ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಶಾಲೆಯಿಂದ ಶಾಲಾ ಮಕ್ಕಳನ್ನು ಇಳಿಸಲು ಹೊರಟಿದ್ದ ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಸೇರಿದ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಆಲಮಟ್ಟಿ ಡ್ಯಾಂಸೈಟ್ – ನಿಡಗುಂದಿ ರಸ್ತೆಯ ಮಧ್ಯದ ಮರಿಮಟ್ಟಿಯ ಹನುಮಂತ ದೇವಸ್ಥಾನದ ಬಳಿ ಗುರುವಾರ ಸಂಜೆ ಜರುಗಿದೆ.
ಮೃತ ಬೈಕ್ ಸವಾರ ಅಂಗಡಗೇರಿ ಗ್ರಾಮದ ಭೀಮಪ್ಪ ಪರಸಪ್ಪ ತಳವಾರ (೨೭) .
ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಆಲಮಟ್ಟಿ ಡ್ಯಾಂಸೈಟ್ ನತ್ತ ತೆರಳುತ್ತಿದ್ದ ಬಸ್ ಗೆ ಆಲಮಟ್ಟಿಯಿಂದ ನಿಡಗುಂದಿ ಕಡೆಗೆ ಹೊರಟಿದ್ದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಮಕ್ಕಳಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.