತೀರ್ಮಾನಿಸಿ ಜೋಳವನ್ನು ನೀಡುತ್ತಿತ್ತು, ಆದರೆ ಕಳೆದ ಎರಡು ಮೂರು ತಿಂಗಳುಗಳಿಂದ ಜೋಳದಲ್ಲಿ ಗೊಂಡೆಗಳು, ನುಸಿ ಹುಳುಗಳು, ಚಿಕ್ಕ ಚಿಕ್ಕ ಕಲ್ಲುಗಳು ಸಹ ಬರುತ್ತಿವೆ ಎಂಬ ಆರೋಪವಿದೆ.ಶುಕ್ರವಾರ ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘದ ಸಭಾಂಗಣದಲ್ಲಿ ಪಡಿತರ ವಿತರಿಸಲಾಗುತ್ತಿತ್ತು, ಜೋಳದಲ್ಲಿ ನುಸಿ ಹುಳುಗಳು ಗೊಂಡೆಗಳು ಬಂದಿದ್ದು, ಹಲವು ಪಡಿತರದಾರರು ಈ ಕುರಿತು ಅಂಗಡಿಯವರಿಗೆ ಪ್ರಶ್ನಿಸಿದ್ದಾರೆ, ನಮಗೆ ಏನು ಬರುತ್ತದೆ ಅದನ್ನೇ ನಾವು ಕೊಡುತ್ತಿದ್ದೇವೆ ಎಂದು ಪಡಿತರ ಹಂಚುವ ಸಿಬ್ಬಂದಿ ತಿಳಿಸಿದಾಗ, ಅಲ್ಲಿ ಪಡಿತರದಾರರು ತಹಸೀಲ್ದಾರ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.ಮಾಹಿತಿ ತಿಳಿದ ತಹಸಿಲ್ದಾರ್ ಬಿ.ಎಸ್.ಕಡಕಭಾವಿ ಆಹಾರ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಕೂಡಲೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಾಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು ನಾಲ್ಕು ವರ್ಷಗಳ ಸೇವೆಯ ನಂತರ ಜನೆವರಿ ೨೪ರಂದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶಾಂತಾದೇವಿ ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ಥಾವರಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.ಅಧಿಕಾರ ಹಸ್ತಾಂತರ: ರಾಜ್ಯಪಾಲರ ಆದೇಶದಂತೆ ಪ್ರೊ.ಬಿ.ಕೆ.ತುಳಸಿಮಾಲ ಅವರು ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ. ಅವರಿಗೆ ಇಂದು ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ನಾಲ್ಕು ವರ್ಷಗಳ ಸೇವೆಯಿಂದ ನಿವೃತ್ತರಾದ ಪ್ರೊ.ಬಿ.ಕೆ.ತುಳಸಿಮಾಲ ಅವರನ್ನು ವಿಶ್ವವಿದ್ಯಾನಿಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರ್, ವಿವಿಧ ವಿಭಾಗಗಳ ಮುಖ್ಯಸ್ಥರು/ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಪ್ರೈವೆಟ್ ಲಿ. ತನ್ನ ಸಿ.ಎಸ್.ಆರ್. 5ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದು, ನಾಳೆ ದಿ.25 ಶನಿವಾರ ಸಚಿವ ಎಂ.ಬಿ.ಪಾಟೀಲ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಮಮದಾಪುರ ಗ್ರಾಮದಲ್ಲಿ ರೂ. 3.5 ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಕಟ್ಟಡವು ಒಟ್ಟು 12 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ 8 ತರಗತಿ ಕೊಠಡಿಗಳು, ಸಿಬ್ಬಂದಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಪ್ರಾಚಾರ್ಯರ ಮತ್ತು ಶಿಕ್ಷಕರ ಕೋಣೆಗಳನ್ನು ಹೊಂದಿವೆ ಹಾಗೂ ಕಣಮುಚನಾಳ ಗ್ರಾಮದಲ್ಲಿ ರೂ. 1.5 ಕೋಟಿ ಅನುದಾನದಲ್ಲಿ ನಿರ್ಮಾಣವಾಗುವ ಸರಕಾರಿ ಪ್ರೌಢ ಶಾಲೆ ನೂತನ ಕಟ್ಟಡವು ಎರಡು ತರಗತಿ ಕೋಣೆಗಳು, ಸಿಬ್ಬಂದಿ ಕೋಣೆ, ಊಟದ ಕೊಠಡಿ, ಅಡುಗೆ ಕೋಣೆ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡಿವೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇತ್ತೀಚೆಗೆ ನಿವೃತ್ತಿಯಾಗಿ ಸಂತಸದ ನಿವೃತ್ತಿ ಜೀವನವನ್ನು ಕಳೆಯುತ್ತಿರುವ ಚಿಕ್ಕಮ್ಮನಂತಿರುವ ಹಿರಿಯ ಸ್ನೇಹಿತರಿಗೆ ಕರೆ ಮಾಡಿ ಹೇಗಿದೆ ನಿವೃತ್ತಿಯ ಜೀವನ? ಎಂದು ಕೇಳಿದೆ.ಇದುವರೆಗೂ ತಂದೆ ತಾಯಿಗಾಗಿ, ಒಡಹುಟ್ಟಿದವರಿಗಾಗಿ, ಗಂಡನಿಗಾಗಿ,ಮಕ್ಕಳಿಗಾಗಿ ಮತ್ತು ಸ್ನೇಹಿತರಿಗಾಗಿ ನನ್ನ ಬದುಕನ್ನು ಮುಡುಪಾಗಿಟ್ಟ ನಾನು ಪ್ರಯತ್ನಪೂರ್ವಕವಾಗಿ ನನ್ನನ್ನು ಪ್ರೀತಿಸಲು ಆರಂಭಿಸಿರುವೆ. ಕುಟುಂಬದ ಸದಸ್ಯರೆಲ್ಲರ ಬೇಕು ಬೇಡಗಳ ಹೊರೆಯನ್ನು ನನ್ನ ಹೆಗಲ ಮೇಲೆ ಹೊರಲುನಾನೇನು ಗೋವರ್ಧನಧಾರಿಯೇ? ಎಂಬ ಅರಿವು ನನಗೆ ಇತ್ತೀಚೆಗೆ ಆಗಿದೆ.ಹೇಳಿದ್ದನ್ನೇ ಪದೇ ಪದೇ ಹೇಳುವ ಅಪ್ಪ, ಅಮ್ಮ, ಅತ್ತೆಯರಿಗೆ ಈ ಕಥೆಯನ್ನು ಈ ಮೊದಲೇ ಹೇಳಿದ್ರಿ ಎಂದು ಹೇಳಿ ಅವರ ನೆನಪುಗಳ ಮೆರವಣಿಗೆಗೆ ರಸಭಂಗ ಮಾಡುವುದಿಲ್ಲ.. ಇಷ್ಟು ವಯಸ್ಸಾದರೂ ನನ್ನೊಂದಿಗೆ ಅವರು ಇದ್ದಾರಲ್ಲ ಎಂಬ ತೃಪ್ತಿಯೇ ಸಾಕು ನನಗೆ. ಅವರ ನೆನಪಿನ ಕೋಣೆಯೊಳಗೆ ಇನ್ನೆಷ್ಟು ಮುತ್ತು ರತ್ನಗಳು ಇವೆಯೋ ಎಂಬುದು ನನಗೆ ಗೊತ್ತಿಲ್ಲ.. ಧಾವಂತದಿಂದ ಓಡಿ ಹೋಗಲು ನನಗೇನು ಆಫೀಸು ಕಾದು ಕುಳಿತಿಲ್ಲ ಅಲ್ಲವೇ!?ಮನೆಯ ಮುಂದೆ ತರಕಾರಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿಶ್ಚಿತ ಪಿಂಚಣಿ (OPS) ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಗಳಿಗೆ ಪತ್ರರಾಜ್ಯ ಸರ್ಕಾರಿ NPS ನೌಕರರ ಸಂಘ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ನೀಡುವಂತೆ ಆಗ್ರಹಿಸಿ ತಾಲೂಕಿನ ನೌಕರರು ಮುಖ್ಯ ಮಂತ್ರಿಗಳಿಗೆ ಪತ್ರ ಚಳುವಳಿ ಪ್ರಾರಂಭಿಸಿದ್ದಾರೆ.ಈ ವೇಳೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಎರಡೂ ವರ್ಷಗಳು ಕಳೆದರೂ ಇನ್ನೂ ಕೊಟ್ಟ ಮಾತಿನಂತೆ ನಡೇದಕೊಳ್ಳದ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಇಡೀ ರಾಜ್ಯಾದ್ಯಂತ ಓಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಹಾಕುವುದರ ಮುಖಾಂತರ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಖ್ಯಾತ ಸಮಾಜ ಸೇವಕ ಸಿದ್ಧರಾಮಪ್ಪ ಉಪ್ಪಿನ ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಮಾಜಿ ಸಚಿವ ಡಾ.ಶ್ಯಾಮನೂರ ಶಿವಶಂಕರಪ್ಪ ಅವರು ಅಧ್ಯಕ್ಷರಾಗಿರುವ ಈ ಮಹಾಸಭೆಯ ಉಪಾಧ್ಯಕ್ಷರಾಗಿ ಸಿದ್ಧರಾಮಪ್ಪ ಉಪ್ಪಿನ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಾಲೆಯಿಂದ ಶಾಲಾ ಮಕ್ಕಳನ್ನು ಇಳಿಸಲು ಹೊರಟಿದ್ದ ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಸೇರಿದ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಆಲಮಟ್ಟಿ ಡ್ಯಾಂಸೈಟ್ – ನಿಡಗುಂದಿ ರಸ್ತೆಯ ಮಧ್ಯದ ಮರಿಮಟ್ಟಿಯ ಹನುಮಂತ ದೇವಸ್ಥಾನದ ಬಳಿ ಗುರುವಾರ ಸಂಜೆ ಜರುಗಿದೆ.ಮೃತ ಬೈಕ್ ಸವಾರ ಅಂಗಡಗೇರಿ ಗ್ರಾಮದ ಭೀಮಪ್ಪ ಪರಸಪ್ಪ ತಳವಾರ (೨೭) .ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಆಲಮಟ್ಟಿ ಡ್ಯಾಂಸೈಟ್ ನತ್ತ ತೆರಳುತ್ತಿದ್ದ ಬಸ್ ಗೆ ಆಲಮಟ್ಟಿಯಿಂದ ನಿಡಗುಂದಿ ಕಡೆಗೆ ಹೊರಟಿದ್ದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಲಾ ಮಕ್ಕಳಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
