ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಧಿಕಾರ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ. ಬಟ್ಟೆ ಮುಳ್ಳಿನ ಮೇಲೆ ಬಿದ್ದರು ಹರಿಯುತ್ತದೆ ಬಟ್ಟೆಯ ಮೇಲೆ ಮುಳ್ಳು ಬಿದ್ದರು ಕೂಡಾ ಹರಿಯುತ್ತದೆ. ಅದಕ್ಕೆ ಅಧಿಕಾರವಿದ್ದಾಗ ಪರೋಪಕಾರಿ ಕಾರ್ಯ ಮಾಡಿದಾಗ ಮಾತ್ರ ಹುದ್ದೆ ಅಲಂಕರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.
ಬ.ಬಾಗೇವಾಡಿಯ ಪಿಕಾರ್ಡ ಬ್ಯಾಂಕಿನ್ ಉಪಾದ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರಣ ನಿಮ್ಮ ಆಯ್ಕೆಗೆ ಸಹಕರಿಸಿದ ಶಾಸಕರಿಗೆ ಯಾವುದೇ ರೀತಿಯ ಚ್ಯೂತಿ ಬರದ ಹಾಗೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಿಂದಗಿ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕ, ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ ಬಹುದಿನಗಳಿಂದ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಹಿನ್ನಲೆಯಲ್ಲಿ ಇಂದು ಪಿಕಾರ್ಡ ಬ್ಯಾಂಕಿನ್ ಉಪಾದ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಬೈರೊಡಗಿಯ ಸಾಹೇಬಗೌಡ ಉತ್ನಾಳ ಅವರಿಗೆ ಇನ್ನೂ ಹೆಚ್ಚಿನ ಹುದ್ದೆಗಳು ಲಭಿಸಲಿ ಹಾರೈಸಿದರು.
ಈ ವೇಳೆ ಸನ್ಮಾನ ಸ್ವೀಕರಿಸಿದ ಪಿಕಾರ್ಡ ಬ್ಯಾಂಕಿನ್ ನೂತನ ಉಪಾದ್ಯಕ್ಷ ಸಾಹೇಬಗೌಡ ಉತ್ನಾಳ ಮಾತನಾಡಿ, ಹಲವಾರು ವರ್ಷಗಳಿಂದ ಶಾಸಕ ರಾಜುಗೌಡ ಪಾಟೀಲ ಅವರ ಕಟ್ಟಾಭಿಮಾನಿಯಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಪಿಎಲ್‌ಡಿ ಬ್ಯಾಂಕಿನ ಉಪಾದ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ತಾಲೂಕಿನಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದ ಶಾಸಕರಿಗೆ ಹಾಗೂ ಅಭಿಮಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಮಾರಂಭದಲ್ಲಿ ಉದ್ದಿಮೆದಾರ ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಂಕರಗೌಡ ಬಿರಾದಾರ, ಶಿವು ಉತ್ನಾಳ ಸೇರಿದಂತೆ ಅನೇಕರಿದ್ದರು.