ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಪ್ರೈವೆಟ್ ಲಿ. ತನ್ನ ಸಿ.ಎಸ್.ಆರ್. 5ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದು, ನಾಳೆ ದಿ.25 ಶನಿವಾರ ಸಚಿವ ಎಂ.ಬಿ.ಪಾಟೀಲ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಮದಾಪುರ ಗ್ರಾಮದಲ್ಲಿ ರೂ. 3.5 ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಕಟ್ಟಡವು ಒಟ್ಟು 12 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ 8 ತರಗತಿ ಕೊಠಡಿಗಳು, ಸಿಬ್ಬಂದಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಪ್ರಾಚಾರ್ಯರ ಮತ್ತು ಶಿಕ್ಷಕರ ಕೋಣೆಗಳನ್ನು ಹೊಂದಿವೆ ಹಾಗೂ ಕಣಮುಚನಾಳ ಗ್ರಾಮದಲ್ಲಿ ರೂ. 1.5 ಕೋಟಿ ಅನುದಾನದಲ್ಲಿ ನಿರ್ಮಾಣವಾಗುವ ಸರಕಾರಿ ಪ್ರೌಢ ಶಾಲೆ ನೂತನ ಕಟ್ಟಡವು ಎರಡು ತರಗತಿ ಕೋಣೆಗಳು, ಸಿಬ್ಬಂದಿ ಕೋಣೆ, ಊಟದ ಕೊಠಡಿ, ಅಡುಗೆ ಕೋಣೆ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡಿವೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.